* ಮಾಸಾಂತ್ಯ​ದೊ​ಳಗೆ ರಾಜೀ​ನಾ​ಮೆಗೆ ಬಾಘೇ​ಲ್‌ಗೆ ಸೋನಿಯಾ ಸೂಚ​ನೆ* ಛತ್ತೀಸ್‌ಗಢ ಸಿಎಂಗೆ ಶೀಘ್ರ ಗೇಟ್‌​ಪಾ​ಸ್‌?* ಛತ್ತೀಸ್‌ಗಢ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ‘ಕೈ’ ಕಚ್ಚಾಟ

ರಾಯ್‌ಪುರ/ನವದೆಹಲಿ(ಅ.18): ಮಹತ್ವದ ಕಾರ್ಯಕಾರಿಣಿ ಸಭೆಯ(CWC Meet) ಮರುದಿನವೇ ಕಾಂಗ್ರೆಸ್‌ನಲ್ಲಿ(Congress) ಭಿನ್ನಮತ ಸ್ಫೋಟಗೊಂಡಿದೆ. ಛತ್ತೀಸ್‌ಗಢ ಕಾಂಗ್ರೆಸ್‌ನಲ್ಲಿ(Chhattisgarh Congress) ಬಣರಾಜಕೀಯ ಜೋರಾಗಿದ್ದು, ಸಿಎಂ ಭೂಪೇಶ್‌ ಬಾಘೇಲ್‌ಗೆ(Bhupesh Baghel) ಈ ತಿಂಗಳ ಅಂತ್ಯ​ದೊ​ಳಗೆ ರಾಜೀ​ನಾಮೆ ನೀಡ​ಬೇಕು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಸೂಚನೆ ನೀಡಿ​ದ್ದಾರೆ ಎಂದು ತಿಳಿ​ದು​ಬಂದಿ​ದೆ.

ನವೆಂಬರ್‌ನಲ್ಲಿ ಹಾಲಿ ಸಚಿವ ಟಿಎಸ್‌ ಸಿಂಗ್‌ ದೇವ್‌(TS Singh Dev) ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಬಹುದು ಎಂದು ವಾಹಿನಿ ವರದಿ ಮಾಡಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌(Congress) 90 ಸ್ಥಾನಗಳಲ್ಲಿ 68 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಹಿಡಿಯಿತು. ಆದರೆ ಬಾಘೇಲ್‌ ಹಾಗೂ ಸಿಂಗ್‌​ದೇ​ವ್‌ ಸೇರಿ ಇನ್ನೂ ನಾಲ್ವರು ಸಿಎಂ ರೇಸ್‌ನಲ್ಲಿ ಇದ್ದರು. ಈ ವೇಳೆ ರಾಹುಲ್‌ ಗಾಂಧಿ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರ ನೀಡಿದ್ದರು. ಅದರಂತೆ ​ಬಾ​ಘೇ​ಲ್‌ ಅವಧಿ ಮುಗಿದಿದ್ದು, ಅಧಿಕಾರ ಬಿಟ್ಟುಕೊಡಬೇಕೆಂದು ಸಿಂಗ್‌​ದೇ​ವ್‌ ಪಟ್ಟು ಹಿಡಿದಿದ್ದಾರೆÊ

ಆದ​ರೆ ಸ್ಥಾನ ಉಳಿಸಿಕೊಳ್ಳಲು ಯತ್ನಿಸಿದ್ದ ಬಾಘೇಲ್‌ ಹೈಕಮಾಂಡ್‌ ಮುಂದೆ ಬಲಪ್ರದರ್ಶಿಸಲು ಸುಮಾರು 40 ಶಾಸಕರೊಂದಿಗೆ ಕಳೆದ ತಿಂಗಳು ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದ​ರು. ಸಿಂಗ್‌​ದೇ​ವ್‌ ಪಟ್ಟು ಸಡಿಲಿಸದ ಕಾರಣ, ಭಾಘೇಲ್‌ ರಾಜೀನಾಮೆ ಕೊಡುವ ಪ್ರಸಂಗ ಬಂದಿದೆ. ನವೆಂಬರ್‌ನಲ್ಲಿ ಛತ್ತಿಸ್‌ಗಡ ಸಿಎಂ ಬದಲಾವಣೆ ಖಚಿತ ಎನ್ನಲಾಗಿದೆ.

ಪಂಜಾಬ್‌ಗಾಗಿ ಮತ್ತೆ ಸಿಧು ಕ್ಯಾತೆ, ಸೋನಿಯಾಗೆ ಪತ್ರ

ಹೈಕಮಾಂಡ್‌ ಮತ್ತು ಹಾಲಿ ಮುಖ್ಯ​ಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ನಡೆಯ ಬಗ್ಗೆ ಬೇಸರಗೊಂಡು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದ ನವಜೋತ್‌ಸಿಂಗ್‌ ಸಿಧು, ಇದೀಗ ಮತ್ತೆ ಸಿಡಿದೆದ್ದಿದ್ದಾರೆ. 2017ರ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ 13 ಭರವಸೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಇದು ರಾಜ್ಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕೆ ಕಡೆಯ ಅವಕಾಶ ಎಂದು ಪರೋಕ್ಷವಾಗಿ ಹೈಕಮಾಂಡ್‌ಗೆ ಎಚ್ಚರಿಸಿದ್ದಾರೆ.

ಇದೇ ವೇಳೆ, ಈ ಕುರಿತು ಚರ್ಚಿಸಲು ಭೇಟಿಗೆ ಅವಕಾಶ ಕೊಡಿ ಎಂದು ಸೋನಿಯಾಗೆ ಮನವಿ ಮಾಡಿದ್ದಾರೆ.

ಸಿಧು ಅವರ ಈ ಪತ್ರ ಸಿಎಂ ಚನ್ನಿ ಜೊತೆಗಿನ ಅವರ ಹೊಸ ವೈರತ್ವದ ಬೆಂಕಿಗೆ ಮತ್ತಷ್ಟುತುಪ್ಪ ಸುರಿಯುವ ಸಾಧ್ಯತೆ ಇದೆ. ಜೊತೆಗೆ ಬಂಡೆದ್ದ ಸಿಧುಗೆ ಒಂದು ಚಾನ್ಸ್‌ ನೀಡುವ ನಿರ್ಧಾರಕ್ಕೆ ಬಂದಿದ್ದ ಹೈಕಮಾಂಡ್‌, ಸಿಧು ಬಗ್ಗೆ ಮತ್ತೊಮ್ಮೆ ಅಲೋಚನೆ ಮಾಡುವಂಥ ಪರಿಸ್ಥಿತಿ ಸೃಷ್ಟಿಮಾಡಲಿದೆ ಎನ್ನಲಾಗಿದೆ.