Asianet Suvarna News Asianet Suvarna News

ಎರಡು ವಾರದಲ್ಲಿ 12 ಸೇತುವೆ ಕುಸಿತ, 15 ಇಂಜಿನಿಯರ್‌ಗಳ ಸಸ್ಪೆಂಡ್ ಮಾಡಿದ ಬಿಹಾರ ಸರ್ಕಾರ!

ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಹೊಸ ಸೇತುವೆಗಳ ಪುನರ್ನಿರ್ಮಾಣಕ್ಕೆ ಆದೇಶ ನೀಡಿದೆ.
 

Bihar 15 engineers suspended after 12 bridges collapse over two weeks san
Author
First Published Jul 5, 2024, 8:52 PM IST

ನವದೆಹಲಿ (ಜು.5):  ಬಿಹಾರದಲ್ಲಿ ಎರಡು ವಾರಗಳಲ್ಲಿ ಒಟ್ಟು 12 ಸೇತುವೆಗಳು ಕುಸಿದ ನಂತರ, ರಾಜ್ಯ ಸರ್ಕಾರ ಶುಕ್ರವಾರ 15 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಅದರೊಂದಿಗೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹೊಸ ಸೇತುವೆಗಳ ಪುನರ್ನಿರ್ಮಾಣಕ್ಕೆ ಆದೇಶ ನೀಡಿದೆ. ತಪ್ಪಿತಸ್ಥರೆಂದು ಕಂಡುಬಂದ ಗುತ್ತಿಗೆದಾರರಿಂದಲೇ ನಿರ್ಮಾಣ ವೆಚ್ಚವನ್ನು ಭರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಎಂಜಿನಿಯರ್‌ಗಳ ನಿರ್ಲಕ್ಷ್ಯ ಮತ್ತು ಸೇತುವೆ ನಿರ್ಮಾಣ ಕಾರ್ಯಗಳಲ್ಲಿ ನಿಗಾ ವಹಿಸದಿರುವುದು ಈ ಘಟನೆಗಳಿಗೆ ಪ್ರಮುಖ ಕಾರಣ ಎಂದು ಫ್ಲೈಯಿಂಗ್ ಸ್ಕ್ವಾಡ್‌ಗಳು ತಮ್ಮ ವರದಿಗಳನ್ನು ಸಲ್ಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ರಾಜ್ಯ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್, ಇಂಜಿನಿಯರ್‌ಗಳು ಸರಿಯಾದ ಕಾಳಜಿ ವಹಿಸದಿರುವುದು ಮತ್ತು ಘಟನೆಗಳ ಹಿಂದೆ ಗುತ್ತಿಗೆದಾರರ ಪರಿಶ್ರಮದ ಕೊರತೆ ಇದೆ ಎನ್ನುವುದು ಗೊತ್ತಾಗಿದೆ ಎಂದಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ಪ್ರಸಾದ್, "ಎಂಜಿನಿಯರ್‌ಗಳು ಸರಿಯಾದ ಕಾಳಜಿ ವಹಿಸದಿರುವುದು ಕಂಡುಬರುತ್ತದೆ ಮತ್ತು ಗುತ್ತಿಗೆದಾರರು ಸಹ ಕೆಲಸದ ಮೇಲೆ ಶ್ರದ್ಧೆ ಹೊಂದಿಲ್ಲ" ಎಂದು ಹೇಳಿದರು. ಇದಕ್ಕೂ ಮುನ್ನ, ಗುರುವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ಮತ್ತೊಂದು ಸೇತುವೆ ಕುಸಿದು ಬಿದ್ದಿದ್ದು, ಕಳೆದ 17 ದಿನಗಳಲ್ಲಿ ಅಂತಹ ಘಟನೆಗಳ ಒಟ್ಟು ಸಂಖ್ಯೆ ಒಟ್ಟು ಹನ್ನೆರಡಕ್ಕೆ ಏರಿದೆ.

ಘಟನೆಗಳ ಕುರಿತು ಮಾತನಾಡಿದ ಗ್ರಾಮೀಣ ಕಾಮಗಾರಿ ಇಲಾಖೆ (ಆರ್‌ಡಬ್ಲ್ಯೂಡಿ) ಕಾರ್ಯದರ್ಶಿ ದೀಪಕ್ ಸಿಂಗ್, "ಜೂನ್ 18 ರಂದು ಅರಾರಿಯಾದಲ್ಲಿ ಬಖ್ರಾ ನದಿಯ ಸೇತುವೆಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ರಾಜ್ಯ ಮತ್ತು ಕೇಂದ್ರ ತಂಡಗಳೆರಡೂ ವಿಚಾರಣೆ ನಡೆಸುತ್ತಿವೆ, ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಸಂಬಂಧವಿಲ್ಲದ ಕಾರಣಗಳಿಗಾಗಿ ಈಗಾಗಲೇ ಅಮಾನತುಗೊಂಡಿರುವ ಇತರ ಇಬ್ಬರನ್ನು ವಿಚಾರಣೆ ಮುಗಿಯುವವರೆಗೆ ಕಾರ್ಯದಿಂದ ಅಮಾನತು ಮಾಡಲಾಗಿದೆ ಮತ್ತು ಅಂತಿಮ ವರದಿಯನ್ನು ತಪಾಸಣಾ ತಂಡಗಳು ಸಲ್ಲಿಸಿದ ನಂತರ ಗುತ್ತಿಗೆದಾರ ಮತ್ತು ಸಲಹೆಗಾರರ ​​ವಿರುದ್ಧ ಅಂತಿಮ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ: 15 ದಿನಕ್ಕೆ 10ನೇ ಘಟನೆ

ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ಇನ್‌ಪುಟ್‌ಗಾಗಿ ಆರ್‌ಡಬ್ಲ್ಯೂಡಿ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಹೇಳಿದರು.

10 ದಿನದಲ್ಲಿ 5 ಸೇತುವೆ ಕುಸಿತಕ್ಕೆ ಡಬಲ್ ಇಂಜಿನ್ ಸರ್ಕಾರದ ಡಬಲ್ ಶಕ್ತಿಯೇ ಕಾರಣ: ತೇಜಸ್ವಿ ಯಾದವ್ ವ್ಯಂಗ್ಯ

Latest Videos
Follow Us:
Download App:
  • android
  • ios