ಬಿಹಾರ(ಎ.01): ಇದು ವಿಶ್ವದ ಅತ್ಯಂತ ದುಬಾರಿ ತರಕಾರಿ. ಇದರ ಹೆಸರು ಹಾಪ್ ಶೂಟ್ಸ್(hop shoots). ಇದೀಗ ಇದೇ ತರಕಾರಿಯನ್ನು ಬೆಳೆದು ಕೋಟಿ ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾನೆ ಬಿಹಾರದ ರೈತ ಅಮರೇಶ್ ಸಿಂಗ್. ತನ್ನ ಹೊಲದಲ್ಲಿ ಈ ಅತ್ಯಮೂಲ್ಯ ತರಕಾರಿ ಬೆಳೆದೆ ಸೈ ಎನಿಸಿಕೊಂಡಿದ್ದಾರೆ.

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳ ಸೆಕ್ಸ್ ಲೈಫೇ ಸೂಪರ್!

ಭಾರತದಲ್ಲಿ ಅತೀ ವಿರಳವಾಗಿರುವ ಅಥವಾ ಕಾಣ ಸಿಗದೆ ಇರವು ತರಕಾರಿ ಇದಾಗಿದೆ. ಈ ತರಕಾರಿ ಕುರಿತು ಹೆಚ್ಚಿನ ಭಾರತೀಯರಿಗೆ ಮಾಹಿತಿಯೇ ಇಲ್ಲ. ಹೀಗಾಗಿ ರೈತರೂ ಕೂಡ ಇದರತ್ತ ತಿರುಗಿ ನೋಡಿಲ್ಲ. ಆದರೆ ಬಿಹಾರದ ಔರಂಗಬಾದ್ ಜಿಲ್ಲೆಯ ಕರಾಂಮ್ನಿದ್ ಗ್ರಾಮದ ರೈತ ಅಮರೇಶ್ ಸಿಂಗ್, ಈ ಅತೀ ವಿರಳ ಹಾಪ್ ಶೂಟ್ಸ್ ತರಕಾರಿ ಸಸಿಗಳನ್ನು ತಂದು ಹೊಲದಲ್ಲಿ ನೆಟ್ಟು ಪೋಷಿಸಿದ್ದಾನೆ.

 

ವಾರಣಾಸಿಯ ತರಕಾರಿ ಸಂಶೋಧನಾ ಇಲಾಖೆಯಿಂದ ಈ ತರಕಾರಿ ಸಸಿಗಳನ್ನು ತಂದಿದ್ದಾರೆ. ಈ ಕುರಿತು ಮಾಹಿತಿ ಸಂಗ್ರಹಿಸಿ ಅದರಂತೆ ಹೊಸದಲ್ಲಿ ಹಾಪ್ ಶೂಟ್ಸ್ ಕೃಷಿ ಮಾಡಿದ್ದಾರೆ. ಅಮರೇಶ್ ಸಿಂಗ್ ಹೊಸ ಪ್ರಯತ್ನ ಫಲಕೊಟ್ಟಿದೆ. ಉತ್ತಮ ಬೆಳೆ ಬಂದಿದೆ. ಇದೀಗ ಅಮರೇಶ್ ಸಿಂಗ್, ಬೆಳೆಯನ್ನು ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಈ ಕುರಿತು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ ಈ ರೀತಿಯ ಯಾವುದೇ ಹಾಶ್ ಶೂಟ್ಸ್ ಬೆಳೆಯನ್ನು ಅಮರೇಶ್ ಸಿಂಗ್ ಬೆಳೆದಿಲ್ಲ ಎನ್ನಲಾಗಿದೆ. ಹಿಂದಿ ಮಾಧ್ಯಮಗಳು ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲುು ಬಿಹಾರದ ಅಮರೇಶ್ ಸಿಂಗ್ ಹೊಲಕ್ಕೆ ಬೇಟಿ ನೀಡಿದೆ. ಆದರೆ ಇಲ್ಲಿ ಯಾವುದೇ ರೀತಿಯ ಹಾಪ್ ಶೂಟ್ಸ್ ಬೆಳೆ ಕಂಡಿಲ್ಲ. ಹೀಗಾಗಿ ಫೋನ್ ಮೂಲಕ ಅಮರೇಶ್ ಸಿಂಗ್ ಮಾತನಾಡಿಸಿದಾಗ ನಳಂದ ಜಿಲ್ಲೆಯಲ್ಲಿದೆ ಎಂದಿದ್ದಾನೆ. ಇನ್ನು ಅಲ್ಲಿಗೂ ಒಂದು ತಂಡ ಭೇಟಿ ಮಾಡಿದಾಗ ಈ ರೀತಿಯ ಯಾವುದೇ ಬೆಳೆ ಇರಲಿಲ್ಲ. ಈ ವೇಳೆ ಔರಂಗಬಾದ್ ಜಿಲ್ಲೆಯಲ್ಲಿದೆ ಎಂದು ಸುಳ್ಳು ಹೇಳಿದ್ದಾನೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿದೆ.

ಹಾಪ್ ಶೂಟ್ಸ್ ಬೆಳೆ ಬೆಳೆದಿಲ್ಲ. ಇಷ್ಟೇ ಅಲ್ಲ ಈ ರೀತಿ 1 ಲಕ್ಷ ರೂಪಾಯಿಗೂ ಮಾರಾಟ ಮಾಡಿಲ್ಲ.  ಐಎಸ್ ಅಧಿಕಾರಿ ಸುಪ್ರೀಯಾ ಸಾಹು ಅವರ ಟ್ವೀಟ್  ಅಧರಿಸಿ ವರದಿ ಮಾಡಲಾಗಿತ್ತು. ಆದರೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ 1 ಲಕ್ಷ ರೂಪಾಯಿಗೆ ಹಾಪ್ ಶೂಟ್ಸ್ ತರಕಾರಿ ಮಾರಾಟ ಹಾಗೂ ಬೆಳೆ ಸುಳ್ಳು ಎಂದು ಬಹಿರಂಗವಾಗಿದೆ.

ವಿಶೇಷವೇನು?
ಅಧ್ಯಯನದ ಪ್ರಕಾರ  ಈ ಸಸ್ಯದ ಬೇರಿನಿಂದ ಹಿಡಿದು ಕಾಂಡ, ಗಿಡ, ಎಲೆ, ಹೂವು , ಹಣ್ಣು, ಕಾಯಿ ಸೇರಿದಂತೆ ಎಲ್ಲದರಿಂದಲೂ ಉಪಯೋಗವಿದೆ. ಬಿಯರ್ ಉದ್ಯಮಕ್ಕೂ ಈ ಹಾಪ್ ಶೂಟ್ ಅಗತ್ಯವಾಗಿದೆ. ಕ್ಷಯ ರೋಗಕ್ಕೆ ರಾಮಬಾಣವಾಗಿದೆ.  ನಿದ್ರಾಹೀನತೆ, ಖಿನ್ನತೆ, ಚರ್ಮ ಸಂಬಂಧಿ ಕಾಯಿಲೆಗಳಿಗೂ ಈ ಹಾಪ್ ಶೂಟ್ಸ್ ನೈಸರ್ಗಿಕ ಔಷಧವಾಗಿದೆ.