ಭಾರತ್‌ ಜೋಡೋ ಯಶಸ್ಸು: ಶ್ರೀನಿವಾಸ್‌ಗೆ ರಾಹುಲ್‌ ಗಾಂಧಿ ಶ್ಲಾಘನೆ

ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯನ್ನು ಯಶಸ್ಸಿಗೆ ಕಾರಣರಾಗಿದ್ದಕ್ಕೆ ಯುವಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವರನ್ನು ಪ್ರಶಂಸೆ ವ್ಯಕ್ತಪಡಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ. 

Bharat Jodo Yatra success Rahul Gandhi praises BV Srinivas gvd

ನವದೆಹಲಿ (ಏ.05): ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯನ್ನು ಯಶಸ್ಸಿಗೆ ಕಾರಣರಾಗಿದ್ದಕ್ಕೆ ಯುವಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವರನ್ನು ಪ್ರಶಂಸೆ ವ್ಯಕ್ತಪಡಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ. ರಾಹುಲ್‌ ತಮ್ಮ ಪತ್ರದಲ್ಲಿ, ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದಕ್ಕೆ ನೀವು ನಿಮ್ಮ ದಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಯಾತ್ರೆಯ ಯಶಸ್ಸಿಗೆ ದುಡಿದ ನಿಮ್ಮ ಕಾರ್ಯಕರ್ತರ ಶ್ರಮ ಮೆಚ್ಚುವಂತದ್ದು ಎಂದು ಹೊಗಳಿಕೆ ನುಡಿದಿದ್ದಾರೆ.

ಇದರೊಂದಿಗೆ ಎರಡು ತಿಂಗಳ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅನ್ಯಾಯಕ್ಕೆ ಒಳಗಾದವರ ಪರವಾಗಿ ಮಿಡಿದಿದೆ. ಈ ಯಾತ್ರೆ ವೇಳೆ ಬಿಜೆಪಿಯ ಒಡೆದು ಆಳುವ ನೀತಿಗೆ ನಾವು ಸಾಕ್ಷಿಯಾಗಿದ್ದೇವೆ. ಮುಂದೆ ದೇಶದ ಒಳಿತಿಗಾಗಿ ನಡೆವ ಕಾರ್ಯಗಳಿಗೆಲ್ಲ ನೀವು ಹಾಗೂ ಭಾರತೀಯ ಯುವ ಕಾಂಗ್ರೆಸ್‌ ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ಭಾವಿಸಿದ್ದೇನೆ’ ಎಂದು ಮೆಚ್ಚುಗೆ ಮಾತನ್ನು ಬರೆದಿದ್ದಾರೆ.

ರಾಹುಲ್‌ ಆಸ್ತಿ ಕೇವಲ ₹20 ಕೋಟಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಳಿ ತಮ್ಮ ಬಳಿ ಒಟ್ಟು 20 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ಇದರಲ್ಲಿ 55,000 ರು. ನಗದು, ಬ್ಯಾಂಕಿನಲ್ಲಿ 26.25 ಲಕ್ಷ ರು. ಠೇವಣಿ, ಮ್ಯೂಚುವಲ್‌ ಫಂಡ್‌, ಬಾಂಡ್‌, ಷೇರುಗಳಲ್ಲಿ 8.5 ಕೋಟಿ ರು. ಹೂಡಿಕೆ. ಎಸ್‌ಬಿಐನ ಪಿಪಿಎಫ್‌ ಖಾತೆಯಲ್ಲಿ 61.5 ಲಕ್ಷ ರು., 4.2 ಕೋಟಿ ರು. ಮೌಲ್ಯದ ಚಿನ್ನಾಭರಣ, ದೆಹಲಿಯ ಮೆಹ್ರೌಲಿಯಲ್ಲಿ 11 ಕೋಟಿ ರು. ಮೌಲ್ಯದ ಕೃಷಿಭೂಮಿಯನ್ನು ಪ್ರಿಯಾಂಕಾ ಗಾಂಧಿ ಜೊತೆ ಹೊಂದಿದ್ದಾರೆ ಎಂದು ಮಾಹಿತಿ ಸಲ್ಲಿಸಿದ್ದಾರೆ. ಜೊತೆಗೆ ಸೂರತ್ ನ್ಯಾಯಾಲಯ ಪ್ರಕರಣವೊಂದರಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪಟ್ಟಣಂತಿಟ್ಟದಲ್ಲಿ ಪಟ್ಟಕ್ಕೆ ಆ್ಯಂಟನಿ v/s ಆ್ಯಂಟನಿ ಹಣಾಹಣಿ: ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಸಾಹಸ

ರಾಹುಲ್‌ ನಾಮಪತ್ರ: ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ರಾಹುಲ್‌ ಗಾಂಧಿ ಕೇರಳದ ವಯನಾಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸೋದರಿ ಪ್ರಿಯಾಂಕಾ ಗಾಂಧಿ, ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಕಲ್ಪೆಟ್ಟಾದಿಂದ ಸಿವಿಲ್‌ ಸ್ಟೇಷನ್‌ವರೆಗೂ ರಾಹುಲ್‌ ಗಾಂಧಿ ಭರ್ಜರಿ ರೋಡ್‌ ಶೋ ನಡೆಸಿದರು. ಈ ವೇಳೆ ಅವರೊಂದಿಗೆ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಹೆಜ್ಜೆ ಹಾಕಿದರು. 2019ರಲ್ಲಿ ರಾಹುಲ್‌ ಗಾಂಧಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಿಪಿಐನ ಪಿ.ಪಿ.ಸುನೀರ್ ವಿರುದ್ಧ ಗೆಲುವು ಸಾಧಿಸಿದ್ದರು.

Latest Videos
Follow Us:
Download App:
  • android
  • ios