ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಸಾಧಾರಣ ಕೊಡುಗೆ ನೀಡಿದವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲಾಗುವುದು. ಹಾಗಾದರೆ ಈ ಪ್ರಶಸ್ತಿ ಸಿಕ್ಕವರಿಗೆ ಸಿಗುವ ಸೌಲಭ್ಯಗಳು ಯಾವುವು?
ಭಾರತ ರತ್ನವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಜಾತಿ, ಮತ, ಲಿಂಗ ಅಥವಾ ಧರ್ಮ ಎಂದು ನೋಡದೆ, ಸಮಾಜಕ್ಕೆ ಅಸಾಧಾರಣ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿವರ್ಷ ಗರಿಷ್ಠ ಮೂರು ಜನರು ಈ ಪ್ರಶಸ್ತಿಗೆ ಭಾಜನರಾಗುತ್ತಾರೆ. ಈ ಪ್ರಶಸ್ತಿ ಪಡೆದವರು ವಿವಿಧ ಸೌಲಭ್ಯಗಳನ್ನು ಪಡೆಯುತ್ತಾರೆ, ಆದರೆ ಈ ಪ್ರಶಸ್ತಿಯ ಹೆಸರನ್ನು ತಮ್ಮ ಹೆಸರಿಗೆ ಮೊದಲು ಅಥವಾ ಕೊನೆಯಲ್ಲಿ ಬಳಸಲು ಅನುಮತಿಯಿಲ್ಲ.
ಈ ಪ್ರಶಸ್ತಿ ಆರಂಭ ಆಗಿದ್ದು ಯಾವಾಗ?
1954 ಜನವರಿ 2ರಂದು ಭಾರತದ ಮೊದಲ ಪ್ರಧಾನಿ ರಾಜೇಂದ್ರ ಪ್ರಸಾದ್ ಅವರು ಈ ಪ್ರಶಸ್ತಿಯನ್ನು ಪರಿಚಯಿಸಿದರು. ಅಶ್ವತ್ಥ ಎಲೆ ರೀತಿ ಪ್ರಶಸ್ತಿ ನೀಡಲಾಗುವುದು.
ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಸಿಗುವ ಸೌಲಭ್ಯಗಳು!
ದೇಶಾದ್ಯಂತ ಪ್ರಯಾಣಿಸುವಾಗ ಸರ್ಕಾರಿ ಗಣ್ಯರಿಗೆ ನೀಡಲಾಗುವ ಒಂದೇ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಕೊಡಲಾಗುವುದು. ಇದನ್ನು ಕೇವಲ ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಇಲಾಖೆಗಳ ಉನ್ನತ ಹುದ್ದೆಯ ಅಧಿಕಾರಿಗಳು, ರಾಜತಾಂತ್ರಿಕ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಇಮಿಗ್ರೇಷನ್ ಕೌಂಟರ್, ವಿಐಪಿ ಲಾಂಜ್‌ಗೆ ಪ್ರವೇಶವನ್ನು ನೀಡುತ್ತದೆ. ತಮ್ಮ ಜೀವಿತಾವಧಿಯಲ್ಲಿ ಉಚಿತವಾಗಿ ವಿಐಪಿ ಕ್ಲಾಸ್‌ನಲ್ಲಿ ವಿಮಾನ ಪ್ರಯಾಣದ ಸೌಲಭ್ಯ ಸಿಗುತ್ತದೆ.
ಗೃಹ ಸಚಿವಾಲಯವು ರಾಜ್ಯ ಮತ್ತು ಸಾಂಸ್ಕೃತಿಕ ಸಂದರ್ಭಗಳಿಗಾಗಿ ಒಂದು ಲಿಸ್ಟ್ ಮಾಡಲಾಗುವುದು. ಅಲ್ಲಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತರನ್ನು 7A ಸ್ಥಾನದಲ್ಲಿ ಕೂರಿಸಲಾಗುವುದು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು, ಮಾಜಿ ರಾಷ್ಟ್ರಪತಿಗಳು, ಉಪಪ್ರಧಾನಮಂತ್ರಿ,ಭಾರತದ ಮುಖ್ಯ ನ್ಯಾಯಮೂರ್ತಿಯೊಂದಿಗೆ ಕೂರಿಸಲಾಗುವುದು, ಆದರೆ ಲೋಕಸಭೆಯ ಸ್ಪೀಕರ್‌ಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.
ಪ್ರಶಸ್ತಿ ಪಡೆದವರು ಒಂದು ಪದಕ, ಒಂದು ಮಿನಿಯೇಚರ್ ಮತ್ತು ಭಾರತದ ರಾಷ್ಟ್ರಪತಿಯಿಂದ ಸಹಿ ಮಾಡಲಾದ ಪ್ರಮಾಣಪತ್ರವನ್ನು ಪಡೆಯುತ್ತಾರೆ.
ಭಾರತ ಸರ್ಕಾರವು ಕೆಲವು ಪ್ರಶಸ್ತಿಗಳನ್ನು ತೆರಿಗೆ ಮುಕ್ತವೆಂದು ಘೋಷಿಸಿದೆ. ಭಾರತ ರತ್ನ ಪ್ರಶಸ್ತಿ ಪಡೆದವರು ಈ ಸೌಲಭ್ಯದಿಂದ ಖುಷಿಪಡುತ್ತಾರೆ. ಉದಾಹರಣೆಗೆ, ಸಚಿನ್ ತೆಂಡೂಲ್ಕರ್ ಪಡೆದ ಪ್ರಶಸ್ತಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
ಭಾರತ ರತ್ನ ಪ್ರಶಸ್ತಿ ಆರಂಭದಲ್ಲಿ ಪಡೆದವರು
ಸಿ ರಾಜಗೋಪಾಲಚಾರಿ, ಸ್ವಾತಂತ್ರ್ಯ ಹೋರಾಟಗಾರರು
ಸರ್ವೇಪಲ್ಲಿ ರಾಧಾಕೃಷ್ಣನ್,
ಸಿವಿ ರಾಮನ್
ಭಗವಾನ್ ದಾಸ್
ಎಂ ವಿಶ್ವೇಶ್ವರಯ್ಯ
ಜವಹರ್‌ಲಾಲ್ ನೆಹರು
