bihar snake bite incident ಬಿಹಾರದಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುವಾಗ ಹಾವು ಕಚ್ಚಿದೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಹಾವಿಗೆ ಮೂರು ಬಾರಿ ಕಚ್ಚಿದ್ದಾನೆ. ಇದರಿಂದ ಹಾವು ಸಾವಿಗೀಡಾಗಿದ್ದಾರೆ, ವ್ಯಕ್ತಿ ಬಚಾವ್‌ ಆಗಿದ್ದಾನೆ.

ಪಾಟ್ನಾ (ಜು.5): ಸೇಡು ಅಂದ್ರೆ ಸೇಡು ಇದು. ಬಿಹಾರದ ಕಾರ್ಮಿಕನೊಬ್ಬ ಕೆಲಸ ಮಾಡುವಾಗ ಹಾವೊಂದು ಆತನಿಗೆ ಕಚ್ಚಿದೆ. ಇದರಿಂದ ಸಿಟ್ಟಿಗೆದ್ದ ಆತ. ಆ ಹಾವನ್ನು ಹಿಡಿದು ಅದಕ್ಕೆ ಮೂರು ಬಾರಿ ಕಚ್ಚಿದ್ದಾನೆ. ಇದರಿಂದ ಹಾವು ಶಿವನ ಪಾದ ಸೇರಿದೆ. ಬಿಹಾರದ ನವಾದಾದ ರಾಜೌಲಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂತೋಷ್ ಲೋಹರ್ ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದಾಗ ವಿಷಕಾರಿ ಹಾವು ಆತನಿಗೆ ಕಚ್ಚಿದೆ. ಹಾವು ಕಚ್ಚಿದ್ದರಿಂದ ಗಾಬರಿಯಾಗುವ ಬದಲು ಸಿಟ್ಟಿಗೆದ್ದ ಸಂತೋಷ್‌, ಕಬ್ಬಿಣದ ಸಲಾಕೆಯಿಂದ ಹಾವನ್ನು ಹಿಡಿದು, ಅದಕ್ಕೆ ಮೂರು ಬಾರಿ ಕಚ್ಚಿದ್ದಾನೆ. ಈತ ಮೂರು ಬಾರಿ ಕಚ್ಚಿದ್ದರಿಂದ ಹಾವು ಸ್ಥಳದಲ್ಲಿಯೇ ಸಾವು ಕಂಡಿದೆ.

ಹಾವು ಹಚ್ಚಿದಾಗ ಮರಳಿ ಹಾವನ್ನು ಕಚ್ಚಿದ್ದರ ಬಗ್ಗೆ ಸಂತೋಷ್‌ ಅವರಿಗೆ ಕೇಳಿದಾಗ, ನಮ್ಮ ಹಳ್ಳಿಯಲ್ಲಿ ಒಂದು ನಂಬಿಕೆ ಇದೆ. ಹಾವು ಕಚ್ಚಿದರೆ ಹಾವಿನ ವಿಷ ನಮ್ಮ ಮೈಮೇಲೆ ಏರಬಾರದು ಎಂದರೆ, ನೀವು ಅದೇ ಹಾವಿಗೆ ಎರಡು ಬಾರಿ ಕಚ್ಚಬೇಕು. ನಾನು ಅದನ್ನೇ ಮಾಡಿದೆ ಎಂದು ಹೇಳಿದ್ದಾರೆ. ಸ್ಥಳೀಯರ ಈ ವಿಲಕ್ಷಣ ನಂಬಿಕೆಯ ಕಾರಣದಿಂದಾಗಿ ಸಂತೋಷ್‌ ಹಾವು ಕಚ್ಚಿದ ಬಳಿಕ ಮರಳೀ ಹಾವಿಗೆ ಮೂರು ಬಾರಿ ಕಚ್ಚಿದ್ದಾರೆ.

ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಹಾವು ಕಚ್ಚಿದ್ದಕ್ಕೆ ಹಾವನ್ನೇ ಕಚ್ಚಿ ಸಾಯಿಸಿದ ಸುದ್ದಿ ತಕ್ಷಣವೇ ಇಡೀ ಊರಿಗೆ ವ್ಯಾಪಿಸಿದೆ. ಸಂತೋಷ್‌ನನ್ನು ನೋಡಲು ಹಾಗೂ ಆತನಿಂದಲೇ ಅದರ ಕಥೆಯನ್ನು ಕೇಳಲು ಹೆಚ್ಚಿನ ಜನಸಮೂಹ ಆಸ್ಪತ್ರೆಯ ಬಳಿ ಧಾವಿಸಿತ್ತು. ಹಾವು ವಿಷಕಾರಿಯಾಗಿರಲಿಲ್ಲ, ಇಲ್ಲದಿದ್ದರೆ ಸಂತೋಷ್‌ನ ಜೀವಕ್ಕೆ ಗಂಭೀರ ಅಪಾಯವಿತ್ತು ಎಂದು ಅನೇಕ ಸ್ಥಳೀಯರು ಊಹಿಸಿದ್ದಾರೆ.

ಹೆರಿಗೆ ವೇಳೆ ಶಿಶುವಿನ ಗುದದ್ವಾರ ಕತ್ತರಿಸಿದ ವೈದ್ಯ! ಎರಡು ದಿನ ಜೀವನ್ಮರಣ ಹೋರಾಟ ನಡೆಸಿ ಮಗು ಸಾವು!

ಜಾರ್ಖಂಡ್ ಮೂಲದ ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ.

ಎದೆಯುಬ್ಬಿಸಿ ನಿಂತ ಜ್ಯೋತಿ ರೈ, ಹಾಟ್‌ ಬ್ಯೂಟಿ ಬರ್ತ್‌ಡೇ ಲುಕ್‌ಗೆ ಫ್ಯಾನ್ಸ್‌ ಫಿದಾ!