Asianet Suvarna News Asianet Suvarna News

ಬಿಲ್ಕಿಸ್‌ ಬಾನು ಕೇಸ್‌ ಆರೋಪಿಗಳ ಬಿಡುಗಡೆಗೆ ಬಿಜೆಪಿ ಪಕ್ಷದ ನಾಯಕರಿಂದಲೇ ವಿರೋಧ!

ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ಬಿಜೆಪಿ ವಲಯದಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ನಟಿ ರಾಜಕಾರಣಿ ಖುಷ್ಬು ಸುಂದರ್‌ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಮುಕ್ತವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
 

Bilkis Bano case disapproval within BJP ranks Devendra Fadnavis Khushbu Sundar remission of convicts sentence san
Author
First Published Aug 25, 2022, 4:34 PM IST

ನವದೆಹಲಿ (ಆ.25): ಗುಜರಾತ್‌ ಗಲಭೆಯ ವೇಳೆ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳು ಶಿಕ್ಷೆಯ ವಿನಾಯತಿ ನಂತರ ಬಿಡುಗಡೆಯಾದ ಒಂದು ವಾರದ ನಂತರ, ಆಡಳಿತಾರೂಢ ಬಿಜೆಪಿಯೊಳಗೆ ವಿರೋಧದ ಲಕ್ಷಣಗಳು ಕಂಡಿವೆ. ಇಲ್ಲಿಯವರೆಗೂ ಈ ಬಗ್ಗೆ ತಮ್ಮಲ್ಲೇ ಗೊಣಗಾಟ ನಡೆಸುತ್ತಿದ್ದ ಈ ನಾಯಕರು ಈ ಬಗ್ಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡಿದ ಬಳಿಕ ಅವರನ್ನು ಸನ್ಮಾನ ಮಾಡಿದ್ದಕ್ಕೆ ಟೀಕೆ ಮಾಡಿದ್ದರೆ, ನಟಿ ಹಾಗೂ ರಾಜಕಾರಣಿ ಖುಷ್ಬು ಸುಂದರ್‌ ಕೂಡ ಬುಧವಾರ ಈ ಬಗ್ಗೆ ದೊಡ್ಡ ಮಟ್ಟದ ಟೀಕೆ ಮಾಡಿದ್ದಾರೆ. ಟ್ವೀಟ್‌ನಲ್ಲಿ ಬರೆದುಕೊಂಡಿರುವ ಅಕೆ,  “ಅತ್ಯಾಚಾರ, ಹಲ್ಲೆ, ಕ್ರೂರ ಮತ್ತು ಜೀವನಪರ್ಯಂತ ಗಾಯಗೊಂಡಿರುವ ಮಹಿಳೆಗೆ ನ್ಯಾಯ ಸಿಗಬೇಕು. ಅದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ ಮುಕ್ತವಾಗಿ ಹೋಗಬಾರದು. ಅವನು ಹಾಗೆ ಮಾಡಿದರೆ, ಅದು ಮಾನವಕುಲ ಮತ್ತು ಹೆಣ್ಣಿಗೆ ಮಾಡಿದ ಅವಮಾನ' ಎಂದು ಖುಷ್ಬು ಸುಂದರ್‌ ಬರೆದಿದ್ದಾರೆ. ರಾಜಕೀಯ ಮತ್ತು ಸಿದ್ಧಾಂತಗಳನ್ನು ಮೀರಿ ಬಿಲ್ಕಿಸ್ ಅಥವಾ ಇತರ ಯಾವುದೇ ಮಹಿಳೆಯನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು.

ಫಡ್ನವೀಸ್‌ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದು, 2002 ರ ಗುಜರಾತ್‌ನ ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ನಂತರ ಬಿಡುಗಡೆ ಮಾಡಲಾಗಿದೆ. ಆದರೆ ಅಪರಾಧದ ಆಪಾದಿತ ವ್ಯಕ್ತಿಯನ್ನು ಅಭಿನಂದಿಸಿದರೆ ಅದು ತಪ್ಪು ಅರ್ಥ ನೀಡುತ್ತದೆ ಮತ್ತು ಅಂತಹ ಕೃತ್ಯಕ್ಕೆ ಯಾವುದೇ ಸಮರ್ಥನೆ ಇರುವುದಿಲ್ಲ. ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನೋ ಪ್ರಕರಣದ ಆರೋಪಿಗಳಿಗೆ ಹಾರ ಹಾಕಬಾರದಿತ್ತು ಎಂದು ಫಡ್ನವೀಸ್ ಮಂಗಳವಾರ ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರತಿಪಕ್ಷಗಳಿಗೆ ಉತ್ತರಿಸಿದ ಫಡ್ನವೀಸ್, ಮಹಿಳಾ ಸಂತ್ರಸ್ತರ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸುವುದಾಗಿ ಹೇಳಿದರು. "ಆರೋಪಿಗಳನ್ನು ಆರೋಪಿಗಳಾಗಿ ಮಾತ್ರ ಪರಿಗಣಿಸಬೇಕು" ಎಂದು ಅವರು ಹೇಳಿದರು. ಗುಜರಾತ್‌ನ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಆರೋಪಿಗಳಿಗೆ ಹಾರ ಹಾಕಿದ ಈ ಕ್ರಮವನ್ನು ನಾನು ಸಮರ್ಥಿಸುವುದಿಲ್ಲ. ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದೆ. ಅವರು ತಮ್ಮ ಅಪರಾಧಕ್ಕಾಗಿ 14 ವರ್ಷ ಜೈಲಿನಲ್ಲಿ ಕಳೆದರು. ಆದರೆ ಆರೋಪಿಗಳನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಫಡ್ನವೀಸ್ ಹೇಳಿದರು.

"ಸುಮಾರು 20 ವರ್ಷ ಪೂರೈಸಿದ ಆರೋಪಿಗಳು ಬಿಡುಗಡೆಯಾಗಿದ್ದಾರೆ. 14 ವರ್ಷಗಳ ಜೈಲು ವಾಸ, ಸುಪ್ರೀಂ ಕೋರ್ಟ್ ಆದೇಶದ ನಂತರ ಬಿಡುಗಡೆ ಮಾಡಲಾಗಿದೆ. ಆದರೆ ಯಾವುದೇ ಆರೋಪಿಯನ್ನು ಸನ್ಮಾನಿಸಿ ಸ್ವಾಗತಿಸುವುದು ತಪ್ಪು, ಆರೋಪಿ ಎಂದಿಗೂ ಆರೋಪಿಯಾಗಿಯೇ ಇರುತ್ತಾನೆ. ಅವರು ಮಾಡಿದ ಕೆಲಸಕ್ಕೆ ಯಾವುದೇ ಸಮರ್ಥನೆಯೂ ಇರುವುದಿಲ್ಲ' ಎಂದು ಗೃಹ ಸಚಿವರೂ ಆಗಿರುವ ಫಡ್ನವೀಸ್ ಹೇಳಿದ್ದಾರೆ.

ಆಗಸ್ಟ್ 15 ರಂದು, 2002 ರ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಏಳು ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್ಲಾ 11 ಅಪರಾಧಿಗಳು ಗುಜರಾತ್‌ನ ಬಿಜೆಪಿ ಸರ್ಕಾರವು ಅವರನ್ನು ಅಕಾಲಿಕ ಬಿಡುಗಡೆಗೆ ಅನುಮತಿಸಿದ ನಂತರ ಗೋಧ್ರಾ ಉಪ-ಜೈಲಿನಿಂದ ಹೊರಬಂದಿದ್ದರು.

Bilkis Bano Case ಅಪರಾಧಿಗಳ ಬಿಡುಗಡೆ, ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ನೊಟೀಸ್‌

ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಲಾಗಿತ್ತು, ಗುಜರಾತ್ ಸರ್ಕಾರ ನೇಮಿಸಿದ ಉಪಶಮನ ಸಮಿತಿಯಲ್ಲಿ ಶಾಸಕರಾಗಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ), ಅಪರಾಧಿಗಳ ಬಿಡುಗಡೆ ಮತ್ತು ಅವರಿಗೆ ನೀಡಿದ ಸ್ವಾಗತದ ಬಗ್ಗೆ ವಿರೋಧವನ್ನು ಎದುರಿಸಿದೆ. ಜನವರಿ 21, 2008 ರಂದು ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಗಲಭೆಯಲ್ಲಿ ಬದುಕುಳಿದ ಬಿಲ್ಕಿಸ್ ಬಾನೋ ಅವರ ಕುಟುಂಬದ ಏಳು ಸದಸ್ಯರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಕೂಡ ಎತ್ತಿ ಹಿಡಿಯಿತು.

ಬಿಲ್ಕಿಸ್ ಬಾನೋ ಕೇಸ್‌: ಅಪರಾಧಿಗಳ ಬಿಡುಗಡೆ ನಿರ್ಧಾರ ಹಿಂಪಡೆಯುವಂತೆ ರಾಷ್ಟ್ರಪತಿಗೆ ಮನವಿ

ಈ ಅಪರಾಧಿಗಳು 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ನಂತರ ಅವರಲ್ಲಿ ಒಬ್ಬರು ತನ್ನ ಅವಧಿಪೂರ್ವ ಬಿಡುಗಡೆಗಾಗಿ ಮನವಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. 1992ರ ನೀತಿಯಂತೆ ಆತನಿಗೆ ಶಿಕ್ಷೆ ವಿಧಿಸಿದ ದಿನಾಂಕದ ಆಧಾರದ ಮೇಲೆ ಆತನ ಶಿಕ್ಷೆಯ ವಿನಾಯತಿ ವಿಚಾರವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ಸೂಚಿಸಿತ್ತು. ನಂತರ ಸರ್ಕಾರವು ಸಮಿತಿಯನ್ನು ರಚಿಸಿತು ಮತ್ತು ಎಲ್ಲಾ ಅಪರಾಧಿಗಳನ್ನು ಜೈಲಿನಿಂದ ಅವಧಿಗೆ ಮುನ್ನ ಬಿಡುಗಡೆ ಮಾಡಲು ಅನುಮತಿ ನೀಡಿತು. ಖುಷ್ಬು ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ, ಆದರೆ ಪಕ್ಷವು ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ. 2002ರ ಗುಜರಾತ್ ಹತ್ಯಾಕಾಂಡದ ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಲಾಗಿತ್ತು.

Follow Us:
Download App:
  • android
  • ios