ಇಂದೋರ್ ಸ್ವರ್ನ್‌ಬಾಗ್ ಅಗ್ನಿ ದುರಂತ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈವರೆಗೂ ವಸತಿ ಕಟ್ಟಡದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಯುವತಿಯ ಪ್ರೀತಿಗೆ ಹಂಬಲಿಸಿದ್ದ ಯುವಕ, ಆಕೆ ನಿರಾಕರಿಸಿದ ಹಿನ್ನಲೆಯಲ್ಲಿ ವಸತಿ ಕಟ್ಟಡದಲ್ಲಿದ್ದ ಅವಳ ಕಾರಿಗೆ ಬೆಂಕಿ ಇಟ್ಟಿದ್ದ. ಇದರಲ್ಲಿ 7 ಮಂದಿ ಸಾವನ್ನಪ್ಪಿದ್ದು 8 ಮಂದಿ ಗಾಯಗೊಂಡಿದ್ದಾರೆ. 

ಭೋಪಾಲ್ (ಮೇ.7): ಇಂದೋರ್ ಸ್ವರ್ನ್‌ಬಾಗ್ ಅಗ್ನಿ ದುರಂತಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪೋಲೀಸರ ಪ್ರಕಾರ, ಒನ್ ಸೈಡ್ ಲವ್ ಕಾರಣದಿಂದಾಗಿ ಇದಕ್ಕೆ ಸಂಬಂಧವೇ ಇಲ್ಲದ 7 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. 

ತಾನು ಪ್ರೀತಿಸಿದ ಹುಡುಗಿಗೆ ಬೇರೆ ಮದುವೆ ನಿಶ್ಚಯವಾದ ಸುದ್ದಿ ತಿಳಿದ ಶುಭಂ ದೀಕ್ಷಿತ್ ಎನ್ನುವ ಯುವಕ ಯುವತಿಯಿದ್ದ ವಸತಿ ಕಟ್ಟಡಕ್ಕೆ ಬೆಂಕಿ ಇಟ್ಟಿದ್ದ. ತನ್ನ ಪ್ರೀತಿಯನ್ನು ನಿರಾಕರಿಸಿದಕಾರಣಕ್ಕೆ ಹುಡುಗಿ ವಾಸವಿದ್ದ ಕಟ್ಟಡದಲ್ಲಿ ನಿಲ್ಲಿಸಿದ್ದ ಆಕೆಯ ಕಾರಿಗೆ ಬೆಂಕಿ ಹಚ್ಚಿದ್ದ. ಈ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿ 7 ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಅವಗಢದಲ್ಲಿ ಹುಡುಗಿ ಕೂಡ ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಯುವಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತಾಗಿ ಇಂಧೋರ್ ಪೊಲೀಸ್ ಆಯುಕ್ತರೇ ಮಾಹಿತಿ ನೀಡಿದ್ದಾರೆ. ಈ ಮೊದಲು ಕಟ್ಟಡದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಗಢ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಅಗ್ನ ದುರಂತಕ್ಕೆ ಇರುವ ಬೇರೆ ಕಾರಣವನ್ನು ಸ್ವತಃ ಪೊಲೀಸರು ಬಹಿರಂಗ ಮಾಡಿದ್ದಾರೆ.

Scroll to load tweet…


ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಾವಿಗೀಡಾದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅದರೊಂದಿಗೆ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದರು.

ಶುಕ್ರವಾರ ತಡರಾತ್ರಿ ಇಂದೋರ್‌ನಲ್ಲಿ ದೊಡ್ಡ ಅಪಘಾತ ಸಂಭವಿಸಿತ್ತು. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ ಎಂದೇ ಭಾವಿಸಲಾಗಿತ್ತು. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ 7 ಜನರು ಸಜೀವ ಸಾವನ್ನಪ್ಪಿದ್ದರ. 8 ಜನರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನ ಬಯಸಿದರೆ ರಾಜಕೀಯ ಪ್ರವೇಶಿಸಲು ರೆಡಿ: ರಾಬಾರ್ಟ್‌ ವಾದ್ರಾ

ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ, ತಡರಾತ್ರಿ ಇದ್ದಕ್ಕಿಂದ್ದಂತೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿಗೆ ಕಾರಣವೇನು, ಅದನ್ನು ನಂದಿಸುವ ಆರಂಭಿಕ ಪ್ರಯತ್ನ ಆರಂಭಿಸುವ ವೇಳೆಗಾಗಲೇ ಬೆಂಕಿ ಇನ್ನಷ್ಟು ವೇಗವಾಗಿ ಕಟ್ಟಡವನ್ನು ಆವರಿಸಿಕೊಂಡಿತು ಎಂದಿದ್ದಾರೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಸಾಕಷ್ಟು ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತಂದರೂ ಅಷ್ಟೊತ್ತಿಗಾಗಲೇ ತಡವಾಗಿತ್ತು. ಹಲವರು ಸಜೀವ ದಹನಕ್ಕೆ ಒಳಗಾಗಿದ್ದರು. ಮತ್ತೊಂದೆಡೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆ, ಕಟ್ಟಡಗಳಿಂದ ರಸ್ತೆಗೆ ಓಡಿ ಬಂದಿದ್ದರು.

ಸೂರ್ಯೋದಯ, ಸೂರ್ಯಾಸ್ತದ ವೇಳೆ ಹನುಮಾನ್ ಚಾಲೀಸಾ ಪಠಣ ಆರಂಭಿಸಿದ ದೇಗುಲ

ಸಾವಿಗೀಡಾದವರ ಪೈಕಿ ಹೆಚ್ಚಿನವರು ಬಾಡಿಗೆದಾರರಾಗಿದ್ದಾರೆ. 5 ಮಂದಿ ಬಾಡಿಗೆಯವರು ಇದರಲ್ಲಿ ಸಾವಿಗೀಡಾಗಿದ್ದಾರೆ. ಅಗ್ನಿಶಾಮಕ ದಳ ತುರ್ತಾಗಿ ಸ್ಥಳಕ್ಕೆ ಆಗಮಿಸಿತಾದರೂ, ಸತತ ಮೂರು ಗಂಟೆಯ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತಂದಿತು. . ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಕಟ್ಟಡದ ಒಳಗೆ ಹೋದ ನಂತರ, ಅಲ್ಲಿ 5 ಜನರು ಶವವಾಗಿ ಪತ್ತೆಯಾಗಿದ್ದಾರೆ. ಐವರು ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನನಗೆ ಹೊಗೆಯ ವಾಸನೆ ಮೂಗಿಗೆ ಬಲವಾಗಿ ಬಡಿದ ಬಳಿಕ ಎಚ್ಚರವಾಗಿತ್ತು. ರಾತ್ರಿ ನಾವು ಟೆರಸ್ ನ ಮೇಲೆ ಮಲಗಿದ್ದೆವು.ಕಟ್ಟದ ಒಳಹೋಗುವ ಸಲುವಾಗಿ ಬಾಗಿಲನ್ನು ತೆರೆಯಲು ಪ್ರಯತ್ನಿಸಿದೆ ಸಾಧ್ಯವಾಗಲಿಲ್ಲ. ಈ ವೇಳೆ ಕಟ್ಟಡದ ಕೆಳಗಿನಿಂದ ಬೆಂಕಿ ಹಾಗೂ ಹೊಗೆಗಳು ಬರುತ್ತಿರುವುದನ್ನು ನೋಡಿದ್ದು ಮಾತ್ರವಲ್ಲ ಜನರ ಕೂಗಾಟ ಕೂಡ ಕೇಳಿಸುತ್ತಿತ್ತು ಎಂದು ಈ ಘಟನೆಯಲ್ಲಿ ಬದುಕಿಳಿದ ಪ್ರಜಾಪತಿ ಎನ್ನುವವರು ಹೇಳಿದ್ದಾರೆ.