Asianet Suvarna News Asianet Suvarna News

ಹಾವಿನ ಜೊತೆ ರಾಖಿ ಹಬ್ಬ: ತಿಲಕ ಹಚ್ಚುವಾಗ ಹಾವು ಕಚ್ಚಿ ಸಾವು

  • ರಾಖಿ ಹಬ್ಬದ ಸಂಭ್ರದಲ್ಲೇ ಸಾವನ್ನಪ್ಪಿದ ಯುವಕ
  • ಹಾವಿಗೆ ರಾಖಿ ಕಟ್ಟಿ ತಿಲಕ ಹಚ್ಚಲು ಹೋಗಿ ಪ್ರಾಣಬಿಟ್ಟ
Bihar Man Ties Rakhi to Pair of Snakes on Raksha Bandhan Dies After It Bites Him dpl
Author
Bangalore, First Published Aug 23, 2021, 5:20 PM IST
  • Facebook
  • Twitter
  • Whatsapp

ಬಿಹಾರ(ಆ.23): ರಕ್ಷಾ ಬಂಧನ ಹಬ್ಬವು ಬಿಹಾರದ ಸರನ್‌ನಲ್ಲಿ ದುರಂತವಾಗಿ ಮಾರ್ಪಟ್ಟಿತು. ಒಬ್ಬ ವ್ಯಕ್ತಿ ಜೋಡಿ ಹಾವುಗಳಿಗೆ ರಾಖಿ ಕಟ್ಟಲು ಪ್ರಯತ್ನಿಸಿದ್ದಾನೆ. ಹಾವು ಪ್ರಿಯ ಮನಮೋಹನ್ ಎಂಬ 25 ವರ್ಷದ ಯುವಕ ತನ್ನ ಸಹೋದರಿಯರನ್ನು ಒಂದು ಜೋಡಿ ಹಾವುಗಳಿಗೆ ರಾಖಿ ಕಟ್ಟುವಂತೆ ಮಾಡಲು ವ್ಯವಸ್ಥೆ ಮಾಡಿದ್ದ. ಆದರೆ ಆತನನ್ನೇ ಹಾವು ಕಚ್ಚಿದೆ. ಜನರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

ಮನಮೋಹನ್ ಅವರು ಎರಡು ಹಾವುಗಳನ್ನು ಬಾಲದಿಂದ ಹಿಡಿದುಕೊಂಡಿರುವುದನ್ನು ತೋರಿಸಿರುವ ಘಟನೆಯ ವೀಡಿಯೋ ವೈರಲ್ ಆಗಿದೆ. ವಿಶಿಷ್ಟ ರಾಖಿ ಸಮಾರಂಭವನ್ನು ನೋಡಲು ಹಳ್ಳಿಯ ಬಹಳಷ್ಟು ಜನರು ಸ್ಥಳದಲ್ಲಿದ್ದರು. ಅನೇಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದರು. ಮನಮೋಹನ್ ಒಂದು ಹಾವಿನ ಮೇಲೆ ತಿಲಕ ಹಾಕಲು ಪ್ರಯತ್ನಿಸುತ್ತಿದ್ದಾಗ, ಇನ್ನೊಂದು ಹಾವು ನಿಧಾನವಾಗಿ ಆತನ ಕಡೆಗೆ ತೆವಳುತ್ತಾ ಆತನ ಪಾದವನ್ನು ಕಚ್ಚಿದೆ.

ಬೆಚ್ಚಗೆ ಮಲಗೋ ಹಾಸಿಗೆಯೊಳಗಿತ್ತು ನೂರಾರು ಹಾವು

ಹಾವು ಕಚ್ಚಿದ ತಕ್ಷಣ ಎದ್ದ ವ್ಯಕ್ತಿ ಪಾದವನ್ನು ಪರೀಕ್ಷಿಸಿದ್ದಾನೆ. ಆದರೆ ಕೆಲವು ನಿಮಿಷಗಳ ಕಾಲ ಚೆನ್ನಾಗಿದ್ದ. ಆದರೆ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

ಮನಮೋಹನ್ ಹಾವುಗಳನ್ನು ಹಿಡಿಯುತ್ತಿದ್ದರು. ಹಾವಿನ ಗಾಯಗಳಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಚಿಕಿತ್ಸೆ ನೀಡುತ್ತಿದ್ದರು. ಇದಲ್ಲದೇ ಹಾವು ಕಡಿತದಿಂದ ಬಳಲುತ್ತಿರುವ ನೂರಾರು ಜನರಿಗೆ ಆತ ಚಿಕಿತ್ಸೆ ನೀಡುತ್ತಿದ್ದರು. ಸ್ಥಳೀಯರು ಅವನನ್ನು ಪರಿಸರ ಪ್ರೇಮಿ ಎಂದು ಪರಿಗಣಿಸುತ್ತಿದ್ದರು. ಅವರು ಹಾವುಗಳನ್ನು ಹಿಡಿದು ಕಾಡಿನಲ್ಲಿ ಬಿಡುತ್ತಿದ್ದರು.

Follow Us:
Download App:
  • android
  • ios