ಪಾಡ್ನಾ[ಜ.12]: ಗಂಡನೊಂದಿಗೆ ಜಗಳ, ಮನಸ್ಥಾಪ ಹೀಗೆ ನಾನಾ ಕಾರಣಕ್ಕೆ ವಿಚ್ಛೇದನ ನೀಡಿದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಬಿಹಾರದಲ್ಲಿ ತೀರಾ ವಿಚಿತ್ರ ಕಾರಣಕ್ಕೆ 20 ವರ್ಷದ ಯುವತಿಯೊಬ್ಬಳು ಪತಿಗೆ ವಿಚ್ಛೇದನ ನೀಡಲು ಹೊರಟಿದ್ದಾಳೆ.

ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್ ಕೇಳಿದ ಪತ್ನಿ, ಕಾರಣ ನೀವೇ ಓದಿ

ಅಂಥದ್ದೇನಪ್ಪಾ ಕಾರಣ ಅಂತೀರಾ? ಆಕೆಯ ಪತಿ ಪ್ರತಿ ದಿನ ಸ್ನಾನ ಮಾಡಲ್ಲ, ಹಲ್ಲು ತಿಕ್ಕಲ್ಲ. ಹತ್ತಿರ ಹೋದರೆ ಗಬ್ಬು ವಾಸನೆ ಬರುತ್ತದೆ. ಅಲ್ಲದೇ ಆತನಿಗೆ ಶಿಷ್ಟಾಚಾರ ಮತ್ತು ನಡುವಳಿಕೆಯನ್ನು ಪಾಲಿಸಿಯೇ ಗೊತ್ತಿಲ್ಲ. ಇಂಥವನ ಜೊತೆ ಸಂಸಾರ ಮಾಡುವುದಾದರೂ ಹೇಗೆ? ತನಗೆ ವಿಚ್ಛೇದನ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ.

ಹೀಗಾಗಿ ರಾಜ್ಯ ಮಹಿಳಾ ಆಯೋಗ ಸೋನಿ ದೇವಿಯ ದೂರನ್ನು ದಾಖಲಿಸಿಕೊಂಡಿದ್ದು, ಪತಿ ಮನೀಶ್‌ ರಾಮ್‌ಗೆ ತನ್ನನ್ನು ಸರಿಪಡಿಸಿಕೊಳ್ಳಲು 2 ತಿಂಗಳ ಕಾಲಾವಕಾಶ ನೀಡಿದೆ.

ಪತ್ನಿ ತವರಲ್ಲೇ ನೆಲೆಸಿದ್ದರೆ ವಿಚ್ಛೇದನಕ್ಕೆ ಅವಕಾಶ!