ಗುಜರಾತ್‌ನಲ್ಲಿ ಸಾಕಷ್ಟು ಪ್ರಾಕೃತಿಕ ಅನಾಹುತ ಸೃಷ್ಟಿಸಿದ ಬಳಿಕ ವಾಯುಭಾರ ಕುಸಿತವಾಗಿ ಬದಲಾಗಿರುವ ಬಿಪೊರ್‌ಜೊಯ್‌ ಚಂಡಮಾರುತ, ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದರೆ, ಉತ್ತರ ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಸಿದೆ.

ಜೈಪುರ/ಅಹಮದಾಬಾದ್‌: ಗುಜರಾತ್‌ನಲ್ಲಿ ಸಾಕಷ್ಟು ಪ್ರಾಕೃತಿಕ ಅನಾಹುತ ಸೃಷ್ಟಿಸಿದ ಬಳಿಕ ವಾಯುಭಾರ ಕುಸಿತವಾಗಿ ಬದಲಾಗಿರುವ ಬಿಪೊರ್‌ಜೊಯ್‌ ಚಂಡಮಾರುತ, ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದರೆ, ಉತ್ತರ ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಸಿದೆ.

ಶುಕ್ರವಾರ ಸಂಜೆ ರಾಜಸ್ಥಾನ ಪ್ರವೇಶ ಮಾಡಿದ್ದ ಬಿಪೊರ್‌ಜೊಯ್‌ ಚಂಡಮಾರುತ ಕಳೆದ 3 ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆ ಸುರಿಸುತ್ತಿದ್ದು, ಜಲೋರ್‌, ಸಿರೋಹಿ ಮತ್ತು ಬಾಢ್ಮೇರ್‌ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು(NDRF) ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಪಾಲಿ ಜಿಲ್ಲೆಯಲ್ಲಿ ನೀರಿನಲ್ಲಿ ಸಿಕ್ಕಿಬಿದ್ದಿದ್ದ 6 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ. ಆದರೆ ಇದುವರೆಗೆ ರಾಜ್ಯದಲ್ಲಿ ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ: ಕರಾವಳಿಯಲ್ಲಿಯೂ ಆತಂಕ

ಈ ನಡುವೆ ಬಿಪೊರ್‌ಜೊಯ್‌ನ (BiporJoy) ಪರಿಣಾಮಗಳು ಉತ್ತರ ಗುಜರಾತ್‌ನ (Gujarat) ಎರಡು ಜಿಲ್ಲೆಗಳಲ್ಲಿ ಇನ್ನೂ ತನ್ನ ಪ್ರಭಾವ ಮುಂದುವರೆಸಿದೆ. ಬನಾಸ್‌ಕಂಠಾ ಮತ್ತು ಪಾಟಣ್‌ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆ ಸುರಿದಿದೆ. ಬನಸ್‌ಕಂಠಾ ಜಿಲ್ಲೆಯ ಅಮೀರ್‌ಗಢ ತಾಲೂಕಿನಲ್ಲಿ 24 ಗಂಟೆ ಅವಧಿಯಲ್ಲಿ 20.6 ಸೆ.ಮೀ, ದಂತಾ, ಧನೇರಾ ತಾಲೂಕಿನಲ್ಲಿ ಕ್ರಮವಾಗಿ 16.8, 16.4 ಸೆ.ಮೀ ಪೊಸಿನಾದಲ್ಲಿ 15.1 ಸೆ.ಮೀ, ದಂತೀವಾಡಾದಲ್ಲಿ 15 ಸೆ.ಮೀ.,ಪಾಲನ್‌ಪುರದಲ್ಲಿ 13.6 ಸೆ.ಮೀ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಪೋರ್‌ಜಾಯ್ ಸೈಕ್ಲೋನ್‌ ಎಫೆಕ್ಟ್ ಉಡುಪಿಯಲ್ಲಿ ಉತ್ತಮ ಮಳೆ