ಬಿಹಾರ ಸರ್ಕಾರವು 2024ರ ರಾಜ್ಯದ ಸರ್ಕಾರಿ ರಜೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದಿದೆ. ರಾಮನವಮಿ, ಶಿವರಾತ್ರಿ ಹಾಗೂ ಗಾಂಧಿ ಜಯಂತಿ ರಜೆಗಳನ್ನು ರದ್ದು ಮಾಡಿದ್ದು, ಈದ್‌, ಬಕ್ರೀದ್‌ಗೆ ಮೂರು ದಿನ ರಜೆ ಘೋಷಣೆ ಮಾಡಿದೆ.


ಪಟನಾ (ನ.29): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸರ್ಕಾರವು ಏಕಾಏಕಿ ರಾಜ್ಯದ ಸರ್ಕಾರಿ ರಜೆಗಳಲ್ಲಿ ಆಶ್ಚರ್ಯಕರ ಬದಲಾವಣೆಗಳನ್ನು ತಂದಿದೆ. ರಾಜ್ಯದಲ್ಲಿ ಕೃಷ್ಣ ಜನ್ಮಾಷ್ಠಮಿ, ರಕ್ಷಾಬಂಧನ, ಶ್ರೀರಾಮನವಮಿ ಮತ್ತು ಶಿವರಾತ್ರಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳಿಗೆ ನೀಡಲಾಗಿದ್ದ ರಜೆಯನ್ನು ರದ್ದುಗೊಳಿಸಿದೆ. ಗಾಂಧಿ-ಶಾಸ್ತ್ರಿ ಜಯಂತಿ ರಜೆಯನ್ನೂ ರದ್ದು ಮಾಡಿದೆ. ಆದರೆ ಈದ್‌ ಮತ್ತು ಬಕ್ರೀದ್‌ ಹಬ್ಬಗಳ ಆಚರಣೆಗೆ ಸತತ ಮೂರು ದಿನಗಳ ಕಾಲ ಹಾಗೂ ಮೊಹರಂ ಹಬ್ಬಕ್ಕೆ 2 ದಿನಗಳ ರಜೆ ನೀಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ನಿತೀಶ್‌ ಸರ್ಕಾರ ಹಿಂದೂ ವಿರೋಧಿ ಎಂದು ಬಿಜೆಪಿ ತೀವ್ರ ಕಿಡಿಕಾರಿದೆ. ಸೋಮವಾರ ಸರ್ಕಾರ ಬಿಡುಗಡೆ ಮಾಡಿದ ರಾಜ್ಯದ ರಜಾ ದಿನಗಳ ಕ್ಯಾಲೆಂಡರ್‌ನಲ್ಲಿ ಸರ್ಕಾರದ ಹೊಸ ಬದಲಾವಣೆ ಕಂಡು ಬಂದಿದೆ. ಅ.2ರ ಗಾಂಧಿ, ಶಾಸ್ತ್ರಿ ಜಯಂತಿ ರಜೆ ರದ್ದು ಮಾಡಲಾಗಿದೆ. ಆಯಾ ಮಹಾನ್ ಪುರುಷರ ಮೌಲ್ಯಗಳು ಮತ್ತು ವ್ಯಕ್ತಿತ್ವದ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದಲ್ಲದೆ ಹೊಸ ಕ್ಯಾಲೆಂಡರ್ ಪ್ರಕಾರ ಶಿಕ್ಷಕರ ಬೇಸಿಗೆ ರಜೆಯನ್ನು ಸಹ ಕಡಿತಗೊಳಿಸಲಾಗಿದೆ. ಈ ಪ್ರಕಾರ ಶಿಕ್ಷಕರಿಗೆ ನೀಡಲಾಗಿದ್ದ 60 ದಿನಗಳ ರಜೆಯಲ್ಲಿ 38 ದಿನ ಶಾಲೆಗೆ ಬರಬೇಕಿದ್ದು, ವರ್ಷದ 22 ದಿನ ಮಾತ್ರ ರಜೆ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ನೀಡಲಾಗುವ ಬೇಸಿಗೆ ರಜೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಯಾವ ರಜೆಗಳು ರದ್ದು?: ಮೇ 1 ರ ಕಾರ್ಮಿಕರ ದಿನಾಚರಣೆ, ಅ.2ರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ, ರಾಮನವಮಿ , ಶಿವರಾತ್ರಿ, ಸ್ಥಳೀಯ ಪ್ರಸಿದ್ಧ ಹಬ್ಬಗಳಾದ ತೇಜ್‌, ವಸಂತ್‌ ಪಂಚಮಿ ರಜೆಗಳನ್ನು ರದ್ದು ಮಾಡಲಾಗಿದೆ.

ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿ ಮುಸ್ಲಿಂ ಹಬ್ಬಗಳಿಗೆ ರಜೆ ಹೆಚ್ಚಿಸಿದ ಆರೋಪದ ಮೇಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಟೀಕೆ ಮಾಡಲು ಆರಂಭಿಸಿದೆ. ನಿತೀಶ್ ಕುಮಾರ್ ಅವರನ್ನು ತುಷ್ಟೀಕರಣ ರಾಜಕಾರಣ ಮುಖ್ಯಸ್ಥ ಎಂದು ಕರೆದಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರು, ಬಿಹಾರ ಸರ್ಕಾರವು ಸನಾತನ ಸಂಸ್ಥೆಯನ್ನು ಮತ ಬ್ಯಾಂಕ್‌ಗಾಗಿ ದ್ವೇಷಿಸುತ್ತದೆ ಎಂದು ಆರೋಪಿಸಿ ಮಹಾಮೈತ್ರಿಕೂಟದ ಹಿಂದೂ ವಿರೋಧಿ ಮುಖ ಮತ್ತೆ ಮುನ್ನೆಲೆಗೆ ಬಂದಿದೆ ಎಂದು ಹೇಳಿದ್ದಾರೆ.

“ಮತ್ತೊಮ್ಮೆ ಚಿಕ್ಕಪ್ಪ-ಸೋದರಳಿಯ ಸರ್ಕಾರದ ಹಿಂದೂ ವಿರೋಧಿ ಮುಖವು ಮುನ್ನೆಲೆಗೆ ಬಂದಿದೆ. ಒಂದೆಡೆ, ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಶಾಲೆಗಳಲ್ಲಿ ವಿಸ್ತರಿಸಲಾಗುತ್ತಿದೆ, ಆದರೆ ಹಿಂದೂ ಹಬ್ಬಗಳಿಗೆ ರಜೆಯನ್ನು ರದ್ದುಗೊಳಿಸಲಾಗುತ್ತಿದೆ ”ಎಂದು ಚೌಬೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ವೋಟ್ ಬ್ಯಾಂಕ್‌ಗಾಗಿ ಸನಾತನ ಸಂಸ್ಥೆಯನ್ನು ದ್ವೇಷಿಸುವ ಸರಕಾರಕ್ಕೆ ನಾಚಿಕೆಯಾಗಬೇಕು ಎಂದಿದ್ದಾರೆ.

ಬಿಹಾರ ಶಿಕ್ಷಣ ಇಲಾಖೆ ಸೋಮವಾರ 2024 ರ ರಜಾದಿನದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ ಮತ್ತು ಶಿಕ್ಷಣದ ಹಕ್ಕಿನಡಿಯಲ್ಲಿ ಕನಿಷ್ಠ 220 ಬೋಧನಾ ದಿನಗಳನ್ನು ಖಚಿತಪಡಿಸಿಕೊಳ್ಳಲು ಚಾರ್ಟ್ ಅನ್ನು ರಚಿಸಲಾಗಿದೆ ಎಂದು ಹೇಳಿದೆ.2024 ರ ರಜಾದಿನದ ಕ್ಯಾಲೆಂಡರ್ ದೊಡ್ಡ ಬದಲಾವಣೆಯನ್ನು ಕಂಡಿದೆ, ಬೇಸಿಗೆ ರಜೆಯ ದಿನಗಳ ಸಂಖ್ಯೆಯನ್ನು 20 ರಿಂದ 30 ಕ್ಕೆ ಹೆಚ್ಚಿಸಲಾಗಿದೆ. ಹರ್ತಾಲಿಕಾ ತೀಜ್ ಮತ್ತು ಜಿತಿಯಾ ರಜಾದಿನಗಳನ್ನು ತೆಗೆದುಹಾಕಲಾಗಿದೆ, ಶಿಕ್ಷಣ ಇಲಾಖೆಯು ಈದ್ ಅಲ್-ಫಿತರ್ ಮತ್ತು ಈದ್ ಅಲ್-ಅಧಾ (ಬಕ್ರೀದ್) ರ ರಜೆಯನ್ನು ತಲಾ ಮೂರು ದಿನಗಳವರೆಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ.

ಹಿಂದೂ ಹಬ್ಬಗಳಿಗೆ ರಜೆ ಕಟ್, ಮುಸಲ್ಮಾನ ಹಬ್ಬಗಳಿಗೆ ಸಾರ್ವತ್ರಿಕ ರಜೆ ಹೆಚ್ಚಳ: ಬಿಜೆಪಿ ಆಕ್ರೋ

ಫೈರ್‌ಬ್ರಾಂಡ್ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ರಾಜ್ಯವನ್ನು "ಇಸ್ಲಾಮಿಕ್ ರಿಪಬ್ಲಿಕ್ ಆಫ್ ಬಿಹಾರ" ಎಂದು ಕರೆದಿದ್ದಾರೆ. "ನಿತೀಶ್ ಮತ್ತು ಲಾಲು ಸರ್ಕಾರವು ಶಾಲೆಗಳಲ್ಲಿ ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಿ, ಹಿಂದೂ ಹಬ್ಬಗಳಿಗೆ ರಜೆಯನ್ನು ಕಡಿಮೆ ಮಾಡಿದೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಒಂದಲ್ಲ..ಎರಡಲ್ಲ..ಬರೋಬ್ಬರಿ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!