ಬಿಹಾರ(ನ.07):  ಬಿಹಾರ ಚುನಾವಣೆ ಇದೀಗ ದೇಶದ ಗಮನ ಸೆಳೆಯುತ್ತಿದೆ. 3ನೇ ಹಾಗೂ ಅಂತಿಮ ಹಂತದ ಮತದಾನ ಅಂತ್ಯವಾದ ಬೆನ್ನಲ್ಲೇ ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿದೆ. ಆದರೆ ಬಹುತೇಕ ಸಮೀಕ್ಷೆಗಳು ಮಹಾಘಟಬಂಧನ್ ಅತೀ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬ ಭವಿಷ್ಯ ನುಡಿದಿದೆ. 

"

‘ಚುನಾವಣಾ ರಣತಂತ್ರಗಾರ’ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆಯಲ್ಲಿ ನಾಪತ್ತೆ!

ಜನ್ ಕಿ ಬಾತ್ ಸಮೀಕ್ಷೆ
RJD ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಜನ್‌ಕಿ ಬಾತ್ ಸಮೀಕ್ಷೆ ಹೇಳುತ್ತಿದೆ. 
NDA: 91 ರಿಂದ 117 ಸ್ಥಾನ ಗೆಲ್ಲಲಿದೆ | ಮಹಾಘಟಬಂಧನ್: 118-138 | LJP 5 ರಿಂದ8  ಹಾಗೂ ಇತರ 3 ರಿಂದ 6 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಸಿ ವೋಟರ್ ಸಮೀಕ್ಷೆ
ಎಬಿಪಿ ಹಾಗೂ ಸಿವೋಟರ್ ಸಮೀಕ್ಷೆ ಪ್ರಕಾರ ಎನ್‌ಡಿಎ 104 ರಿಂದ 128 ಸ್ಥಾನ ಗೆಲ್ಲಿಲಿದೆ ಎಂದಿದೆ. ಇನ್ನು ಮಹಘಟಬಂಧನ್ 108 ರಿಂದ 131 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ಎಲ್‌ಜೆಪಿ ನಿರೀಕ್ಷಿತ ಜನವಿಶ್ವಾಸ ಗೆಲ್ಲುವುದಿಲ್ಲ ಎಂದಿದೆ. 1 ರಿಂದ 3 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. 

"

ಇಂಡಿಯಾ ಟುಡೆ ಹಾಗೂ ಮೈ ಆಕ್ಸಿಸ್
ಈ ಸಮೀಕ್ಷೆ ಪ್ರಕಾರ RJDಯ ತೇಜಸ್ವಿ ಯಾದವ್ ಬಿಹಾರದ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದೆ.   

 

ETG ಸಮೀಕ್ಷೆ

ಎನ್‌ಡಿಎ 114, ಯುಪಿಎ 120, ಎಲ್‌ಪಿಜೆ 03, ಇತರೆ 06 

ಟಿವಿ9 ಭರತವರ್ಶ

ಎನ್‌ಡಿಎ 115, ಮಹಾಘಟಬಂಧನ್ 20, ಎಲ್‌ಪಿಜೆ 04, ಇತರೆ 04 

ಬಿಹಾರದಲ್ಲಿ 3 ಹಂತದಲ್ಲಿ ಮತದಾನ ನಡೆದಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.
ಮೊದಲ ಹಂತದ ಮತದಾನ ಅಕ್ಟೋಬರ್ 28
2ನೇ ಹಂತದ ಮತದಾನ ನವೆಂಬರ್ 03
3ನೇ ಹಂತದ ಮತದಾನ ನವೆಂಬರ್ 07
ಫಲಿತಾಂಶ ದಿನಾಂಕ: ನವೆಂಬರ್ 10