ಬಿಹಾರದಲ್ಲಿ ಸರ್ಕಾರ ರಚನೆ ಕಸರತ್ತು, ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ ಸಾಧ್ಯತೆ ಇದೆ. ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಯಾರು ಮುಖ್ಯಮಂತ್ರಿ ಅನ್ನೋ ಕುತೂಹಲ ತೀವ್ರಗೊಳ್ಳುತ್ತಿದ್ದಂತೆ ಇದೀಗ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ.
ಪಾಟ್ನಾ (ನ.16) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 202 ಸ್ಥಾನ ಗೆಲ್ಲುವ ಮೂಲಕ ಹೊಸ ಇತಿಹಾಸ ರಡಿಸಿದೆ.ಬಿಜೆಪಿ, ಜೆಡಿಯು ಹಾಗೂ ಎಲ್‌ಜೆಪಿ ಪಕ್ಷದ ಐತಿಹಾಸಿಕ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಕಾಂಗ್ರೆಸ್ ಇದು ಮತಗಳ್ಳತನದ ಗೆಲುವು ಎಂದು ಆರೋಪಿಸಿದೆ. 202 ಸ್ಥಾನ ಗೆದ್ದಿರುವ ಎನ್‌ಡಿಎ ಸರ್ಕಾರ ರಚನೆ ತಯಾರಿಯಲ್ಲಿದೆ. ಮತ್ತೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಾರಾ? ಅಥವಾ ಹೊಸ ಮುಖ್ಯಮಂತ್ರಿ ಬಿಹಾರಕ್ಕೆ ಬರ್ತಾರ ಅನ್ನೋ ಚರ್ಚೆಗಳು ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ನಾಳೆ (ನ.17) ರಾಜೀನಾಮ ನೀಡುವ ಸಾಧ್ಯತೆ ಇದೆ.
ಮುಂದಿನ ಬಿಹಾರ ಮುಖ್ಯಮಂತ್ರಿ ಯಾರು?
ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ತೀವ್ರಗೊಳ್ಳುತ್ತಿದೆ. ಹೊಸ ಸರ್ಕಾರ ರಚನೆಗೂ ಮೊದಲೇ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಲಿದ್ದಾರೆ. ಮೂಲಗಳ ಪ್ರಕಾರ ನವೆಂಬರ್ 17 ರಂದು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ನಾಳೆ ಬಿಹಾರ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ಪತ್ರ ಸಲ್ಲಿಲಿದ್ದಾರೆ. ಬಳಿಕ ಮಹತ್ವದ ಸಭೆ ನಡೆಯಲಿದೆ.
ನವೆಂಬರ್ 17ಕ್ಕೆ ಸಭೆ ಕರೆದ ನಿತೀಶ್ ನೇತೃತ್ವದ ಜೆಡಿಯು
ನವೆಂಬರ್ 17ರಂದು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಯು ಸಭೆ ನಡೆಸೆಲಿದ್ದಾರೆ. ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರು ನಿತೀಶ್ ಕುಮಾರ್ ಜೆಡಿಯು ಸಭೆ ಕರೆದಿದ್ದಾರೆ. ಜೆಡಿಯು ಲೆಜಿಸ್‌ಲೇಟೀವ್ ಪಾರ್ಟಿ ಸಭೆ ಬಳಿಕ ಎನ್‌ಡಿಎ ಮೈತ್ರಿ ಕೂಡಗಳ ಸಭೆ ನಡೆಯಲಿದೆ. ಹೀಗಾಗಿ ನಾಳೆ ಸರ್ಕಾರ ರಚನೆ ಸೂತ್ರ ಅಂತಿಮಗೊಳ್ಳಲಿದೆ.
ಎನ್‌ಡಿಎ ಸಭೆಯಲ್ಲಿ ನಾಯಕನ ಆಯ್ಕೆ
ಎನ್‌ಡಿಎ ಸಭೆಯಲ್ಲಿ ಎಲ್ಲಾ ನಾಯಕರು ಸೇರಿ ಲೆಜಿಸ್‌ಲೇಟಿವ್ ಪಾರ್ಟಿ ನಾಯಕನ ಆಯ್ಕೆ ಮಾಡಲಿದ್ದಾರೆ. ಬಳಿಕ ಬಿಹಾರ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ಗೆ ಸರ್ಕಾರ ರಚನೆಗೆ ಅವಕಾಶ ಕೇಳಲಿದ್ದಾರೆ. ಇನ್ನೆರಡು ದಿನಗಳಲ್ಲಿ ಬಿಹಾರದ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ. ಸಚಿವ ಸಂಪುಟ, ಮಿತ್ರ ಪಕ್ಷಗಳ ನಾಯಕರಿಗೆ ಅವತಾಶ, ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಅಂತಿಮಗೊಳ್ಳಲಿದೆ.
ನವೆಂಬರ್ 19 ಅಥವಾ 20ಕ್ಕೆ ಪ್ರಮಾಣವಚನ
ನವೆಂಬರ್ 19 ಅಥವಾ 20 ರಂದು ಬಿಹಾರ ಹೊಸ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಇದೀಗ ಬಿಹಾರದಲ್ಲಿ ಸರ್ಕಾರ ರಚನೆ ಸೂತ್ರದ ಕುರಿತು ಎನ್‌ಡಿಎ ಮೈತ್ರಿ ಪಕ್ಷದಲ್ಲಿ ಬಾರಿ ಚರ್ಚೆಯಾಗುತ್ತಿದೆ.
