Asianet Suvarna News Asianet Suvarna News

ಕೆಂಪು ರಾಷ್ಟ್ರದ ಕಪಟ ಬುದ್ಧಿ: 'ಚೀನಾದಿಂದ ಹಗೆ ಸಾಧಿಸಲು ಜೈವಿಕ ಅಸ್ತ್ರ'

*  ಕೋವಿಡ್‌ ಸಂದರ್ಭದಲ್ಲಿ ಚೀನಾದಿಂದ ಅವಕಾಶವಾದಿತನ ಪ್ರದರ್ಶನ
*  ಭಾರತ ನಾಜೂಕಿನ ಹೆಜ್ಜೆ ಇರಿಸಬೇಕು: ನಿವೃತ್ತ ವಾಯುಪಡೆ ಅಧಿಕಾರಿ
*  3 ದಿನಗಳ ಶೃಂಗಸಭೆಗೆ ತೆರೆ
 

Bio Weapon on India from China for Achieve Hostility Says Anil Khosla grg
Author
Bengaluru, First Published Oct 25, 2021, 8:48 AM IST

ಬೆಂಗಳೂರು(ಅ.25):  ಇಂದಿನ ಯುದ್ಧೋನ್ಮಾದದ ಪರಿಸ್ಥಿತಿಯಲ್ಲಿ ಬರೀ ಮಿಲಿಟರಿ(Military) ಮಾತ್ರವಲ್ಲ, ಪ್ರತಿಯೊಂದು ಯುದ್ಧದ(War) ಉಪಕರಣವಾಗಿ ಬದಲಾಗಿದೆ. ಯುದ್ಧದ ಈ ಹೊಸ ಮಾದರಿಯಲ್ಲಿ ಚೀನಾ ಪರಿಣತಿ ಸಾಧಿಸಿದೆ. ಸಾಂಕ್ರಾಮಿಕವನ್ನೇ ಚೀನಾ ‘ಜೈವಿಕ ಅಸ್ತ್ರ’ವನ್ನಾಗಿ ಮಾಡಿಕೊಂಡಿದೆ ಎಂದು ನಿವೃತ್ತ ಏರ್‌ ಮಾರ್ಷಲ್‌ ಅನಿಲ್‌ ಖೋಸ್ಲಾ(Anil Khosla) ಹೇಳಿದ್ದಾರೆ.

ಯಲಹಂಕ ವಾಯುನೆಲೆಯಲ್ಲಿ(Air Base) ಬಾಂಗ್ಲಾ ವಿಮೋಚನಾ ಸಮರದ(Bangladesh Liberation War) ಐವತ್ತನೇ ವರ್ಷಾಚರಣೆಯ ಅಂಗವಾಗಿ ನಡೆದ ಸುವರ್ಣ ವಿಜಯ ವರ್ಷಾಚರಣೆಯ ಭಾಗವಾಗಿ ಆಯೋಜಿಸಿದ ಶೃಂಗಸಭೆಯಲ್ಲಿ(Summit) ಉದಯವಾಗುತ್ತಿರುವ ವಿಶ್ವ(World) ಸ್ತರದಲ್ಲಿ ಭಾರತದ(India) ನಿರೀಕ್ಷೆಗಳು ಎಂಬ ವಿಚಾರಗೋಷ್ಠಿಯಲ್ಲಿ ‘ಬದಲಾಗುತ್ತಿರುವ ಜಾಗತಿಕ ಸನ್ನಿವೇಶ: ಬಹುಪಕ್ಷೀಯತೆ ಮತ್ತು ನಮ್ಯ ಭದ್ರತಾ ಸಹಕಾರ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

Bio Weapon on India from China for Achieve Hostility Says Anil Khosla grg

ಮಾಹಿತಿ, ಆರ್ಥಿಕತೆಗಳ ಮೂಲಕ ಯುದ್ಧ ಸಾರುವುದರ ಜೊತೆಗೆ ಇತ್ತೀಚಿನ ಕೋವಿಡ್‌(Covid19) ಸಾಂಕ್ರಾಮಿಕವು ಜೈವಿಕ ಯುದ್ಧ(Biological War)ಎಷ್ಟು ಪರಿಣಾಮಕಾರಿಯಾಗಿರಲಿದೆ ಎಂಬುದನ್ನು ಸಾಬೀತುಪಡಿಸಿದೆ. ಚೀನಾವು(China) ಯಾವುದೇ ನಾಚಿಕೆಯಿಲ್ಲದೆ ತನ್ನ ಅವಕಾಶವಾದಿ ಬುದ್ಧಿ ತೋರಿಸಿದೆ. ವಾಸ್ತವವಾಗಿ ಕೋವಿಡ್‌ ಸಾಂಕ್ರಾಮಿಕದ ಹಬ್ಬುವಿಕೆಯು ಜೈವಿಕ ಪಲ್‌ರ್‍ ಹಾರ್ಬರ್‌ (ಜಪಾನ್‌ ಅಮೆರಿಕಕ್ಕೆ ಸೇರಿದ ಪಲ್‌ರ್‍ ಹಾರ್ಬರ್‌ ಬಂದರಿನ ಮೇಲೆ ದಾಳಿ ನಡೆಸಿದ್ದರಿಂದ ಅಮೆರಿಕ ಎರಡನೇ ವಿಶ್ವಯುದ್ಧಕ್ಕೆ ಪ್ರವೇಶಿಸಿತು) ಎಂದು ಖೋಸ್ಲಾ ಬಣ್ಣಿಸಿದ್ದಾರೆ.

ಕೊರೋನಾ: ಇದು ಉದ್ಭವಿಸಿದ ವೈರಸ್‌ ಅಲ್ಲ, ಚೀನಾ ಸೃಷ್ಟಿಸಿದ ರೋಗ!

ಚೀನಾ ಅಮೆರಿಕದ(America) ಜೊತೆಗೆ ಸ್ಪರ್ಧೆಗೆ ಇಳಿದಿದೆ. ಆದ್ದರಿಂದ ನಾವು ಅತ್ಯಂತ ನಾಜೂಕಿನ ಹೆಜ್ಜೆ ಇಡಬೇಕು. ಪೂರ್ವ ಮತ್ತು ಪಶ್ಚಿಮದ ದೇಶಗಳ ಜೊತೆಗಿನ ನಮ್ಮ ಸಂಬಂಧವನ್ನು ಸಮತೋಲನಗೊಳಿಸಬೇಕು. ನಮ್ಮ ನೆರೆಯ ದೇಶಗಳಲ್ಲಿನ ಹಿರಿಯರಿಗೆ ಚೀನಾದಿಂದ ಆಗಬಹುದಾದ ಅಪಾಯದ ಅರಿವಿದೆ. ಆದರೆ ಯುವ ಜನಾಂಗ ಚೀನಾದ ಬಗ್ಗೆ ಒಲವು ಹೊಂದಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಮ್ಮ ನೆರೆಯ ದೇಶಗಳ ಜೊತೆಗೆ ಮಿಲಿಟರಿ ಕವಾಯತ್ತು ನಡೆಸಬೇಕು ಎಂದು ಖೋಸ್ಲಾ ಹೇಳಿದ್ದಾರೆ.

ಬೌದ್ಧ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ:

ಭಾರತದ ಸುತ್ತಲೂ ಬೌದ್ಧ ದೇಶಗಳು(Buddhist Countries) ಹೆಚ್ಚಿವೆ. ಈ ದೇಶಗಳಿಗೆ ಭಾರತ ಬುದ್ಧನ(Buddha) ದೇಶ ಎಂಬ ಅಪಾರ ಗೌರವವಿದೆ. ಇದನ್ನು ಬಳಸಿಕೊಂಡು ನಾವು ಬೌದ್ಧ ಪ್ರವಾಸೋದ್ಯಮವನ್ನು(Buddhist Tourism) ಅಭಿವೃದ್ಧಿ ಪಡಿಸಬೇಕು ಎಂದು ಈ ವಿಚಾರಗೋಷ್ಠಿಯಲ್ಲಿ ಪ್ರಾದೇಶಿಕ ಭದ್ರತಾ(Security) ಕಳವಳ ವಿಷಯದ ಬಗ್ಗೆ ಮಾತನಾಡಿದ ಮಾಜಿ ರಾಜತಾಂತ್ರಿಕ ಜಿ. ಪಾರ್ಥಸಾರಥಿ ಅಭಿಪ್ರಾಯಪಟ್ಟರು.

3 ದಿನಗಳ ಶೃಂಗಸಭೆಗೆ ತೆರೆ

ಬಾಂಗ್ಲಾ ವಿಮೋಚನಾ ಸಮರಕ್ಕೆ ಐವತ್ತು ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ(Indian Air Force) ಯಲಹಂಕ ವಾಯುನೆಲೆಯಲ್ಲಿ ಮೂರು ದಿನಗಳ ಕಾಲ ವಾಯುಪಡೆ ಆಯೋಜಿಸಿದ್ದ ಶೃಂಗಸಭೆ ಡ್ರೋನ್‌ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಸುವುದರೊಂದಿಗೆ ಮುಕ್ತಾಯಗೊಂಡಿತು.

ಕಳೆದ ಮೂರು ವರ್ಷಗಳಿಂದ ವಿವಿಧ ಹಂತದಲ್ಲಿ ನಡೆದ ಡ್ರೋನ್‌ ಸ್ಪರ್ಧೆಯಲ್ಲಿ ವಿಜೇತರಾದ ನ್ಯೂಸ್ಪೇಸ್‌ ರಿಸರ್ಚ್‌ ಮತ್ತು ಟೆಕ್ನಾಟಜಿಸ್‌, ದಕ್ಷ ಅನ್‌ಮ್ಯಾನ್ಡ್‌ ಸಿಸ್ಟಮ್ಸ್‌, ಟೀಮ್‌ ಡೆಲ್ಲಿ ಟೆಕ್ನಾಲಜಿಕಲ್‌ ಯುನಿವರ್ಸಿಟಿ -ಫ್ಲೇರ್‌ ಅನ್‌ ಮ್ಯಾನ್ಡ್‌ ಸಿಸ್ಟಮ್ಸ್‌ ಗೆ ಐಎಎಫ್‌ ಮೆಹರ್‌ ಬಾಬಾ ಪ್ರಶಸ್ತಿಯನ್ನು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಪ್ರದಾನ ಮಾಡಿದರು. ಇದೇ ವೇಳೆ ಅತ್ಯುತ್ತಮ ವಿನ್ಯಾಸಕ್ಕಾಗಿನ ಪ್ರಶಸ್ತಿಯನ್ನು ವೇದಾ ಡಿಫೆನ್ಸ್‌ ಸಿಸ್ಟಮ್ಸ್‌ ಪಡೆದುಕೊಂಡಿತು.

ವಿಜೇತ ಡ್ರೋನ್‌ಗಳಿಂದ(Drone) ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ನಡೆಯಿತು. ಡ್ರೋನ್‌ಗಳು ನಿಗದಿತ ಗುರಿಯ ಪ್ರದೇಶಕ್ಕೆ ತೆರಳಿ ಅಲ್ಲಿ ಗುರಿಯನ್ನು ಪತ್ತೆ ಹಚ್ಚಿ ಅದರ ಮೇಲೆ ದಾಳಿ ನಡೆಸಿ ಧ್ವಂಸ ಮಾಡುವ ಪ್ರದರ್ಶನ ನೀಡಿದವು. ಒಟ್ಟು 154 ಡ್ರೋನ್‌ ನಿರ್ಮಾಣ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
 

Follow Us:
Download App:
  • android
  • ios