ಭೋಪಾಲ್(ಜು.18): ಕೊರೋನಾ ವೈರಸ್ ವಕ್ಕರಿಸಿ ಬಹುತೇಕರು ಕೆಲಸ ಕಳೆದುಕೊಂಡಿದ್ದಾರೆ. ಹಲವರಿಗೆ ವೇತನ ಕಡಿತಗೊಂಡಿದೆ. ಹಲವರ ಆದಾಯವೇ ನಿಂತು ಹೋಗಿದೆ. ಇಂತಹ ಸಂದರ್ಭದಲ್ಲಿ ಒಂದೊಂದು ರೂಪಾಯಿ ಕೂಡ ಅಷ್ಟೇ ಮುಖ್ಯವಾಗುತ್ತೆ. ಹೀಗೆ ಕೊರೋನಾದಿಂದ ಕೆಲಸ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟೇಲೇರಬೇಕಾಯಿತು. ಹೌದು, ಟೈಲರ್ ಹೊಲಿದ ಚಡ್ಡಿ ಚಿಕ್ಕದಾಗಿದೆ ಅನ್ನೋ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್ ಪೊಲೀಸರ ನೆರವು ಕೇಳಿದ್ದಾನೆ.

ಪತ್ರಿಕೆ ಮಾಲೀಕ ಅರೆಸ್ಟ್: ಕಚೇರಿಯಲ್ಲಿ ಅಶ್ಲೀಲ ಫೋಟೋ, ವಿಡಿಯೋಗಳು ಇದ್ದ CD,ಪೆನ್ ಡ್ರೈವ್ ಪತ್ತೆ

ಭೋಪಾಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ 46 ವರ್ಷದ ಕೃಷ್ಣ ಕುಮಾರ್ ದುಬೆ ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ತಿಂಗಳಿಗೆ 9,000 ರೂಪಾಯಿ ವೇತನ ಪಡೆಯುತ್ತಿದ್ದ ದುಬೆ ಆದಾಯಕ್ಕೂ ಕತ್ತರಿ ಬಿದ್ದಿದೆ. 2 ತಿಂಗಳ ಲಾಕ್‌ಡೌನ್ ಹಾಗೂ ಅನ್‌ಲಾಕ್ ಸಮಯವನ್ನು ಮಿತವಾಗಿ ಖರ್ಚು ಮಾಡಿ ದಿನದೂಡಿದ್ದಾರೆ. ಹಣ ಖಾಲಿಯಾದಾಗ ಗೆಳೆಯನಿಂದ 1,000 ರೂಪಾಯಿ ಸಾಲ ಪಡೆದು ದಿನಸಿ ಖರೀದಿಸಿದ್ದಾರೆ. ಬಳಿಕ ಒಳ ಉಡುಪಿಗಾಗಿ 2 ಮೀಟರ್ ಬಟ್ಟೆ ಖರೀದಿಸಿ ಚಡ್ಡಿ ಹೊಲಿಯಲು ಟೈಲರ್‌ಗೆ ನೀಡಿದ್ದಾರೆ.

5 ದಿನ ಡ್ಯೂಟಿ ಬಳಿಕ ಮನೆ ತಲುಪಿದ ಡಾಕ್ಟರ್: ದೂರದಲ್ಲಿದ್ದೇ ಫ್ಯಾಮಿಲಿ ಜೊತೆ ಒಂದು ಕಪ್ ಟೀ!

ಚಡ್ದಿ ಹೊಲಿಯಲು 190 ರೂಪಾಯಿಯನ್ನು ಟೈಲರ್‌ಗೆ ನೀಡಿದ ದುಬೆ, ಮನೆಗೆ ಬಂದು ಮುಂದಿನ ತಿಂಗಳ ಕತೆ ಏನು ಎಂದು ಆಲೋಚಿಸುತ್ತಾ ಒಂದೆರೆಡು ದಿನ ಕಳೆದಿದಿದ್ದಾರೆ. ಬಳಿಕ ಟೈಲರ್ ಹೇಳಿದ ದಿನ ಟೈಲರ್ ಶಾಪ್‌ಗೆ ತೆರಳಿ ತಾನು ಹೊಲಿಯಲು ನೀಡಿದ ಚಡ್ಡಿ ಪಡೆದು ಮನೆಗೆ ಮರಳಿದ್ದಾರೆ. ಮನೆಗೆ ಬಂದು ಹಾಕಿ ನೋಡಿದಾಗ ಚಡ್ಡಿ ಚಿಕ್ಕದಾಗಿದೆ. 

ಮರಳಿ ಟೈಲರ್ ಬಳಿ ತೆರಳಿದ ದುಬೆ, ಈ ರೀತಿ ಯಾಕಾಗಿದೆ ಎಂದು ಪ್ರಶ್ನಿಸಿದ್ದಾರೆ. ತಾನು ಹೇಳಿದ ಹಾಗೇ ಹೊಲಿದು ಕೊಡಲಿಲ್ಲ ಎಂದಿದ್ದಾರೆ. ಬಟ್ಟೆ ಕಡಿಮೆ ಇತ್ತು, 2 ಮೀಟರ್ ಇರಲಿಲ್ಲ ಎಂದು ಟೈಲರ್ ಉತ್ತರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ದುಬೆ, ಬಟ್ಟೆ ಖರೀದಿಸಿದ ಅಂಗಡಿಗೆ ತೆರಳಿ ತನಗೆ ನೀಡಿದ ಬಟ್ಟೆ ಎಷ್ಟು ಮೀಟರ್? ತನ್ನಿಂದ 2 ಮೀಟರ್ ಬಟ್ಟೆ ಹಣ ಪಡೆದಿದ್ದೀರಿ ಎಂದು ಬಿಲ್ ನೀಡಿದ್ದಾನೆ. ಬಟ್ಟೆ ಅಂಗಡಿ ಸಿಬ್ಬಂದಿ ಪರಿಶೀಲಿಸಿ ತಾವು 2 ಮೀಟರ್ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಟೈಲರ್ ತನಗೆ ಮೋಸ ಮಾಡಿದ್ದಾನೆ ಎಂದು ದುಬೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ದುಬೆ ಪ್ರಕರಣದ ವಿವರ ಕೇಳಿದ ಪೊಲೀಸರು ಈ ಪ್ರಕರಣವನ್ನು ಕೋರ್ಟ್‌ನಲ್ಲಿ ಇತ್ಯರ್ಥ ಮಾಡಲು ಸೂಚಿಸಿದ್ದಾರೆ. 

ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಕೃಷ್ಣ ಕುಮಾರ್ ದುಬೆಗೆ ಟೈಲರ್ ಕರೆ ಮಾಡಿದ್ದಾನೆ. ಬಳಿಕ ನೀವು ನೀಡಿದ ಹಣ ವಾಪಸ್ ನೀಡುವುದಾಗಿ ಹೇಳಿದ್ದಾನೆ. ಸದ್ಯ ಪ್ರಕರಣ ಇಲ್ಲಿವರೆಗೆ ತಲುಪಿದೆ.