Bihar Exit Polls ಸಮೀಕ್ಷೆ, ಬಿಹಾರದಲ್ಲಿ ಮತ್ತೆ ಬಿಜೆಪಿ-ಜೆಡಿಯು ಸರ್ಕಾರ, ಮಹಾಘಟಬಂದನ್, ಪಿಕೆ ತಿರಸ್ಕಾರ , ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಪ್ರಕಟಗೊಂಡಿದೆ. ಈ ಸಮೀಕ್ಷೆಗಳು ಬಿಜೆಪಿ-ಜೆಡಿಯು, ಮಹಾಘಟನಬಂದನ್ ಹಾಗೂ ಜನ ಸೂರಾಜ್‌ಗೆ ನೀಡಿದ ಸ್ಥಾನವೆಷ್ಟು?
ನವದೆಹಲಿ (ನ.11) ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದೆ. ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಬಿಹಾರ ಜನತೆ ಮತ್ತೆ ಬಿಜೆಪಿ-ಜೆಡಿಯು ನೇತೃತ್ವದ ಸರ್ಕಾರ ಆಯ್ಕೆ ಮಾಡಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಇತ್ತ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣೆ ಎದುರಿಸಿದ ಮಹಾಘಟಬಂದನ್ ಹಾಗೂ ಪ್ರಶಾಂಕ್ ಕಿಶೋರ್ ಜನ ಸೂರಾಜ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಸಮೀಕ್ಷಾ ಫಲಿತಾಂಶ ಹೇಳುತ್ತಿದೆ. 8ಕ್ಕೂ ಹೆಚ್ಚು ಸಮೀಕ್ಷಾ ವರದಿಯಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ ಮಹಾಘಟನಬಂದನ್ 100ರ ಒಳಗೆ ತೃಪ್ತಿಪಟ್ಟುಕೊಂಡಿದೆ. ಇತ್ತ ಜನ ಸುರಾಜ್‌ಗೆ ಹಲವು ಸಮೀಕ್ಷೆ ಒಂದು ಸ್ಥಾನ ನೀಡಿಲ್ಲ.
ಶೇಕಡಾ 65ರಷ್ಟು ಮಹಿಳಾ ಮತದಾರರು ಎನ್‌ಡಿಎಗೆ ಬೆಂಬಲ
ಬಿಹಾರದಲ್ಲಿ ಶೇಕಡಾ 65ರಷ್ಟು ಮಹಿಳಾ ಮತದಾರರು ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎಂ ಬೆಂಬಲ ನೀಡಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ. ಇನ್ನು ಮಹಾಘಟನಬಂದನ್‌ಗೆ ಶೇಕಡಾ 27ರಷ್ಟು ಮಹಿಳೆಯರು ಮತ ನೀಡಿದ್ದಾರೆ. ಪುರುಷ ಮತದಾರರ ಪೈಕಿ ಶೇಕಡಾ 52ರಷ್ಟು ಮಂದಿ ಎನ್‌ಡಿಎಗೆ ಮತ ನೀಡಿದ್ದರೆ, ಶೇಕಡಾ 36ರಷ್ಟು ಮಹಾಘಟನಬಂದನ್ ಬೆಂಬಲಿಸಿದ್ದಾರೆ.
ಉಲ್ಟಾ ಹೊಡೆಯುತ್ತಾ ಮತಗಟ್ಟ ಸೆಮೀಕ್ಷೆ
ಮತಗಟ್ಟೆ ಸಮೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ಸ್ಪಷ್ಟ ಅಥವಾ ಅಸುಪಾಸಿನ ಫಲಿತಾಂಶ ನೀಡುವಲ್ಲಿ ವಿಫಲಗೊಂಡ ಉದಾಹರಣೆಗಳೇ ಹೆಚ್ಚು. ಹೀಗಾಗಿ ಮಹಾಘಟನಬಂದನ್ ನಾಯಕರು ಮತಗಟ್ಟೆ ಸಮೀಕ್ಷೆಗಿಂತ ಗ್ರೌಂಡ್ ರಿಯಾಲಿಟಿ ಬೇರೆ ಇದೆ, ಗೆಲುವಿನ ವಿಶ್ವಾಸವಿದೆ ಎಂದಿದ್ದಾರೆ. ನವೆಂಬರ್ 14ರಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಇದೀಗ ಎಲ್ಲರ ಕುತೂಹಲ ಫಲಿತಾಂಶದತ್ತ ನೆಟ್ಟಿದೆ.
ಪೀಪಲ್ಸ್ ಫಲ್ಸ್ ಮತಗಟ್ಟೆ ಸಮೀಕ್ಷೆ
- ಎನ್‌ಡಿಎ: 133-159
- ಮಹಾಘಟನಬಂಧನ: 75-101
- ಜೆಎಸ್‌ಪಿ: 0-5
- ಇತರರು: 2-8
ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ
- ಎನ್‌ಡಿಎ: 135-150
- ಮಹಾಘಟನಬಂಧನ: 88-100
- ಜೆಎಸ್‌ಪಿ: 0-01
ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ
- ಎನ್‌ಡಿಎ: 147-167
- ಮಹಾಘಟನಬಂಧನ: 70-90
- ಇತರರು: 0-02
ದೈನಿಕ್ ಭಾಸ್ಕರ್ ಮತಗಟ್ಟೆ ಸೆಮೀಕ್ಷೆ
- ಎನ್‌ಡಿಎ: 145-160
- ಮಹಾಘಟನಬಂಧನ: 73-91
- ಜೆಎಸ್‌ಪಿ: 0-03
- ಇತರರು: 5-7
ಪೀಪಲ್ಸ್ ಇನ್‌ಸೈಟ್ ಮತಗಟ್ಟೆ ಸೆಮೀಕ್ಷೆ
- ಎನ್‌ಡಿಎ:133-148
- 87-102
- ಜೆಎಸ್‌ಪಿ:0-2
- ಇತರರು:3-6
ಪೋಲ್ ಆಫ್ ಫೋಲ್
- ಎನ್‌ಡಿಎ: 138-155
- ಮಹಾಘಟನಬಂಧನ: 82-98
- ಇತರರು: 0-02
