ಮಲೆನಾಡಿಗರಿಗೆ ಮರಣ ಶಾಸನಗಳಾದ ಅರಣ್ಯ ಕಾಯ್ದೆಗಳು

ರೈತರ ಮೇಲೆ ಬ್ರಿಟಿಷರ ಕಾಲದಿಂದಲೂ ನಿರಂತರವಾದ ದಬ್ಬಾಳಿಕೆ, ಶೋಷಣೆ, ದೌರ್ಜನ್ಯಗಳು ನಡೆಯುತ್ತಲೇ ಬಂದಿದೆ. ಕಠಿಣ ಕಾನೂನು ಕಾಯ್ದೆಗಳ ಮೂಲಕ ರೈತರ ಹಕ್ಕುಗಳನ್ನು ದಮನಗೊಳಿಸಿ, ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಾ ಬರಲಾಗಿದೆ.

Forest Acts as Death Statutes for malenadigas rav

ಶೃಂಗೇರಿ (ನ.10) : ಸರ್ಕಾರದ ರೈತವಿರೋಧಿ ನೀತಿಗಳು, ಅರಣ್ಯ ಕಾಯ್ದೆಗಳು ಮಲೆನಾಡಿಗರ ಬದುಕಿಗೆ ಮರಣ ಶಾಸನಗಳಾಗಿವೆ ಎಂದು ರೈತ ಮುಖಂಡ ಕಂಬಳಗೆರೆ ರಾಜೇಂದ್ರ ಹೇಳಿದರು. ಪಟ್ಟಣದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಆಯೋಜಿಸಿದ್ದ ಎಲೆಚುಕ್ಕಿ ರೋಗದ ವೈಜ್ಞಾನಿಕ ಪರಿಹಾರಕ್ಕಾಗಿ, ಭೂತಾನ್‌ ಸುಂಕರಹಿತ ಅಡಕೆ ಆಮದು ನೀತಿ ಖಂಡಿಸಿ ಸೆಕ್ಷನ್‌ 4(1) ರದ್ದು ಮಾಡಿ, ಭೂಮಿ ಹಾಗೂ ನಿವೇಶನಕ್ಕೆ ಒತ್ತಾಯಿಸಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಭ ಸಭೆಯಲ್ಲಿ ಮಾತನಾಡಿದರು.

ಯಡಿಯೂರಪ್ಪ ನೀಡಿರುವ ಸಲಹೆ ಪಾಲಿಸುತ್ತೇನೆ: ವಿಜಯೇಂದ್ರ

ರೈತರ ಮೇಲೆ ಬ್ರಿಟಿಷರ ಕಾಲದಿಂದಲೂ ನಿರಂತರವಾದ ದಬ್ಬಾಳಿಕೆ, ಶೋಷಣೆ, ದೌರ್ಜನ್ಯಗಳು ನಡೆಯುತ್ತಲೇ ಬಂದಿದೆ. ಕಠಿಣ ಕಾನೂನು ಕಾಯ್ದೆಗಳ ಮೂಲಕ ರೈತರ ಹಕ್ಕುಗಳನ್ನು ದಮನಗೊಳಿಸಿ, ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಾ ಬರಲಾಗಿದೆ. ಭೂಮಿಗಾಗಿ ಹೋರಾಡಿ ಸಾವಿರಾರು ರೈತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಮೈಸೂರು ಸಂಸ್ಥಾನದಲ್ಲಿಯೂ 1829ರಲ್ಲಿ ಸುಳ್ಯ ರೈತರ ದಂಗೆ, 1831 ನಗರ ದಂಗೆ, ಹೀಗೆ ರೈತರು ಸರ್ಕಾರದ ವಿರುದ್ಧ ದಂಗೆ ನಡೆಸಿದ್ದರು. ತಲೆತಲಾಂತರದಿಂದ ಕಾಡನ್ನು ಉಳಿಸಿಕೊಂಡು ಬಂದವರು ಅರಣ್ಯವಾಸಿಗಳು. ಅವರನ್ನೇ ಇಂದು ಒಕ್ಕಲೆಬ್ಬಿಸಲಾಗುತ್ತಿದೆ ಎಂದರು.

ಭೂಮಿ ನಮ್ಮದು. ಯಾವುದೇ ಇಲಾಖೆ, ಸರ್ಕಾರದ್ದಲ್ಲ. ಮನುಷ್ಯರು, ಕಾಡು ಒಟ್ಟಿಗೆ ಇರಬೇಕು. ಅರಣ್ಯಗಳು, ಪ್ರಾಣಿಗಳು ಬೇಕು, ಜೊತೆಗೆ ಮನುಷ್ಯನು ಬದುಕಬೇಕು. ವನ್ಯಜೀವಿಗಳ ಹೆಸರಲ್ಲಿ ಮನುಷ್ಯನ ಬದುಕನ್ನು ಕಸಿಯುವುದು ಸರಿಯಲ್ಲ. ಕಾಯ್ದೆಗಳು ಇರಬೇಕು, ಆದರೆ ಮನುಷ್ಯನ ಬದುಕಿಗೆ ಮಾರಕವಾಗಬಾರದು. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾಯ್ದೆಗಳನ್ನು ರೂಪಿಸಬೇಕು ಎಂದರು.

ಹಳದಿ ಎಲೆರೋಗ, ಎಲೆಚುಕ್ಕಿ ರೋಗಗಳು ರೈತರ ಬದುಕನ್ನು ನಾಶಮಾಡುತ್ತಿವೆ. ಆತಂಕದಲ್ಲಿದಲ್ಲಿರುವ ರೈತರಿಗೆ ಸೆಕ್ಷನ್‌ 4(1) ಸೇರಿದಂತೆ ಕಸ್ತೂರಿ ರಂಗನ್‌ ವರದಿ, ಹುಲಿ ಯೋಜನೆ, ಅರಣ್ಯ ಕಾಯ್ದೆಗಳು, ಸರ್ಕಾರದ ಜನವಿರೋಧಿ ನೀತಿಗಳು ರೈತರ ಬದುಕಿಗೆ ಮಾರಕವಾಗುತ್ತಿದೆ. ರೈತರ ಬದುಕು ಸಂಕಷ್ಟದಲ್ಲಿದ್ದರೂ ಸರ್ಕಾರಗಳು ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದಿಸದೇ ವಂಚಿಸುತ್ತಲೇ ಬಂದಿದೆ. ಮಲೆನಾಡಿನ ಉಳಿವಿಗಾಗಿ ಎಲ್ಲರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.

ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಮಲೆನಾಡಿಗೆ ದೊಡ್ಡ ಬೆಂಕಿಬಿದ್ದಿದೆ. ಅದನ್ನು ಆರಿಸದಿದ್ದರೆ ದೊಡ್ಡ ಗಂಡಾಂತರ ಎದುರಾಗಲಿದೆ. ಇಲ್ಲಿ ಅನೇಕ ಸಂಘಟನೆಗಳಿವೆ. ಆದರೆ ಸಮಸ್ಯೆಗಳ ಬಗ್ಗೆ ಹೋರಾಡಲು ಮುಂದಾಗುತ್ತಿಲ್ಲ. ರಾಜಕೀಯೇತರವಾಗಿ ಒಂದಾಗಿ ಹೋರಾಡುವ ಮನೋಭಾವನೆ ಇಲ್ಲದಿರುವುದು ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯವಾಗುತ್ತಿಲ್ಲ. ಹಳದಿ ಎಲೆರೋಗದಿಂದ ತತ್ತರಿಸಿರುವ ರೈತರು, ಇದೀಗ ಎಲೆಚುಕ್ಕಿ ರೋಗದಿಂದ ಕಂಗೆಟ್ಟಿದ್ದಾರೆ. 20 ವರ್ಷಗಳಿಂದ ರೈತರು ಸಮಸ್ಯೆಗಳಿಂದ ಆತಂಕದಲ್ಲಿದ್ದಾರೆ. 2002ರಲ್ಲಿ ಸುಪ್ರಿಂ ಕೋರ್ಚ್‌ ನೀಡಿರುವ ತೀರ್ಪು ಮಲೆನಾಡಿನ ಜನರ ಬದುಕಿಗೆ ಮರಣ ಗಂಟೆಯಾಗಿ ಪರಿಣಮಿಸುತ್ತಿದೆ. ಇದನ್ನು ಆಗಲೇ ಪ್ರಶ್ನಿಸಿದ್ದರೆ ಇಂತಹ ಪರಿಸ್ಥಿತಿ ಒದಗಿ ಬರುತ್ತಿರಲಿಲ್ಲ. ಇದುವರೆಗೂ ಯಾರು ಹಳದಿ ಎಲೆರೋಗದ ಬಗ್ಗೆ ಸಂಶೋಧನೆ ನಡೆಸಿಲ್ಲ. ಪರಿಹಾರ ಕಂಡುಹಿಡಿದಿಲ್ಲ. ವಿಜ್ಞಾನಿಗಳು, ಸರ್ಕಾರಗಳು ವಿಫಲವಾಗಿವೆ. ಈ ಭಾಗದ ಸಂಸದರು ಗಂಭೀರವಾಗಿ ಪರಿಗಣಿಸಿದರೆ ಕಷ್ಟವಲ್ಲ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಕೆ.ಎಲ್‌. ಅಶೋಕ್‌,ಆದಿವಾಸಿ ಗಿರಿಜನ ಸಂರಕ್ಷಣಾ ವೇದಿಕೆಯ ಮರಿಯಪ್ಪ, ರೈತ ಮುಖಂಡ ನವೀನ್‌ ಕರುವಾನೆ, ಹಾಗಲಗಂಚಿ ವೆಂಕಟೇಶ್‌, ಡಾ.ಗಣಪತಿ, ಸಂತೋಷ್‌ ಕಾಳ್ಯ, ನಟರಾಜ್‌, ಗಿರಿಜಾ, ಗೌಸ್‌ಮೊಯದ್ದೀನ್‌, ಯೋಗೀಶ್‌ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಇದ್ದರು. ಬಸ್‌ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಭಾರತೀ ಬೀದಿಯಲ್ಲಿ ಸಾಗಿ ಸಂತೇಮಾರುಕಟ್ಟೆಎದುರು ಸಮಾವೇಶಗೊಂಡಿತು.

ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಜಗದ್ಗುರುಗಳ ಮೊರೆಹೋದ ಕೃಷಿಕರು

ಬೇಡಿಕೆಗಳೇನು?

  •  ಅಡಕೆ ಬೆಳೆಯಲ್ಲಿ ಎಲೆಚುಕ್ಕಿ, ಹಳದಿ ಎಲೆರೋಗದ ಸಂಶೋಧನೆಗಾಗಿ ತಕ್ಷಣವೇ ಸರ್ಕಾರ ವಿಜ್ಞಾನಿಗಳ ಕಾರ್ಯಪಡೆ ರಚಿಸಬೇಕು
  •  ಈ ರೋಗಗಳಿಗೆ ಈಡಾದ ತೋಟಗಳ ಸಂತ್ರಸ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು
  • ಸೆಕ್ಷನ್‌ 4(1), ಅರಣ್ಯ ಕಾಯ್ದೆ ರದ್ದುಪಡಿಸಬೇಕು
  •  ಸುಂಕರಹಿತ ಭೂತಾನ್‌ ಅಡಕೆ ಅಮದು ನೀತಿ ತಕ್ಷಣ ಹಿಂಪಡೆಯಬೇಕು
  •  ಅರ್ಹ ಫಲಾನುಭವಿಗಳಿಗೆ ನಿವೇಶನ, ಜಮೀನು ಮಂಜೂರಾತಿ ಮಾಡಬೇಕು
  •  ರೈತರ ಖಾತೆಗೆ ಬಾಕಿ ಫಸಲ್‌ ವಿಮಾ ಹಣ ಭರಿಸಬೇಕು.
Latest Videos
Follow Us:
Download App:
  • android
  • ios