Bihar Politics| ಮದ್ಯ ಹುಡುಕಿ ವಧುವಿನ ಬೆಡ್‌ರೂಂ, ಬಾತ್‌ರೂಂ ನುಗ್ಗಿದ ಪೊಲೀಸರು, ರಾಬ್ರಿದೇವಿ ಕಿಡಿ!
* ಬಿಹಾರದಲ್ಲಿ ಹುಟ್ಟಿಕೊಂಡಿದೆ ರಾಜಕೀಯ ಕಿತ್ತಾಟ
* ಮತ್ತೆ ಸದ್ದು ಮಾಡುತ್ತಿದೆ ಮದ್ಯ ನಿಷೇಧ ವಿಚಾರ
* ಪೊಲೀಸರ ತನಿಖೆ ಬಗ್ಗೆ ಚಕಾರವೆತ್ತಿದ ಮಾಜಿ ಸಿಎಂ ರಾಬ್ರಿ ದೇವಿ?
* ವಧುವಿನ ಕೋಣೆಗೆ ಪ್ರವೇಶಿಸುವಾಗ ಮಹಿಳಾ ಪೊಲೀಸ್ ಯಾಕಿರಲಿಲ್ಲ?
ಪಾಟ್ನಾ(ನ.22): ಬಿಹಾರದಲ್ಲಿ (Bihar) ಮದ್ಯ ನಿಷೇಧದ ( Alcohol Ban) ರಾಜಕೀಯ ಮುಂದುವರಿದಿದೆ. ವಿಷಪೂರಿತ ಮದ್ಯದಿಂದ ಅನೇಕ ಸಾವುಗಳು ಸಂಭವಿಸಿದ ನಂತರ, ಸಿಎಂ ನಿತೀಶ್ ಕುಮಾರ್ (Chief Minister Nitish Kumar) ಅವರ ಕಟ್ಟುನಿಟ್ಟಿನ ಕ್ರಮ ಎಲ್ಲರ ಗಮನಕ್ಕೆ ಬಂದಿದೆ. ಆದರೆ ಪೊಲೀಸರ ಕ್ರಮ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ದಾಳಿಯಿಂದಾಗಿ ಮದ್ಯದ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಹೋಟೆಲ್‌ಗಳು, ಜಿಮ್‌ಗಳು ಮತ್ತು ಇತರ ಸ್ಥಳಗಳಲ್ಲಿ ಹುಡುಕಾಟಗಳನ್ನು ಮಾಡಲಾಗುತ್ತಿದೆ, ಆದರೆ ಈ ನಡುವೆ ಪೊಲೀಸರು (Bihar Police) ನಿಯಮಗಳನ್ನು ಮರೆತಿದ್ದಾರೆ. ಈ ಬಗ್ಗೆ ಸವಾಲುಗಳನ್ನೆಸೆಯಲಾಗುತ್ತಿದೆ. ವಾಸ್ತವವಾಗಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ (Former Chief Minister Rabri Devi) ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮಹಿಳಾ ಕಾನ್‌ಸ್ಟೇಬಲ್ ಇಲ್ಲದೆಯೇ ಪೊಲೀಸ್ ತಂಡ ವಧುವಿನ ಕೋಣೆಗೆ ತೆರಳಿ ಶೋಧ ಕಾರ್ಯ ನಡೆಸುತ್ತಿದ್ದು, ಆಕೆಯ ಬಟ್ಟೆಯನ್ನೂ ಶೋಧಿಸುತ್ತಿರುವುದು ಕಂಡು ಬಂದಿದೆ.
ವೀಡಿಯೊದಲ್ಲಿ ಏನಿದೆ?
ಈ ವಿಡಿಯೋವನ್ನು ಪಾಟ್ನಾದ ರಾಮಕೃಷ್ಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮದುವೆ ಮಂಟಪದ್ದು ಎನ್ನಲಾಗಿದೆ. ಅಲ್ಲಿ ಯುವತಿಯೊಬ್ಬಳು ಮದುವೆಯಾಗಿದ್ದಾಳೆ. ಹೀಗಿರುವಾಗ ಮದ್ಯಪಾನ ನಿಷೇಧದಡಿ ಪೊಲೀಸರು ಏಕಾಏಕಿ ದಾಳಿ ನಡೆಸಿ ಕೊಠಡಿಗಳನ್ನೆಲ್ಲಾ ಶೋಧಿಸುತ್ತಿರುವುದು ಕಂಡು ಬರುತ್ತಿದೆ. ಏತನ್ಮಧ್ಯೆ, ಪೊಲೀಸ್ ಅಧಿಕಾರಿ ವಧುವಿನ ಕೋಣೆಯನ್ನು ಪರಿಶೀಲಿಸುತ್ತಿದ್ದಾರೆ. ವಿಡಿಯೋದಲ್ಲಿ ಮಹಿಳಾ ಪೊಲೀಸರು (Lady Police) ಕಂಡು ಬಂದಿಲ್ಲ. ಆದರೆ, ವಧುವಿನ ಸಂಬಂಧಿಕರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಏನಾಗುತ್ತಿದೆ ಎಂದು ಪ್ರಶ್ನಿಸಿದ ರಾಬ್ರಿ ದೇವಿ
ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಎರಡು ಟ್ವೀಟ್ ಮಾಡಿದ್ದಾರೆ. ಎರಡರಲ್ಲೂ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ನಿತೀಶ್ ಸರ್ಕಾರದ (Nitish Kumar Govt) ವಿರುದ್ಧ ವಾಗ್ದಾಳಿ ನಡೆಸಿದ ರಾಬ್ರಿ ದೇವಿ ಅವರು, ಮದ್ಯ ನಿಷೇಧದ ಹೆಸರಿನಲ್ಲಿ ಮಹಿಳಾ ಪೊಲೀಸರಿಲ್ಲದೆ ವಧುವಿನ ಕೋಣೆ ಮತ್ತು ಬಟ್ಟೆಗಳನ್ನು ಬಿಹಾರ ಪೊಲೀಸರು ಶೋಧಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಬಿಹಾರಕ್ಕೆ ಮದ್ಯ ಹೇಗೆ ಮತ್ತು ಏಕೆ ತಲುಪುತ್ತಿದೆ, ಯಾರು ಅದನ್ನು ತಲುಪಿಸುತ್ತಾರೆ? ಅದರ ತನಿಖೆಯಾಗಬೇಕು. ಧಾರೆ ಇದಾಗುತ್ತಿಲ್ಲ, ಬದಲಾಗಿ ಹುಚ್ಚು ಸರ್ಕಾರವು ಮಹಿಳೆಯರಿಗೆ (Women) ತೊಂದರೆ ನೀಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಮದುವೆಯಾಗಿ ಅಥವಾ ನಿರಂಕುಶಾಧಿಕಾರಿಯ ಹುಚ್ಚಾಟ ನಿಲ್ಲಿಸಿ
ರಾಬ್ರಿ ದೇವಿ ತಮ್ಮ ಎರಡನೇ ಟ್ವೀಟ್‌ನಲ್ಲಿ ಈಗ ಜನರು ಒಂದೋ ಮದುವೆಯಾಗಬೇಕು ಇಲ್ಲವೇ ಸರ್ವಾಧಿಕಾರಿಯ ಹುಚ್ಚಾಟಗಳನ್ನು ಅಳಿಸಬೇಕು. ಬಿಹಾರ ಪೊಲೀಸರು, ಲಿಕ್ಕರ್ ಮಾಫಿಯಾ ಮತ್ತು ಸರ್ಕಾರದ ನಂಟು ಹೊಂದಿರುವವರಿಂದ ಖುದ್ದು ಮದ್ಯವನ್ನು ಆದೇಶಿಸುತ್ತಾರೆ, ಮಾರಾಟ ಮಾಡುತ್ತಾರೆ ಮತ್ತು ಮಾರಾಟ ಮಾಡಿಸುತ್ತಾರೆ ಎಂದು ಅವರು ಆರೋಪಿಸಿದರು. ಸಾಮಾನ್ಯ ನಾಗರಿಕರಿಗೆ ಕಿರುಕುಳ ನೀಡಲು, ಅವರ ಖಾಸಗಿತನವನ್ನು ಉಲ್ಲಂಘಿಸಲು ಮತ್ತು ಅವರ ಖಾಸಗಿ ಜೀವನವನ್ನು ಅತಿಕ್ರಮಿಸಲು ಕ್ರಮ ತೆಗೆದುಕೊಳ್ಳದೆ ಇರುವ ಕಾನೂನು ಯಾವುದು? ಎಂದೂ ಸವಾಲೆಸೆದಿದ್ದಾರೆ.