Asianet Suvarna News Asianet Suvarna News

ಮರು ಎಣಿಕೆಗೆ ಒಪ್ಪದಿದ್ದರೆ ಕೋರ್ಟ್‌ಗೆ : ಎಚ್ಚರಿಕೆ

ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆ ಮಾಡದಿದ್ದಲ್ಲಿ ಕೋರ್ಟಿಗೆ ಹೋಗುವುದಾಗಿ ಎಚ್ಚರಿಕೆ ನೀಡಲಾಗಿದೆ. 

Bihar Election 2020 RJD demands recounting of votes  snr
Author
Bengaluru, First Published Nov 15, 2020, 7:54 AM IST

ಪಟನಾ (ನ.15): ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಅಂಚೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸುತ್ತಿರುವ ಆರ್‌ಜೆಡಿ, ಒಂದು ವೇಳೆ ಮರುಮತ ಎಣಿಕೆ ಕುರಿತ ತನ್ನ ಮನವಿಯನ್ನು ಚುನಾವಣೆ ಆಯೋಗ ಇನ್ನೊಮ್ಮೆ ತಿರಸ್ಕರಿಸಿದರೆ ಕೋರ್ಟ್‌ ಮೆಟ್ಟಿಲೇರುವುದಾಗಿ ಹೇಳಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ಚಿತ್ತರಂಜನ್‌ ಗಗನ್‌, ಚುನಾವಣೆಯಲ್ಲಿ ಎರಡೂ ಮೈತ್ರಿಕೂಟದ ನಡುವಿನ ಮತಗಳ ವ್ಯತ್ಯಾಸ ಕೇವಲ 12270. ಹೀಗಿರುವಾಗ ಮತ ಎಣಿಕೆಯಲ್ಲಿನ ಸಣ್ಣ ಲೋಪ ಕೂಡ ಫಲಿತಾಂಶವನ್ನೇ ಬದಲಿಸಬಲ್ಲದು. ಅಂಚೆ ಮತ ಎಣಿಕೆಯಲ್ಲಿನ ಲೋಪದಿಂದಾಗಿ ಮಹಾಗಠಬಂಧನ್‌ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. ಉದಾಹರಣೆಗೆ ಹಿಲ್ಸಾ ಮತ್ತು ನಳಂದಾದಲ್ಲಿ ನಾವು ಕೇವಲ 12 ಮತಗಳಿಂದ ಸೋತಿದ್ದೇವೆ. ಬರ್‌ಬಿಘಾದಲ್ಲಿ ಮೈತ್ರಿಕೂಟದ ಅಭ್ಯರ್ಥಿಗೆ 113 ಮತಗಳ ಅಂತರದ ಸೋಲಾಗಿದೆ ಎಂದಿದ್ದಾರೆ.

Fact Check : ಆರ್‌ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ? ...

ಹಿಲ್ಸಾದಲ್ಲಿ ಚಲಾವಣೆಯಾದ 551 ಅಂಚೆ ಮತಗಳ ಪೈಕಿ 182 ಮತ ಅಸಿಂಧು ಎಂದು ಘೋಷಿಸಲಾಗಿದೆ. ಬರ್‌ಬಿಘಾದಲ್ಲಿ ಚಲಾವಣೆಯಾದ 1007 ಅಂಚೆ ಮತಗಳ ಪೈಕಿ 106 ಅನ್ನು ಅಸಿಂಧು ಎಂದು ಘೋಷಿಸಲಾಗಿದೆ. ಹೀಗೆ ಮತ ಎಣಿಕೆಯಲ್ಲಿನ ಲೋಪ ನಮಗೆ ಅನ್ಯಾಯ ಮಾಡಿದೆ. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ನಾವು ಮರು ಮತ ಎಣಿಕೆ ಕೋರಿದ್ದೇವೆ. ಈಗಲೂ ಅದನ್ನು ಆಯೋಗ ತಿರಸ್ಕರಿಸಿದರೆ ಕೋರ್ಟ್‌ ಮೆಟ್ಟಿಲೇರುವ ಅವಕಾಶಗಳನ್ನು ನಾವು ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಚಿತ್ತರಂಜನ್‌ ತಿಳಿಸಿದ್ದಾರೆ.

Follow Us:
Download App:
  • android
  • ios