ನೀವು ನನ್ನ ಅಪ್ಪನ... ಗನ್ ಹಿಡಿದು ತಿರುಗಾಟ... ಪ್ರಶ್ನಿಸಿದ ಪತ್ರಕರ್ತನ ವಿರುದ್ಧ ಶಾಸಕ ಗರಂ
ಬಿಹಾರದ ಜೆಡಿಯು ಶಾಸಕರೊಬ್ಬರು ಕೈಯಲ್ಲಿ ಗನ್ ಹಿಡಿದು ತಿರುಗಾಡುವ ಮೂಲಕ ವಿವಾದ ಸೃಷ್ಟಿಸಿದ್ದಲ್ಲದೇ ಇದನ್ನು ಪ್ರಶ್ನೆ ಮಾಡಿದ ಪತ್ರಕರ್ತನಿಗೆ ನೀನೇನು ನನ್ನ ಅಪ್ಪನೇ ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಪಾಟ್ನಾ : ಬಿಹಾರದ ಜೆಡಿಯು ಶಾಸಕರೊಬ್ಬರು ಕೈಯಲ್ಲಿ ಗನ್ ಹಿಡಿದು ತಿರುಗಾಡುವ ಮೂಲಕ ವಿವಾದ ಸೃಷ್ಟಿಸಿದ್ದಲ್ಲದೇ ಇದನ್ನು ಪ್ರಶ್ನೆ ಮಾಡಿದ ಪತ್ರಕರ್ತನಿಗೆ ನೀನೇನು ನನ್ನ ಅಪ್ಪನೇ ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಹೀಗೆ ವಿವಾದಕ್ಕೀಡಾದ ನಾಯಕ.
ಶಾಸಕ ಗೋಪಾಲ್ ಮಂಡಲ್ (Gopal Mondal) ಇತ್ತೀಚೆಗೆ ಆಸ್ಪತ್ರೆಯೊಂದರಲ್ಲಿ ಕೈಯಲ್ಲಿ ಗನ್ ಹಿಡಿದು ಓಡಾಡಿದ್ದಾರೆ. ಇದನ್ನು ನೋಡಿದ ಪತ್ರಕರ್ತರೊಬ್ಬರು ಶಾಸಕರನ್ನು ಸಾರ್ವಜನಿಕ ಸ್ಥಳದಲ್ಲಿ ಗನ್ ಹಿಡಿದು ಏಕೆ ತಿರುಗಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಿಟ್ಟಿಗೆದ್ದ ಶಾಸಕ ಗೋಪಾಲ್ ಮಂಡಲ್, ಹೌದು ನಾನು ನನ್ನ ಆಯುಧವನ್ನು ಝಳಪಿಸಿದ್ದೇನೆ. ಅದನ್ನು ತಡೆಯಲು ನೀವು ನನ್ನ ಅಪ್ಪನೋ ಏನು ಎಂದು ಪ್ರಶ್ನಿಸಿದ್ದಾರೆ. ಬರೀ ಇಷ್ಟೇ ಅಲ್ಲದೇ ಇನ್ನು ಹಲವು ಅವಾಚ್ಯ ಶಬ್ದಗಳಿಂದ ಶಾಸಕರು ಪತ್ರಕರ್ತರನ್ನು ನಿಂದಿಸಿದ್ದಾರೆ.
ಅಯ್ಯೋ ದೇವ್ರೆ... ಸತ್ತವರ ಶವ ಹೂಳೋ ಬದ್ಲು ತಿನ್ತಿದ್ರಾ ಯುರೋಪಿಯನ್ನರು?
ನಂತರ ಈ ಮಾತು ವಿವಾದಕ್ಕೀಡಾಗಬಹುದು ಎಂದು ಮನಗಂಡ ಅವರು ಕೂಡಲೇ ಮಾತು ಬದಲಿಸಿದ್ದಾರೆ. ಪೈಜಾಮದಲ್ಲಿ ರಿವಾಲ್ವರ್‌ನ್ನು ಇರಿಸುವ ವೇಳೆ ಕೆಳಗೆ ಜಾರಿ ಹೋಯ್ತು ಹೀಗಾಗಿ ಕೈಲಿ ಹಿಡಿದುಕೊಂಡೆ ಎಂದು ಸಮಾಜಾಯಿಸಿ ನೀಡಲು ಮುಂದಾಗಿದ್ದಾರೆ. ಆದರೆ ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media)ಸಾಕಷ್ಟು ವೈರಲ್ ಆಗಿದೆ.
ನಾನು ರಿವಾಲ್ವರ್ ತೆಗೆದುಕೊಂಡು ನನ್ನ ಪೈಜಾಮಾದಲ್ಲಿ ಇಟ್ಟುಕೊಂಡಿದ್ದೆ. ನಾನು ಮೆಟ್ಟಿಲುಗಳನ್ನು ಏರುವ ವೇಳೆ ಅದು ಕೆಳಗೆ ಜಾರಿತು, ನೀವೇನು ಪತ್ರಕರ್ತರೋ ಅಥವಾ ಬೇರೆನೋ ನಿಮ್ಮ ದೆಸೆಯಿಂದ ಅದನ್ನು ನನ್ನ ಸೊಂಟದಲ್ಲಿ ಇರಿಸಿಕೊಳ್ಳುವುದು ನನಗೆ ಕಷ್ಟವಾಗಿದೆ ಎಂದು ಪತ್ರಕರ್ತರ ಮೇಲೆ ಅವರು ಕೆಂಡಕಾರಿದ್ದಾರೆ. ಬಿಹಾರದ ಬಾಗಲ್ಪುರದಲ್ಲಿರುವ ಸರ್ಕಾರ ನಡೆಸುವ ಜವಾಹರ್‌ಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಾಸಕರು ಭೇಟಿ ನೀಡಿದ ವೇಳೆ ಈ ಘಟನೆ ನಡೆದಿದೆ.
ಹಮಾಸ್ ಉಗ್ರರಿಂದ ಯುವತಿಯ ಕಿಡ್ನಾಪ್ : ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್
ಹಮಾಸ್ ಉಗ್ರರಿದ್ದ ಬಹುಮಹಡಿ ಕಟ್ಟಡ ಹೊಡೆದುರುಳಿಸಿದ ಇಸ್ರೇಲ್ ಸೇನೆ: ವೀಡಿಯೋ ವೈರಲ್