Asianet Suvarna News Asianet Suvarna News

ಹೆರಿಗೆ ವೇಳೆ ಶಿಶುವಿನ ಗುದದ್ವಾರ ಕತ್ತರಿಸಿದ ವೈದ್ಯ! ಎರಡು ದಿನ ಜೀವನ್ಮರಣ ಹೋರಾಟ ನಡೆಸಿ ಮಗು ಸಾವು!

ವೈದ್ಯ ಮಾಡಿದ ಎಡವಟ್ಟಿನಿಂದ ಹೊರಪ್ರಪಂಚಕ್ಕೆ ಬರುವ ಮೊದಲೇ ನವಜಾತ ಶಿಶು ದುರ್ಮರಣಕ್ಕೀಡಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನೆಡದಿದೆ. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

infant death due to doctors negligence in chigateri hospital at davanagere rav
Author
First Published Jul 5, 2024, 4:22 PM IST

ದಾವಣಗೆರೆ (ಜು.5): ವೈದ್ಯ ಮಾಡಿದ ಎಡವಟ್ಟಿನಿಂದ ಹೊರಪ್ರಪಂಚಕ್ಕೆ ಬರುವ ಮೊದಲೇ ನವಜಾತ ಶಿಶು ದುರ್ಮರಣಕ್ಕೀಡಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನೆಡದಿದೆ.

ದಾವಣಗೆರೆ ಕೊಂಡಜ್ಜಿ ರಸ್ತೆ  ಅರ್ಜುನ್ ಪತ್ನಿ ಅಮೃತಾ ಜೂ.27ರಂದು ಹೆರಿಗೆ ಮಾಡಿಸಲು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಮೃತಾಗೆ ಬಿಪಿ ಜಾಸ್ತಿಯಾಗಿ ಸೀಸೆರಿಯನ್ ಮಾಡಿ ಮಗು ತೆಗೆಯಬೇಕೆಂದು ವೈದ್ಯರು ಹೇಳಿದ್ದರಿಂದ ಸಿಸೇರಿಯನ್ ಗೆ ಒಪ್ಪಿದ್ದ ಕುಟುಂಬಸ್ಥರು. ಅಂತೆಯೇ ಸಿಸೇರಿಯನ್ ಮಾಡಿ ಮಗು ಹೊರತೆಗೆಯುವ ವೇಳೆ ತಾಯಿಯ ಹೊಟ್ಟೆಯೊಳಗಿದ್ದ ಮಗುವಿನ ರೆಕ್ಟಮ್‌(ಗುದದ್ವಾರಕ್ಕೆ)ಗೆ ಕತ್ತರಿ ಹಾಕಿದ ವೈದ್ಯ ನಿಜಾಮುದ್ದೀನ್. ಇದರಿಂದಾಗಿ ಶಿಶುವಿನ ರೆಕ್ಟಮ್ ಭಾಗಕ್ಕೆ ಹಾನಿಯಾಗಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಕೂಡಲೇ ಮಗುವನ್ನು ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಎರಡು ದಿನಗಳ ಕಾಲ ಸತತ ಚಿಕಿತ್ಸೆ ನಡೆಸಿ ಮಗುವನ್ನ ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಯಿತಾದರೂ ಇಂದು ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ.

ತುಮಕೂರು: ಜಮೀನು ವಿವಾದ ಎರಡು ಕುಟುಂಬಗಳ ನಡುವೆ ಮಾರಾಮಾರಿ

ಮಗುವಿಗೆ ವೈದ್ಯನೇ ಕಾರಣ:

ವೈದ್ಯನ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೊಷಕರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ದಾವಣಗೆರೆ(Davanagere) ಚಿಗಟೇರಿ‌ ಜಿಲ್ಲಾಸ್ಪತ್ರೆ (chigateri hospital davangere)ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಈ ಪ್ರಕರಣ ಸಂಬಂಧ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕರಿಂದ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. 

Latest Videos
Follow Us:
Download App:
  • android
  • ios