ನವದೆಹಲಿ(ಡಿ.18): ಕೃಷಿ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 11 ದಿನ ಸೈಕಲ್ ಸವಾರಿ ಮಾಡಿದ್ದಾರೆ ಒಬ್ಬ ವ್ಯಕ್ತಿ. ಸೈಕಲ್‌ನಲ್ಲಿ ಸುಮಾರು 1,000 ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದ ಬಿಹಾರದ ಸಿವಾನ್‌ನ 60 ವರ್ಷದ ಸತ್ಯದೇವ್ ಮಾಂಝೀ ದೆಹಲಿ-ಹರಿಯಾಣ ಗಡಿ ಟಿಕ್ರಿ ತಲುಪಿದ್ದಾರೆ.

ಮಾಂಝಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನನ್ನ ತವರು ಜಿಲ್ಲೆಯಾದ ಸಿವಾನ್‌ನಿಂದ ಇಲ್ಲಿಗೆ ಬರಲು ನನಗೆ 11 ದಿನಗಳು ಬೇಕಾಯಿತು.

ದೆಹಲಿ ರೈತ ಪ್ರತಿಭಟನೆಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಗಿ..!

ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಚಳುವಳಿ ಮುಗಿಯುವವರೆಗೂ ನಾನು ಇಲ್ಲಿಯೇ ಇರುತ್ತೇನೆ ಎಂದು ಅವರು ತಿಳಿಸಿದ್ದಾರೆ.