ಬಿಪರ್ ಜಾಯ್ ಎಫೆಕ್ಟ್: : ಗುಜರಾತ್ ನಲ್ಲಿ ಭಾರೀ ಆಸ್ತಿ ನಷ್ಟ: ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ

ಬಿಪರ್‌ ಜಾಯ್ ಚಂಡಮಾರುತದಿಂದ ಗುಜರಾತ್‌ನಲ್ಲಿ ಭಾರಿ ಆಸ್ತಿ ನಷ್ಟವಾಗಿದೆ ಎಂಬ ವರದಿಯ ಹಿನ್ನೆಲೆ ಬೆಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Bipar Joy effect Heavy loss of property in Gujarat Prime Minister Modi got the information from gujarat cm early in the morning akb

ಅಹ್ಮದಾಬಾದ್: ಬಿಪರ್‌ ಜಾಯ್ ಚಂಡಮಾರುತದಿಂದ ಗುಜರಾತ್‌ನಲ್ಲಿ ಭಾರಿ ಆಸ್ತಿ ನಷ್ಟವಾಗಿದೆ ಎಂಬ ವರದಿಯ ಹಿನ್ನೆಲೆ ಬೆಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಗುಜರಾತ್ ಸಿಎಂಗೆ ಫೋನ್ ಕರೆ ಮಾಡಿದ ಪ್ರಧಾನಿ ಮೋದಿ, ಸಿಎಂ ಭೂಪೇಂದ್ರ ಪಟೇಲ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸೈಕ್ಲೋನ್ ಭೂಕುಸಿತ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ  ಗುಜರಾತ್ ಸಿಎಂರಿಂದ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ.

ಬಿಪರ್ ಜಾಯ್ ಚಂಡಮಾರುತದ ಕಾರಣಕ್ಕೆ ಈಗಾಗಲೇ  ಕಡಲತೀರದ ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಗುಜರಾತ್ ಕಡಲತೀರದ ಜನರನ್ನು ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ದೇವಭೂಮಿ ದ್ವಾರಕದಲ್ಲಿ ಮೂವರಿಗೆ ಗಾಯಗಳಾಗಿರುವ ವರದಿ ಆಗಿದೆ. ಕೆಲ ಜಿಲ್ಲೆಗಳಲ್ಲಿ  ಜಿಲ್ಲಾಡಳಿತ ಇಂದು ಕೂಡ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.  940 ಗ್ರಾಮಗಳಲ್ಲಿ ಚಂಡ ಮಾರುತದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.  ಹಲವು ವಿದ್ಯುತ್ ಕಂಬಗಳು ಮರಗಳು ನೆಲಕ್ಕುರುಳಿವೆ. ಇನ್ನು ಮೂರು ದಿನಗಳ ಕಾಲ ಗುಜರಾತ್‌ನಲ್ಲಿ ಮಳೆಯಾಗುವ ನಿರೀಕ್ಷೆ ಇದೆ. 

ಬಿರು​ಗಾಳಿ ಹೊಡೆ​ತಕ್ಕೆ ಬಿದ್ದ ಮರ​ಗಳು, ಲೈಟು ಕಂಬ​ಗ​ಳು

ಗುಜ​ರಾ​ತ್‌ಗೆ ಬಿಪೊ​ರ್‌​ಜೊಯ್‌ ಚಂಡ​ಮಾ​ರುತ ಅಪ್ಪಳಿ​ಸು​ತ್ತಿ​ದ್ದಂತೆಯೇ ಭಾರಿ ಬಿರು​ಗಾ​ಳಿ​ಯೊಂದಿಗೆ ಮಳೆ ಸುರಿ​ಯು​ತ್ತಿದ್ದು, ಅಲ್ಲಲ್ಲಿ ಮರ​ಗಿ​ಡ​ಗಳು ಬುಡ​ಮೇ​ಲಾ​ಗುವ ಹಾಗೂ ವಿದ್ಯುತ್‌ ಕಂಬ​ಗಳು ಧರೆ​ಗು​ರು​ಳಿದ ಘಟ​ನೆ​ಗಳು ನಡೆ​ದಿ​ವೆ.  ಕಛ್‌ ಹಾಗೂ ಸೌರಾ​ಷ್ಟ್ರದಲ್ಲಿ ಭಾರಿ ಮಳೆ ಸುರಿ​ಯು​ತ್ತಿದೆ. ದೇವ​ಭೂಮಿ ದ್ವಾರ​ಕಾ​ದಲ್ಲಿ ಮರ ಬಿದ್ದು, ಮೂವ​ರಿಗೆ ಗಾಯ​ಗ​ಳಾ​ಗಿ​ವೆ. ಜಖಾವು ಬಂದರು ಹಾಗೂ ಮಾಂಡ​ವಿ​ಯಲ್ಲಿ ಕೂಡ ಬಿರು​ಗಾ​ಳಿಯ ಹೊಡೆ​ತಕ್ಕೆ ತಗ​ಡಿನ ಶೀಟು​ಗಳು ಹಾಗೂ ಪ್ಲಾಸ್ಟಿಕ್‌ ಶೆಡ್‌​ಗಳು ಹಾರಿ ಹೋಗಿವೆ. ಇದರ ಬೆನ್ನಲ್ಲೇ ಎನ್‌​ಡಿ​ಆ​ರ್‌​ಎಫ್‌(NDRF), ಎಸ್‌​ಡಿ​ಆರ್‌ಎಫ್‌ (SDRF) ತಂಡ​ಗಳು ಸಂತ್ರ​ಸ್ತ​ರನ್ನು ಸುರ​ಕ್ಷಿತ ಸ್ಥಳ​ಕ್ಕೆ ಕರೆ​ದೊ​ಯ್ಯು​ವಲ್ಲಿ ಹಾಗೂ ರಸ್ತೆ​ಗ​ಳ ಮೇಲೆ ಬಿದ್ದ ಮರ ತೆರವು ಮಾಡು​ವ​ಲ್ಲಿ ನಿರ​ತ​ವಾ​ಗಿ​ವೆ. ವಿದ್ಯುತ್‌ ಇಲಾಖೆ ಸಿಬ್ಬಂದಿ ವಿದ್ಯುತ್‌ ವ್ಯವಸ್ಥೆ ಸರಿ​ಪ​ಡಿ​ಸಲು ಶ್ರಮಿ​ಸು​ತ್ತಿ​ದ್ದಾ​ರೆ.

Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು

 ಜಟಾಕು ಬಂದರಿಗೆ ಅಪ್ಪಳಿಸಿದ ಬಿಪರ್‌ಜಾಯ್
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್‌ಜೊಯ್‌ ಚಂಡಮಾರುತ ಗುರುವಾರ ಸಂಜೆ 6.30ರ ಸುಮಾ​ರಿ​ಗೆ ಗುಜರಾತ್‌ನ ಕಛ್‌ ಬಳಿ ಇರುವ ಜಟಾಕು ಬಂದರಿಗೆ ಅಪ್ಪಳಿಸಿತ್ತು. ಸುಮಾರು 10 ದಿನಗಳ ಕಾಲ ಅರಬ್ಬೀ ಸಮುದ್ರದಲ್ಲಿ ಸಂಚರಿಸಿದ್ದ ಚಂಡಮಾರುತ ಇದೇ ಮೊದಲ ಬಾರಿಗೆ ಭೂಭಾಗಕ್ಕೆ ಅಪ್ಪಳಿಸಿದೆ. ಚಂಡಮಾರುತದಿಂದ ಉಂಟಾಗಿರುವ ಗಾಳಿಯಿಂದ ಗಂಟೆಗೆ ಸುಮಾರು 145 ಕಿ.ಮೀ. ವೇಗದಲ್ಲಿ ಚಂಡಮಾರುತ ಸಾಗುತ್ತಿದ್ದು,  ಕಛ್‌ ಮತ್ತು ಸೌರಾಷ್ಟ್ರ (Sourashtra) ಕಡಲತೀರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೈ ಅಲರ್ಟ್‌ ಘೋಷಿಸಲಾಗಿದೆ.

ಈ ಚಂಡಮಾರುತ ಸುಮಾರು 50 ಕಿ.ಮೀ. ವ್ಯಾಸವನ್ನು ಹೊಂದಿದ್ದು, ಇನ್ನೂ 1 ದಿನ ಚಂಡಮಾರುತ ಸಾಗುವ ಹಾದಿಯಲ್ಲಿ ಭಾರಿ ಮಳೆಯಾಗಲಿದೆ. ಕಛ್‌ನಲ್ಲಿ 20.5 ಸೆಂ.ಮೀ., ದ್ವಾರಕಾ, ಜಾಮ್‌ನಗರ, ಪೋರಬಂದರ್‌, ರಾಜ್‌ಕೋಟ್‌, ಮೋರ್ಬಿ ಮತ್ತು ಜುನಾಗಢ ಜಿಲ್ಲೆಗಳಲ್ಲಿ 11.5ರಿಂದ 20.4 ಸೆಂ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸುಮಾರು 145 ಕಿ.ಮೀ.ವೇಗದಲ್ಲಿ ಸಾಗಿಬಂದ ಚಂಡ​ಮಾ​ರುತ ಮಧ್ಯ​ರಾತ್ರಿ ವೇಳೆ ತನ್ನ ಅಪ್ಪ​ಳಿ​ಸು​ವಿ​ಕೆ​ಯನ್ನು ಸಂಪೂ​ರ್ಣ​ಗೊ​ಳಿ​ಸಿ​ತು.

ಗುಜರಾತ್‌ ತೀರಕ್ಕೆ ಅಪ್ಪಳಿಸಿದ ಬಿಪರ್‌ ಜಾಯ್: ಮಾಂಡವಿ ಬೀಚ್‌ ಆಪೋಶನ ತೆಗೆದುಕೊಂಡ ಚಂಡಮಾರುತ

Latest Videos
Follow Us:
Download App:
  • android
  • ios