ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಹಿಂದು ಹುಡುಗನ ಕತ್ತಿಗೆ ಚೈನ್‌ ಕಟ್ಟಿ, ಮೊಣಕಾಲೂರಿ ನಾಯಿಯಂತೆ ಬೊಗಳು ಎಂದು 6 ಮಂದಿ ಮುಸ್ಲಿಂ ಹುಡುಗರು ಹೇಳಿದ್ದಾರೆ. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ 6 ಮಂದಿ ಹುಡುಗರ ಮೇಲೆ ಎನ್‌ಎಸ್‌ಎ ಕಾಯ್ದೆ ಹಾಕಿ ಬಂಧಿಸಲಾಗಿದೆ. 

ಭೋಪಾಲ್‌ (ಜೂ.19): ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಲು ಯುವಕನೊಬ್ಬನಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ ವಿಡಿಯೋ ವೈರಲ್‌ ಆಗಿದೆ. ಆತನ ಕುತ್ತಿಗೆಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ರಸ್ತೆಯಲ್ಲಿ ಮಂಡಿಯೂರಿ ನಾಯಿಯಂತೆ ಬೊಗಳುವಂತೆ ಹೇಳಿದ್ದಾರೆ. ಜೂನ್‌ 9 ರಂದು ನಡೆದ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ವಿಜಯ್ ಎಂಬ ಸಂತ್ರಸ್ಥ ಹುಡುಗ, ನಾನು ಮಿಯಾನ್ ಭಾಯ್ ಆಗಲು ಸಿದ್ಧ ಎಂದು ಹೇಳಿರುವುದು ದಾಖಲಾಗಿದೆ. ಸೋಮವಾರ, ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆದ ನಂತರ, ಪೊಲೀಸರು ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಮೂವರು ಆರೋಪಿಗಳಾದ ಫೈಜಾನ್ ಖಾನ್, ಸಮೀರ್ ಖಾನ್ ಮತ್ತು ಸಾಹಿಲ್ ಅಲಿಯಾಸ್ ಸಲಾವುದ್ದೀನ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳ ಮೇಲೆ ಎನ್‌ಎಸ್‌ಎ ವಿಧಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಪೊಲೀಸರು ಬಂಧಿತ ಆರೋಪಿಗಳ ಮೆರವಣಿಗೆಯನ್ನೂ ನಡೆಸಿದ್ದಾರೆ. ಇದರೊಂದಿಗೆ ಆರೋಪಿಗಳ ಮನೆಗಳ ದಾಖಲೆಯನ್ನೂ ತೆಗೆದಿದ್ದು, ಒತ್ತುವರಿ ಆಗಿರುವ ಮನೆಯ ಭಾಗಗಳನ್ನು ಒಡೆಯುವ ಕಾರ್ಯಗಳು ನಡೆಯುತ್ತಿವೆ.

ಗೃಹ ಸಚಿವ ನರೋತ್ತಮ್ ಮಿಶ್ರಾ, 'ನಾವು 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆವು. 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತಂತೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ಸೂಚಿಸಲಾಗಿತ್ತು. ಇಂತಹ ದ್ವೇಷದ ಮನಸ್ಥಿತಿ ಹೊಂದಿರುವ ಜನರನ್ನು, ಇಂತಹ ದ್ವೇಷದ ಚಿಂತನೆ ಹೊಂದಿರುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಇಡೀ ಮಧ್ಯಪ್ರದೇಶಕ್ಕೆ ಮಾದರಿಯಾಗುವ ಭೋಪಾಲ್‌ನಲ್ಲಿ ಆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಮೊದಲಿಗೆ, ಯುವಕನ ದೂರು ನೀಡಿದ್ದರೂ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಆದರೆ ಘಟನೆಯ ವೀಡಿಯೊ ವೈರಲ್ ಆದ ನಂತರ, ಭಜರಂಗದಳದ ಕಾರ್ಯಕರ್ತರು ಆರೋಪಿಗಳ ಬಂಧನಕ್ಕಾಗಿ ಭೋಪಾಲ್‌ನ ತಿಲಾ ಜಮಾಲ್‌ಪುರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಫೈಜಾನ್ ಖಾನ್, ಸಮೀರ್ ಖಾನ್ ಮತ್ತು ಸಾಹಿಲ್ ಅಲಿಯಾಸ್ ಸಲಾವುದ್ದೀನ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಹಲ್ಲೆಗೊಳಗಾದ ವ್ಯಕ್ತಿ ಲಾಲಘಾಟಿಯ ಪಂಚವಟಿ ಕಾಲೋನಿ ನಿವಾಸಿಯಾಗಿದ್ದಾರೆ. ಪೊಲೀಸರಿಗೆ ನೀಡಿದ್ದ ದೂರಿನಲ್ಲಿ, ಜೂನ್ 9 ರ ರಾತ್ರಿ ಈ ಘಟನೆ ನಡೆದಿದೆ. ನಾನು ಮತ್ತು ನನ್ನ ಸ್ನೇಹಿತ ಶಾರುಖ್ ಮದುವೆಗೆಂದು ಲ್ಯಾಂಡ್‌ಮಾರ್ಕ್ ಗಾರ್ಡನ್‌ಗೆ ಹೋಗಿದ್ದೆವು. ಮಧ್ಯಾಹ್ನ 12.30ಕ್ಕೆ ಅಲ್ಲಿಂದ ಹಿಂತಿರುಗಿದರು. ಶಾರುಖ್ ತಿಲಾ ಜಮಾಲ್ಪುರ ನಿವಾಸಿ. ನಾವು ಆಕ್ಟಿವಾದಲ್ಲಿದ್ದೆವು. ನಾನು ಶಾರುಖ್‌ನನ್ನು ಫುಟಾ ಗೋರಿ ಬಳಿ ಇಳಿಸಿ ನನ್ನ ಮನೆಗೆ ಹೊರಟೆ. ನಾನು, ಫೈಜಾನ್ ಲಾಲಾ, ಸಾಹಿಲ್ ಬಚ್ಚಾ ಮತ್ತು ಸಮೀರ್ ಅವರನ್ನು ರಾಮಮಂದಿರದ ರಸ್ತೆಯಲ್ಲಿ ಭೇಟಿಯಾದೆ. ಇವರೆಲ್ಲರೂ ನನಗೆ ಮೊದಲೇ ಗೊತ್ತು. ಸಮೀರ್ ನನ್ನನ್ನು ತಡೆದು ಕಪಾಳಮೋಕ್ಷ ಮಾಡಿದ. ಫೈಜಾನ್ ತನ್ನ ಕಿಸೆಯನ್ನು ಹುಡುಕತೊಡಗಿದ. ಸಮೀರ್ ದೂರ ನಿಂತು ಇಬ್ಬರನ್ನೂ ಪ್ರಚೋದಿಸುತ್ತಿದ್ದ.

Scroll to load tweet…

ಹಿಂದು ಹುಡುಗಿಯ ಪ್ರೀತಿಗಾಗಿ ಮುಸ್ಲಿಂ ಧರ್ಮವನ್ನೇ ಬಿಟ್ಟ ಪ್ರೇಮಿ!

ಅಷ್ಟರಲ್ಲಿ ಅಲ್ಲಿಗೆ ಬಿಲಾಲ್, ಮುಫೀದ್ ಕೂಡ ಬಂದಿದ್ದರು. ನನಗೆ ಚಾಕು ತೋರಿಸಿ ಬೈಕ್ ಮೇಲೆ ಕೂರಿಸಿದರು. ಫೈಜಾನ್ ಬೈಕ್ ಓಡಿಸುತ್ತಿದ್ದ, ಸಮೀರ್ ನನ್ನನ್ನು ಹಿಡಿದುಕೊಂಡು ಹಿಂದೆ ಕುಳಿತಿದ್ದ. ನನ್ನ ಆಕ್ಟಿವಾ ಕೀ ಮತ್ತು ಎರಡೂ ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದರು. ಎಲ್ಲರೂ ನನ್ನನ್ನು ಗೌತಮ್ ನಗರ, ಪಿಜಿಬಿಟಿ ಕಾಲೇಜಿನ ಮೈದಾನಕ್ಕೆ ಕರೆದುಕೊಂಡು ಹೋದರು. ಮೂಲೆಯ ಸುತ್ತಲಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ನಂತರ ಫೈಜಾನ್ ಮತ್ತು ಸಾಹಿಲ್ ಕುತ್ತಿಗೆಗೆ ಬೆಲ್ಟ್ ಕಟ್ಟಿದರು. ಸಮೀರ್, ಬಿಲಾಲ್, ಮುಫೀದ್ ಮತ್ತು ಸಾಹಿಲ್ ಜೇಬಿನಲ್ಲಿದ್ದ 700-800 ರೂಪಾಯಿ ತೆಗೆದಿದ್ದರು ಎಂದಿದ್ದಾರೆ.

Watch: ಹಿಂದುಗಳೆಲ್ಲಾ ಒಗ್ಗಟ್ಟಾಗಿ, ಹಿಂದು ರಾಷ್ಟ್ರ ನಿರ್ಮಿಸಬೇಕು ಎಂದ ಕಾಂಗ್ರೆಸ್‌ ಶಾಸಕಿ!

ಮಧ್ಯಪ್ರದೇಶ ಸಿಎಂ ಪ್ರಕರಣದ ಗಂಭೀರತೆಯನ್ನು ಅರಿತು, ಎಲ್ಲರ ಮೇಲೆ ಎನ್‌ಎಸ್‌ಎ ಕಾಯ್ದೆ ಹಾಕುವಂತೆ ಸೂಚಿಸಿದ್ದಾರೆ. ಅದರೊಂದಿಗೆ ಅವರ ಮನೆಯ ಮಾಹಿತಿಗಳನ್ನು ಪಡೆದು, ಹಾಗೇನಾದರೂ ಒತ್ತುವರಿ ಪ್ರದೇಶದಲ್ಲಿ ಮನೆ ಇದ್ದರೆ ಬುಲ್ಡೋಜರ್‌ ಬಳಸಿ ತೆರವು ಮಾಡುವಂತೆ ತಿಳಿಸಿದ್ದಾರೆ. ಗೃಹ ಸಚಿವ ನರೋತ್ತಮ್‌ ಮಿಶ್ರಾ 24 ಗಂಟೆಯ ಒಳಗಾಗಿ ಇದರ ವಿವರ ನೀಡುವಂತೆ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.