ಕಲಾಪಕ್ಕೆ ಅಡ್ಡಿ ಮಾಡಿದ ವಿಪಕ್ಷ ಸದಸ್ಯರು| ಶಾಸಕರ ಥಳಿಸಿ ಹೊರ ಹಾಕಿದ ಮಾರ್ಷಲ್ಸ್!

ಪಟನಾ(ಮಾ.24): ಕಲಾಪಕ್ಕೆ ಅಡ್ಡಿಮಾಡಿದ ವಿಪಕ್ಷ ಸದಸ್ಯರನ್ನು ಮಾರ್ಷಲ್‌ಗಳು ದರದರನೆ ಎಳೆದೊಯ್ದು ವಿಧಾನಸಭೆಯಿಂದ ಹೊರಹಾಕಿ ಥಳಿಸಿದ ಘಟನೆ ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ನಡೆದಿದೆ.

ಘಟನೆಯನ್ನು ವಿಪಕ್ಷ ನಾಯಕರು ಕಟುವಾಗಿ ಟೀಕಿಸಿದ್ದು, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಮ್ಮ ಆಡಳಿತದ ಕೊನೆಯ ದಿನಗಳನ್ನು ಎಣಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ. ಬಿಹಾರ ಮಿಲಿಟರಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ಕೊಡುವ ಮಸೂದೆಯನ್ನು ಸರ್ಕಾರ ಮಂಗಳವಾರ ಮಂಡಿಸಿತ್ತು. ಇದನ್ನು ವಿರೋಧಿಸಿ ವಿಪಕ್ಷಗಳು ಭಾರೀ ಗದ್ದಲ ಮಾಡಿದವು.

Scroll to load tweet…

ಪರಿಣಾಮ ಸ್ಪೀಕರ್‌ 2 ಬಾರಿ ಕಲಾಪ ಮುಂದೂಡಿದರು. ಬಳಿಕ ಸಂಜೆ 4.30ಕ್ಕೆ ಪುನಃ ಕಲಾಪ ಆರಂಭಕ್ಕೆ ಸ್ಪೀಕರ್‌ ಆಗಮಿಸುವ ವೇಳೆ ವಿಪಕ್ಷ ಸದಸ್ಯರು, ಅವರನ್ನು ಕೊಠಡಿಯಲ್ಲೇ ಕೂಡಿಹಾಕಿ ಹೊರಬರದಂತೆ ತಡೆದರು. ಈ ವೇಳೆ ಸ್ವತಃ ಪಟನಾ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿದರು. ಬಳಿಕ ಮಾರ್ಷಲ್‌ಗಳು ವಿಪಕ್ಷದ ಹಲವು ಶಾಸಕರನ್ನು ದರದರನೆ ಎಳೆದು ಹೊರಹಾಕಿದರು.