Asianet Suvarna News Asianet Suvarna News

Panchayat Polls: ಬಿಹಾರದಲ್ಲಿ ಮೃತ ವ್ಯಕ್ತಿ ಪಂಚಾಯ್ತಿ ಚುನಾವಣೆ ಗೆದ್ದ!

* ನ.6ರಂದೇ ಮೃತಪಟ್ಟಿದ್ದ ಪಂಚಾಯತ್‌ ಅಭ್ಯರ್ಥಿ

* ಈತ ಸತ್ತಿದ್ದು ಚುನಾವಣಾ ಆಯೋಗಕ್ಕೂ ಗೊತ್ತಿರಲಿಲ್ಲ

* ಬಿಹಾರದಲ್ಲಿ ಮೃತ ವ್ಯಕ್ತಿ ಪಂಚಾಯ್ತಿ ಚುನಾವಣೆ ಗೆದ್ದ!

Bihar Dead man wins Panchayat poll after villagers vote to honour his last wish pod
Author
Bangalore, First Published Nov 28, 2021, 1:30 AM IST
  • Facebook
  • Twitter
  • Whatsapp

ಪಟನಾ(ನ.28): ಇತ್ತೀಚೆಗೆ ನಡೆದ ಪಂಚಾಯತ್‌ ಚುನಾವಣೆ (Panchayat Elections) ಅಭ್ಯರ್ಥಿಯೊಬ್ಬರು ಸಾವಿಗೀಡಾದ ವಿಚಾರ ಈ ಚುನಾವಣೆಯಲ್ಲಿ ಆತ ಗೆದ್ದ ಬಳಿಕ ಬೆಳಕಿಗೆ ಬಂದ ಅಪರೂಪದ ಪ್ರಸಂಗ ಬಿಹಾರದಲ್ಲಿ (Bihar) ನಡೆದಿದೆ. ಒಂದು ವೇಳೆ ಅಭ್ಯರ್ಥಿ ಸಾವಿಗೀಡಾದ ವಿಚಾರ ಅಧಿಕಾರಿಗಳಿಗೆ ಗೊತ್ತಾದರೆ, ತಮ್ಮ ಕ್ಷೇತ್ರದ ಚುನಾವಣೆಯೇ ರದ್ದಾಗಲಿದೆ ಎಂಬ ಕಾರಣಕ್ಕೆ ಈ ವಿಚಾರವನ್ನು ಗ್ರಾಮಸ್ಥರು (Villagers) ಮುಚ್ಚಿಟ್ಟಂತೆ ಕಾಣುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಚಾಯತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ನ.24ರಂದು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವಿತ್ತು. ಈ ವೇಳೆ ಬಿಹಾರದ ಜಮುಯಿ ಜಿಲ್ಲೆಯ ಖೈರಾ ಬ್ಲಾಕ್‌ನ ದೀಪಕಡಾರ್‌ ಗ್ರಾಮ ಪಂಚಾಯತ್‌ (Deepakarhar village) ಕ್ಷೇತ್ರದಿಂದ ಗೆದ್ದಿದ್ದ ಸೊಹಾನ್‌ ಮುರ್ಮು (Sohan Murmu) ಅವರು ಹಾಜರಿರಲಿಲ್ಲ. ಈ ವೇಳೆ ಅಧಿಕಾರಿಗಳು ವಿಚಾರಿಸಿದಾಗ, ‘ಚುನಾವಣೆ ನಡೆಯುವ 15 ದಿನ ಮುಂಚಿತವಾಗಿ ನ.6ರಂದು ಮುರ್ಮು ಸಾವಿಗೀಡಾಗಿದ್ದರು. ಆದರೆ ಈ ಚುನಾವಣೆ ಗೆಲ್ಲಬೇಕು ಎಂಬುದು ಮುರ್ಮು ಅವರ ಕೊನೆಯ ಆಕಾಂಕ್ಷೆಯಾಗಿತ್ತು. ಇದೇ ಕಾರಣಕ್ಕೆ ಗ್ರಾಮಸ್ಥರು, ಮುರ್ಮು ಮೃತಪಟ್ಟವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ’ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹೇಳಿದ್ದಾರೆ.

ಮುರ್ಮು ಗೆದ್ದಿರುವ  ದೀಪಾಕರ್ಹರ್ ಪ್ರದೇಶವು ಜಾರ್ಖಂಡ್ನ (Jharkhand) ರಾಜ್ಯದ ಗಡಿಯುದ್ದಕ್ಕೂ ಇರುವ ದೂರದ ಕುಗ್ರಾಮವಾಗಿದೆ. ತಮ್ಮ ಪ್ರತಿಸ್ಪರ್ಧಿಯನ್ನು 28 ಮತಗಳಿಂದ ಸೋಲಿಸಿದ ಮುರ್ಮು ಅವರ ಕುಟುಂಬ ಸದಸ್ಯರು ಚುನಾವಣೆಯಲ್ಲಿ ಗೆಲ್ಲುವುದು ಮುರ್ಮು ಅವರ ಕೊನೆಯ ಆಸೆ ಆಗಿತ್ತು  ಎಂದು ಹೇಳಿದರು. 

ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದ ಪಟ್ಟಿಯ ಪ್ರಕಾರ, 1990 ರ ದಶಕದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಕ್ಸಲ್ ಚಟುವಟಿಕೆಗೆ ಒಳಗಾದ ನಂತರ ಈ ಗ್ರಾಮವು ತೀವ್ರ ಎಡ ಬಂಡಾಯದಿಂದ ನಲುಗಿತ್ತು.

“ಗ್ರಾಮದ ಯಾವೊಬ್ಬ ನಿವಾಸಿಯೂ ನಮಗೆ ಮಾಹಿತಿ ನೀಡಿಲ್ಲ. ಇದು ಇಲ್ಲಿನ ಹಳ್ಳಿಯ ನಿವಾಸಿಗಳು ಮುಗ್ಧತೆಯನ್ನು ಉಳಿಸಿಕೊಂಡಿರುವುದನ್ನು ಸೂಚಿಸುತ್ತದೆ,  ಭಾವನಾತ್ಮಕತೆಯ ಗಡಿಯಾಗಿದೆ. ಅವರ ಕೊನೆಯ ಆಸೆಯನ್ನು ಗೌರವಿಸಲು ಅವರೆಲ್ಲರೂ  ಅವರ ಪರವಾಗಿ ಮತ ಚಲಾಯಿಸಿದ್ದಾರೆಂದು ಕಾಣುತ್ತದೆ” ಎಂದು ಬಿಡಿಒ ರಾಘವೇಂದ್ರ ತ್ರಿಪಾಠಿ  ಹೇಳಿದರು.

ಇನ್ನು ನಾವೀಗ ವಿಜೇತರ ಪ್ರಮಾಣಪತ್ರವನ್ನು ಯಾರಿಗೂ ನೀಡಲಾಗುವುದಿಲ್ಲ. ಸಂಬಂಧಪಟ್ಟ ವಾರ್ಡ್‌ನ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಮತ್ತು ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಮನವಿಯೊಂದಿಗೆ ನಾವು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇವೆ ಎಂದೂ ತ್ರಿಪಾಠಿ ತಿಳಿಸಿದ್ದಾರೆ. 

4ರ ಕಂದನ ರೇಪ್, ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್‌, ಬಾಲಾಪರಾಧಿಗೆ ಜೈಲು!

ಬಿಹಾರದ ನಳಂದಾ (Nalanda Bihar) ಜಿಲ್ಲೆಯ ಬಿಹಾರಶರೀಫ್‌ನಲ್ಲಿರುವ ಬಿಹೇವಿಯರಲ್ ಕೋರ್ಟ್‌ನಲ್ಲಿ ಜುವೆನೈಲ್ ಜಸ್ಟಿಸ್ ಕೌನ್ಸಿಲ್ ನ್ಯಾಯಾಧೀಶ ಮನ್ವೇಂದ್ರ ಮಿಶ್ರಾ ಅವರು ನಾಲ್ಕು ವರ್ಷದ ಬಾಲಕಿಯೊಂದಿಗೆ ಅಪ್ರಾಪ್ತ ಬಾಲಕಿಯ (Minor Girl) ಅತ್ಯಾಚಾರ ಪ್ರಕರಣದಲ್ಲಿ ಕೇವಲ ಒಂದೇ ದಿನದಲ್ಲಿ ತೀರ್ಪು (Verdict) ನೀಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ನ್ಯಾಯಾಧೀಶರಾದ ಮನ್ವೇಂದ್ರ ಮಿಶ್ರಾ ಮತ್ತು ಪಾಲಿಕೆ ಸದಸ್ಯೆ ಉಷಾ ಕುಮಾರಿ ಅವರು ಇದೊಂದು ಅಮಾನುಷ ಪ್ರವೃತ್ತಿ ಎಂದು ಪರಿಗಣಿಸಿ, ಅಂತಹವರನ್ನು ಶಿಕ್ಷಿಸಿ ಸಮಾಜವನ್ನು ಜಾಗೃತಗೊಳಿಸುವುದು ಬಹಳ ಮುಖ್ಯ ಎಂದಿದ್ದಾರೆ. 

ಶಿಕ್ಷೆಗೊಳಗಾದ ಬಾಲಾಪರಾಧಿ (Juvenile) 14 ವರ್ಷ ವಯಸ್ಸಿನವನೆಂಬುವುದು ಉಲ್ಲೇಖನೀಯ. ಹೀಗಿದ್ದರೂ ಯೋಜಿತ ರೀತಿಯಲ್ಲಿ ಈ ಅಪರಾಧ ಎಸಗಿದ್ದಾರೆ. ಸಂತ್ರಸ್ತ ಬಾಲಕಿಯೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ್ದು, ಆಕೆಯ ತಾಯಿ ಬರುವ ಬಗ್ಗೆ ಮಾಹಿತಿ ಪಡೆದು ಪರಾರಿಯಾಗಿದ್ದಾನೆ. ಬಾಲಾಪರಾಧಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಪರಾಧ (Crime) ಮಾಡುವ ಸಾಮರ್ಥ್ಯವನ್ನು ಹೊಂದಿದ್ದನೆಂದು ಇದು ಸಾಬೀತುಪಡಿಸುತ್ತದೆ. ಆದ್ದರಿಂದ, ಬಾಲಾಪರಾಧಿಗಳ ಅಪರಾಧಕ್ಕಾಗಿ ಗರಿಷ್ಠ ಶಿಕ್ಷೆಯ ಸೆಕ್ಷನ್ 377 ರ ಅಡಿಯಲ್ಲಿ ಅವನಿಗೆ ಮೂರು ವರ್ಷಗಳ ಜೈಲು ಶಿಕ್ಷೆ (Jail) ವಿಧಿಸಲಾಗುತ್ತದೆ.

ಶನಿವಾರ, ಜುವೆನೈಲ್ ಜಸ್ಟಿಸ್ ಕೌನ್ಸಿಲ್ ನ್ಯಾಯಾಧೀಶ ಮನ್ವೇಂದ್ರ ಮಿಶ್ರಾ ಅವರು ಪ್ರಕರಣದ ವಿಚಾರಣೆ ನಡೆಸುವಾಗ, ಕೇವಲ ಒಂದು ದಿನದಲ್ಲಿ ಎಲ್ಲಾ ಐದು ಸಾಕ್ಷಿಗಳ ಸಾಕ್ಷ್ಯವನ್ನು ತೆಗೆದುಕೊಂಡರು. ಇದರೊಂದಿಗೆ ಹತ್ತು ಮಂದಿ ಪ್ರತ್ಯಕ್ಷದರ್ಶಿಗಳನ್ನೂ ಪರೀಕ್ಷೆಗೊಳಪಡಿಸುವ ಮೂಲಕ ಚರ್ಚೆಯನ್ನು ಪೂರ್ಣಗೊಳಿಸಲಾಯಿತು. ಒಂದೇ ದಿನದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅವರು ತಮ್ಮ ತೀರ್ಪು ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಷನ್ ಜಯಪ್ರಕಾಶ ಮಾತನಾಡಿ, ಶಿಕ್ಷೆಗೊಳಗಾದ ಬಾಲಾಪರಾಧಿ ನಾಲ್ಕು ವರ್ಷದ ಬಾಲಕಿಯೊಂದಿಗೆ ಹುಣಸೆಹಣ್ಣು ಮತ್ತು ಚಾಕೊಲೇಟ್ ನೀಡಿ ಆಮಿಷ ಒಡ್ಡಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ (Sexual Assault) ನಡೆಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.

Follow Us:
Download App:
  • android
  • ios