ಮತ್ತೆ ಲಾಕ್‌ಡೌನ್; ಪಾಟ್ನಾದಲ್ಲಿ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ವಿವರ!
ಭಾರತದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ನಿಯಂತ್ರಣ ಮೀರಿ ಹರಡುತ್ತಿರುವ ಕಾರಣ ಒಂದೊಂದೆ ನಗರಗಳು ಲಾಕ್‌ಡೌನ್ ಆಗುತ್ತಿದೆ. ಇದೀಗ ಬಿಹಾರದ ಪಾಟ್ನ ಸಂಪೂರ್ಣ ಲಾಕ್‌ಡೌನ್ ಆಗುತ್ತಿದೆ. ಜುಲೈ 10ರಿಂದ ಪಾಟ್ನಾ ಲಾಕ್‌ಡೌನ್ ಆರಂಭವಾಗಲಿದೆ. ಇಲ್ಲಿದೆ ಮಾಹಿತಿ ಇಲ್ಲಿದೆ.
ಪಾಟ್ನಾ(ಜು.09): ಕೊರೋನಾ ವೈರಸ್ ಮೀತಿ ಮೀರುತ್ತಿದೆ. ಇಷ್ಟೇ ಅಲ್ಲ ಪರಿಸ್ಥಿತಿ ಸರ್ಕಾರದ ಕೈತಪ್ಪಿ ಹೋಗುತ್ತಿದೆ. ಕರ್ನಾಟಕದಲ್ಲಿ ವೈರಸ್ ಆತಂಕದ ವಾತಾವರಣ ಸೃಷ್ಟಿಸಿದೆ. ಅತ್ತ ಬಿಹಾರದಲ್ಲಿ ಕೊರೋನಾ ವೈರಸ್ ಹಾವಳಿಗೆ ಸರ್ಕಾರವೇ ಬೆಚ್ಚಿ ಬಿದ್ದಿದೆ. ಹೀಗಾಗಿ ಪಾಟ್ನಾ ನಗರದಲ್ಲಿ ಮತ್ತೆ ಲಾಕ್‌ಡೌನ್ ಹೇರಲಾಗುತ್ತಿದೆ. ನಾಳೆಯಿಂದ(ಜು.10) ಪಾಟ್ನಾ ನಗರ ಸಂಪೂರ್ಣ ಲಾಕ್ ಆಗಲಿದೆ.
ಕೊರೋನಾ ನಿಯಂತ್ರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ..!
ಕೊರೋನಾ ವೈರಸ್ ನಿಯಂತ್ರಣಕ್ಕೆ ಪಾಟ್ನಾ ನಗರದಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ. ಪಾಟ್ನಾದಲ್ಲಿ ಯಾವೆಲ್ಲ ಸೇವೆಗಳು ಇರಲಿದೆ? ಯಾವ ಸೇವೆ ಬಂದ್ ಆಗಲಿದೆ ಅನ್ನೋ ವಿವರ ಇಲ್ಲಿದೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಕಟ್ಟು ನಿಟ್ಟಿನ ಲಾಕ್‌ಡೌನ್ ಹೇರಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ ಕೇವಲ ಅಗತ್ಯ ವಸ್ತುಗಳ ಸೇವೆ ಮಾತ್ರ ಲಭ್ಯವಿರಲಿದೆ
ಪಾಟ್ನಾದಲ್ಲಿ ಎಲ್ಲಾ ಕಚೇರಿಗಳು, ಮಾರುಕಟ್ಟೆ ಹಾಗೂ ಇತರ ವಾಣಿಜ್ಯ ಚಟುವಟಿಕೆಗಳ ಮೇಲೆ ನಿಷೇಧ
ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಬಂದ್ ಮಾಡಲಾಗುತ್ತಿದೆ
ಖಾಸಗಿ ವಾಹನಗಳ ಓಡಾಟಕ್ಕೂ ಬ್ರೇಕ್ ಹಾಕಲಾಗಿದೆ
ಆ್ಯಂಬುಲೆನ್ಸ್, ತುರ್ತು ಸೇವೆಗಳೆ ಅನುಮತಿ ನೀಡಲಾಗಿದೆ
ಇತರ ಯಾವುದೇ ಕಾರಣಕ್ಕೂ ಪ್ರಯಾಣ ಹಾಗೂ ಸಂಚಾರಕ್ಕೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದುಕೊಳ್ಳಬೇಕಾಗಿದೆ