Asianet Suvarna News Asianet Suvarna News

ಗಡಿ ಭಾಗದ ಅರಣ್ಯದಲ್ಲಿ ನಿರ್ಮಾಣಕ್ಕೆ ಅವಕಾಶದ ಮಸೂದೆ ಅಂಗೀಕಾರ

ಗಡಿ ಭಾಗದ ಅರಣ್ಯದಲ್ಲಿ ನಿರ್ಮಾಣಕ್ಕೆ ಅವಕಾ ನೀಡುವ  ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಮತ್ತೊಂದೆಡೆ ಮಧ್ಯಪ್ರದೇಶ ಕಾಂಗ್ರೆಸ್ ಚುನಾವಣಾ ಹೊಸ್ತಿಲಲ್ಲಿ ರೈತರಿಗೆ ಬಂಪರ್ ಆಫರ್ ನೀಡಿದೆ, ಸಾಲಮನ್ನಾ ಹಾಗೂ ವಿದ್ಯುತ್ ಬಿಲ್ ಬಾಕಿ ಮನ್ನಾದ ಭರವಸೆ ನೀಡಿದೆ.

Bill passed to allow construction in border forest and Madhya pradesh congress bumper offer to farmers Free electricity, waiver of loan and electricity dues akb
Author
First Published Jul 27, 2023, 9:51 AM IST

ನವದೆಹಲಿ: ದೇಶದಲ್ಲಿನ ಗಡಿಭಾಗಗಳಿಂದ ಸುಮಾರು 100 ಕಿ.ಮೀ ವ್ಯಾಪ್ತಿಯೊಳಗಿರುವ ಅರಣ್ಯ ಪ್ರದೇಶಗಳಲ್ಲಿ ಮೃಗಾಲಯಗಳು, ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮದಂತಹ ಇತರ ಯಾವುದೇ ವ್ಯವಸ್ಥೆಗಳನ್ನು ಸ್ಥಾಪಿಸಲು ಅನುಮತಿ ನೀಡುವ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ. ಗಡಿಯಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣಗಳನ್ನು ನಡೆಸುವಂತಿಲ್ಲ ಎಂಬ ಕಾನೂನನ್ನು ತಿದ್ದುಪಡಿಗೊಳಿಸಿ ಈ ಮಸೂದೆ ಅಂಗೀಕರಿಸಲಾಗಿದೆ. ಈ ಹಿಂದಿನ ನಿಯಮಗಳ ಅನ್ವಯ ರೈಲ್ವೆ ಮಾರ್ಗದುದ್ದಕ್ಕೂ ಇರುವ ಅರಣ್ಯ ಪ್ರದೇಶ, ಸರ್ಕಾರದ ನಿರ್ವಹಣೆಯಲ್ಲಿರುವ ಸಾರ್ವಜನಿಕ ರಸ್ತೆಗಳು ಮತ್ತು ವಸತಿ ಪ್ರದೇಶಗಳಿಗೆ ವಿನಾಯಿತಿ ನೀಡಲಾಗಿದ್ದು ಇವುಗಳಿಂದ 0.10 ಹೆಕ್ಟೇರ್‌ ಪ್ರದೇಶದ ವ್ಯಾಪ್ತಿಯೊಳಗೆ ಇಂಥಹ ನಿರ್ಮಾಣಗಳನ್ನು ಕೈಗೊಳ್ಳುವಂತಿರಲಿಲ್ಲ.

ರೈತರಿಗೆ ಉಚಿತ ವಿದ್ಯುತ್‌,  ರೈತರ ಸಾಲ, ವಿದ್ಯುತ್‌ ಬಾಕಿ ಮನ್ನಾ: ಕಾಂಗ್ರೆಸ್‌

ಭೋಪಾಲ್‌: ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಉಚಿತ ಘೋಷಣೆ ಸಮರ ಮುಂದುವರೆದಿದೆ. ತಾನು ಗೆದ್ದು ಅಧಿಕಾರಕ್ಕೆ ಬಂದರೆ, ರೈತರ ಸಾಲ ಮನ್ನಾ, ರೈತರಿಗೆ ಉಚಿತ ವಿದ್ಯುತ್‌, ರೈತರ ವಿದ್ಯುತ್‌ ಸಾಲದ ಬಾಕಿ ಮನ್ನಾ, ರೈತರಿಗೆ ನಿತ್ಯ 12 ಗಂಟೆಗಳ ತಡೆರಹಿತ ವಿದ್ಯುತ್‌ ನೀಡುವ ಘೋಷಣೆಯನ್ನು ಕಾಂಗ್ರೆಸ್‌ ಮಾಡಿದೆ. ಆಡಳಿತಾರೂಢ ಬಿಜೆಪಿ ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ 1000 ರು., ಕೃಷಿ ಸಮ್ಮಾನ್‌ ಯೋಜನೆ ಜೊತೆಗೆ ರೈತರಿಗೆ ವಾರ್ಷಕ್ಕೆ 2 ಬಾರಿ 2000 ರು., 500ರು.ಗೆ ಅಡುಗೆ ಅನಿಲ ನೀಡುತ್ತೇವೆ ಎಂದು ಘೋಷಣೆ ಮಾಡಿದೆ. ಇದೇ ವರ್ಷದ ನವೆಂಬರ್‌ನಲ್ಲಿ ರಾಜ್ಯದಲ್ಲಿ 230 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಕಾಡು ಜನರಿಗೆ ಜಮೀನು ನೀಡಲು ಕಾನೂನು ತಿದ್ದುಪಡಿ: ಸಿಎಂ ಬಸವರಾಜ ಬೊಮ್ಮಾಯಿ

ಮಲೆನಾಡಿಗರಿಗೆ ಮರಣ ಶಾಸನಗಳಾದ ಅರಣ್ಯ ಕಾಯ್ದೆಗಳು

Follow Us:
Download App:
  • android
  • ios