Asianet Suvarna News Asianet Suvarna News

ಜಾತಿಗಣತಿ ರಿಲೀಸ್‌ ಮಾಡಿದ ದೇಶದ ಮೊದಲ ರಾಜ್ಯ ಬಿಹಾರ, ಹಿಂದುಗಳ ಸಂಖ್ಯೆಯಲ್ಲಿ ಕುಸಿತ!

ಇಡೀ ದೇಶದಲ್ಲಿ ಜಾತಿ ಗಣತಿ ಡೇಟಾವನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಬಿಹಾರ ಎನಿಸಿಕೊಂಡಿದೆ. ರಾಜ್ಯದಲ್ಲಿ ಶೇ. 36ರಷ್ಟು ಮಂದಿ ಅತ್ಯಂತ ಹಿಂದುಳಿದ ವರ್ಗದವರಾಗಿದ್ದಾರೆ. ಇಡೀ ಬಿಹಾರದ 13.7  ಕೋಟಿ ಜನಸಂಖ್ಯೆಯನ್ನು ಹೊಂದಿದೆ.

Bihar is the first state to release caste census data Brahmin Rajput Yadav Population san
Author
First Published Oct 2, 2023, 3:59 PM IST

ನವದೆಹಲಿ (ಅ.2): ಬಿಹಾರ ಸರ್ಕಾರ ಸೋಮವಾರ ಜಾತಿ ಗಣತಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಬಿಹಾರವು ಜಾತಿ ಗಣತಿ ಡೇಟಾವನ್ನು ಬಿಡುಗಡೆ ಮಾಡಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ. ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವರ್ಗದವರು ಶೇ. 36ರಷ್ಟಿದ್ದರೆ, ಇತರೆ ಹಿಂದುಳಿದ ವರ್ಗದವರು ಅಂದರೆ ಒಬಿಸಿಯವರು ಶೇ. 27ರಷ್ಟಿದ್ದಾರೆ. ಯಾದವರು ಗರಿಷ್ಠ ಪ್ರಮಾಣದಲ್ಲಿದ್ದು, ಇವರು ಜನಸಂಖ್ಯೆಯ ಶೇ. 14.26ರಷ್ಟಿದ್ದಾರೆ. ಬ್ರಾಹ್ಮಣರು ಶೇ. 3.65ರಷ್ಟಿದ್ದರೆ, ರಜಪೂತರು (ಠಾಕೂರ್‌) ಶೇ. 3.45ರಷ್ಟಿದ್ದಾರೆ. ಕಾಯಸ್ಥರ ಜನಸಂಖ್ಯೆ ಅತ್ಯಂತ ಕಡಿಮೆ ಇದ್ದು, ಇಡೀ ಜನಸಂಖ್ಯೆಯ ಶೇ. 0.60ರಷ್ಟು ಮಂದಿ ಇದ್ದಾರೆ. ಬಿಹಾರ ಸರ್ಕಾರದ ಪ್ರಭಾರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಅವರು ಜಾತಿ ಗಣತಿ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದರು. ಬಿಹಾರದ ಜನಸಂಖ್ಯೆ 13 ಕೋಟಿ 7 ಲಕ್ಷದ 25 ಸಾವಿರದ 310. ಇದರಲ್ಲಿ 2 ಕೋಟಿ 83 ಲಕ್ಷದ 44 ಸಾವಿರದ 160 ಕುಟುಂಬಗಳು ಬಿಹಾರದಲ್ಲಿದೆ. ಪರಿಶಿಷ್ಟ ಜಾತಿ 19.65%, ಪರಿಶಿಷ್ಟ ಪಂಗಡ 1.68% ಮತ್ತು ಸಾಮಾನ್ಯ ವರ್ಗ 15.52% ರಷ್ಟಿದೆ.

ಬಿಹಾರದ ಜನಸಂಖ್ಯೆಯು ಸುಮಾರು 82% ಹಿಂದೂಗಳು ಮತ್ತು 17.7% ಮುಸ್ಲಿಮರಾಗಿದ್ದಾರೆ. 2011 ಮತ್ತು 2022 ರ ನಡುವೆ ಬಿಹಾರದಲ್ಲಿ ಹಿಂದೂಗಳ ಜನಸಂಖ್ಯೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ.  2011 ರ ಜನಗಣತಿಯ ಪ್ರಕಾರ, ಹಿಂದೂ ಜನಸಂಖ್ಯೆಯು 82.7% ಮತ್ತು ಮುಸ್ಲಿಂ ಜನಸಂಖ್ಯೆಯು 16.9% ಆಗಿತ್ತು.

ಅತ್ಯಂತ ಹಿಂದುಳಿದ ವರ್ಗವು ಬಿಹಾರದ ಜನಸಂಖ್ಯೆಯ 36% ರಷ್ಟಿದೆ. ಇವರಿಗೆ ಉದ್ಯೋಗದಲ್ಲಿ ಈಗಿರುವ ಮೀಸಲಾತಿಯನ್ನು ಶೇ.18ಕ್ಕೆ ನೀಡಲಾಗುತ್ತಿದೆ. 27% ಒಬಿಸಿಗಳಿಗೆ 12% ಮೀಸಲಾತಿ ನೀಡಲಾಗುತ್ತಿದೆ. ಪ್ರಸ್ತುತ, ಬಿಹಾರದಲ್ಲಿ ಇಬಿಸಿ ಮತ್ತು ಒಬಿಸಿಗೆ 30% ಮೀಸಲಾತಿಯ ಅವಕಾಶವಿದೆ. ಇದರಲ್ಲಿ ಶೇ.18 ಇಬಿಸಿ ಹಾಗೂ ಶೇ.12 ಒಬಿಸಿ ಮೀಸಲಾತಿ ಪಡೆಯುತ್ತಿದ್ದಾರೆ. ಆದರೆ ಜಾತಿ ಆಧಾರಿತ ಲೆಕ್ಕಾಚಾರದ ಪ್ರಕಾರ ಅವರ ಸಂಖ್ಯೆ 63% ಕ್ಕೆ ಏರಿದೆ.

ಬಿಹಾರದ ಜನಸಂಖ್ಯೆ 13.7 ಕೋಟಿ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಸಿಂಗ್ ಮಾತನಾಡಿದ್ದು, ಬಿಹಾರ ರಾಜ್ಯದಲ್ಲಿ ನಡೆದ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಬಿಹಾರದಿಂದ ಹೊರಗೆ ವಾಸಿಸುವವರ ಸಂಖ್ಯೆ 53 ಲಕ್ಷ 72 ಸಾವಿರದ 22. ಬಿಹಾರ ರಾಜ್ಯದಲ್ಲಿ ವಾಸಿಸುವ ಜನರ ಒಟ್ಟು ಜನಸಂಖ್ಯೆ ಶೇ. 12 ಕೋಟಿ 53 ಲಕ್ಷ 53 ಸಾವಿರದ 288 ಆಗಿದೆ. ಇದರಲ್ಲಿ ಒಟ್ಟು ಪುರುಷರ ಸಂಖ್ಯೆ 6 ಕೋಟಿ 41 ಲಕ್ಷದ 31 ಸಾವಿರದ 990. ಮಹಿಳೆಯರ ಸಂಖ್ಯೆ 6 ಕೋಟಿ 11 ಲಕ್ಷ 38 ಸಾವಿರದ 460. ಇನ್ನುಳಿದವರ ಸಂಖ್ಯೆ 82 ಸಾವಿರದ 836. ಇದೇ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಬಿಹಾರದಲ್ಲಿ 1 ಸಾವಿರ ಪುರುಷರಿಗೆ 953 ಮಂದಿ ಮಹಿಳೆಯರಿದ್ದಾರೆ.

ಮತಾಂತರ ಮಾಡುವವರ ಕೈಗೆ ಕರ್ನಾಟಕ ಜಾತಿಗಣತಿ ವರದಿ ಲಭ್ಯ: ಪ್ರಶಾಂತ ಸಂಬರಗಿ ಆರೋಪ

ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆಯಲ್ಲಿ ಏರಿಕೆ: ಬಿಹಾರದಲ್ಲಿ 2011-2022ರ ನಡುವೆ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದೆ. ಈ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ. ಇಂದು ಬಿಡುಗಡೆಯಾದ ಜಾತಿ ಗಣತಿ ವರದಿಯಿಂದ ರಾಜ್ಯದಲ್ಲಿನ ಮತೀಯ ಜನಸಂಖ್ಯೆಯೂ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಪ್ರಸ್ತುತ ಬಿಹಾರದಲ್ಲಿ ಹಿಂದೂ ಜನಸಂಖ್ಯೆಯು ಸುಮಾರು 82% (81.99) ಮತ್ತು ಮುಸ್ಲಿಂ ಜನಸಂಖ್ಯೆಯು 17.7% ಆಗಿದೆ. ಆದರೆ 2011 ರ ಜನಗಣತಿಯ ಪ್ರಕಾರ, ಹಿಂದೂ ಜನಸಂಖ್ಯೆಯು 82.7% ಮತ್ತು ಮುಸ್ಲಿಂ ಜನಸಂಖ್ಯೆಯು 16.9% ಆಗಿತ್ತು. ಪ್ರಸ್ತುತ ಬಿಹಾರದಲ್ಲಿ ಹಿಂದೂಗಳ ಜನಸಂಖ್ಯೆ 10 ಕೋಟಿ 71 ಲಕ್ಷ 92 ಸಾವಿರದ 958. ಮುಸ್ಲಿಂ ಜನಸಂಖ್ಯೆ 2 ಕೋಟಿ 31 ಲಕ್ಷ 49 ಸಾವಿರ 925. 2011 ರ ಜನಗಣತಿಯ ಪ್ರಕಾರ ಬಿಹಾರದಲ್ಲಿ ಹಿಂದೂ ಜನಸಂಖ್ಯೆ 8 ಕೋಟಿ 60 ಲಕ್ಷ 78 ಸಾವಿರ 686. ಆದರೆ ಮುಸ್ಲಿಂ ಜನಸಂಖ್ಯೆ 1 ಕೋಟಿ 75 ಲಕ್ಷ 57 ಸಾವಿರ 809.

ರಾಜ್ಯಗಳಿಗೆ ಜಾತಿ ಗಣತಿ ಅಧಿಕಾರ ಇಲ್ಲ: ಸುಪ್ರೀಂಗೆ ಕೇಂದ್ರದ ಅಫಿಡವಿಟ್‌

Follow Us:
Download App:
  • android
  • ios