Asianet Suvarna News Asianet Suvarna News

2ನೇ ಡೋಸ್‌ ಕೊಟ್ಟ 6 ತಿಂಗಳ ಬಳಿಕ ಬೂಸ್ಟರ್ ಡೋಸ್: ಭಾರತ್ ಬಯೋಟೆಕ್!

* ಕೊರೋನಾ ತಡೆಯಲು ವಿಶ್ವಾದ್ಯಂತ ನಡೆಯುತ್ತಿದೆ ಲಸಿಕೆ ಅಭಿಯಾನ

* ಎರಡು ಸೋಸ್‌ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲು ಚಿಂತನೆ

* ಬೂಸ್ಟರ್‌ ಡೋಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಭಾರತ್ ಬಯೋಟೆಕ್

Bharat Biotech CMD Krishna Ella speaks on booster dose after 6 months of 2nd Covaxin shot pod
Author
Bangalore, First Published Nov 11, 2021, 1:25 PM IST
  • Facebook
  • Twitter
  • Whatsapp

ನವದೆಹಲಿ(ನ.11): ವಿಶ್ವಾದ್ಯಂತ ಜನಸಂಖ್ಯೆ ಹೆಚ್ಚಿರುವ ಕೆಲ ಭಾಗಗಳಿಗೆ ಬೂಸ್ಟರ್ ಡೋಸ್‌ಗಳನ್ನು (Booster Dose) ನೀಡುವ ಚರ್ಚೆ ಇದೆ. ಹೀಗಿರುವಾಗ, ಭಾರತ್ ಬಯೋಟೆಕ್ (Bharat Biotech) ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ (Dr Krishna Ella) ಕೊರೋನಾ ಲಸಿಕೆಯ (vaccine) ಎರಡನೇ ಡೋಸ್ ನೀಡಿದ ಆರು ತಿಂಗಳ ಬಳಿಕ ಬೂಸ್ಟರ್ ಡೋಸ್ ನೀಡಬಹುದು ಎಂದು ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ

ಇದುವರೆಗೆ ಬೂಸ್ಟರ್ ಡೋಸ್ ತುರ್ತಾಗಿ ಅಗತ್ಯವಿಲ್ಲ ಎಂದು ಸರ್ಕಾರ ಮತ್ತು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದ ಎಲಾ, ಇದಕ್ಕೂ ಮೊದಲು, ಎರಡೂ ಲಸಿಕೆಗಳನ್ನು ನೀಡುವ ಗುರಿಯೇ ಆದ್ಯತೆಯಾಗಿತ್ತು. ಆದಾಗ್ಯೂ, ಕೆಲವು ದೇಶಗಳು ತಮ್ಮ ವಯಸ್ಸಾದ ಜನಸಂಖ್ಯೆಗೆ ಬೂಸ್ಟರ್ ಡೋಸ್‌ಗಳನ್ನು ಪರಿಚಯಿಸಿವೆ ಎಂದು ಟೈಮ್ಸ್ ನೌ ಶೃಂಗಸಭೆ 2021 ರಲ್ಲಿ ಎಲಾ ಇದನ್ನು ಹೇಳಿದ್ದಾರೆ.

ಮೂಗಿನ ಲಸಿಕೆ ಬೂಸ್ಟರ್ ಡೋಸ್ ಆಗಿರಬಹುದು

ಭಾರತ್ ಬಯೋಟೆಕ್ (Bharat Biotech) ಮೂಗಿನ ಮೂಲಕ ನೀಡಲಾಗುವ ಲಸಿಕೆಯನ್ನು ಬೂಸ್ಟರ್ ಡೋಸ್ (Booster Dose)ಆಗಿ ತರಲು ಯೋಚಿಸುತ್ತಿದೆ ಎಂದು ಎಲಾ ಹೇಳಿದ್ದಾರೆ. ಅವರ ಪ್ರಕಾರ, ಇಡೀ ಪ್ರಪಂಚದ ಜನತೆ ಮೂಗಿನ ಮೂಲಕ ಲಸಿಕೆಯನ್ನು ಬಯಸುತ್ತದೆ. ಸೋಂಕನ್ನು ತಡೆಗಟ್ಟಲು ಇದು ಏಕೈಕ ಮಾರ್ಗವಾಗಿದೆ. ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದೃಷ್ಟವಶಾತ್, ಭಾರತ್ ಬಯೋಟೆಕ್ ಅದನ್ನು ಕಂಡುಹಿಡಿದಿದೆ. ನಾವು ಮೂಗಿನ ಮೂಲಕ ನೀಡುವ ಲಸಿಕೆಯನ್ನು (vaccine) ಪರಿಚಯಿಸುತ್ತಿದ್ದೇವೆ. ಎರಡನೇ ಡೋಸ್ ಕೋವಾಕ್ಸಿನ್ ಅನ್ನು ಮೂಗಿನ ಮೂಲಕ ನೀಡಬಹುದೇ ಎಂದು ನಾವು ನೋಡುತ್ತಿದ್ದೇವೆ. ಕಾರ್ಯತಂತ್ರವಾಗಿ, ವೈಜ್ಞಾನಿಕವಾಗಿ ಮುಖ್ಯವಾಗಿದೆ, ಏಕೆಂದರೆ ನೀವು ಎರಡನೇ ಡೋಸ್ ಅನ್ನು ಮೂಗಿನ ಮೂಲಕ ನೀಡಿದರೆ, ನೀವು ಸೋಂಕನ್ನು ತಡೆಯಬಹುದು. ಕೋವಾಕ್ಸಿನ್‌ನ (Covaxin) ಎರಡನೇ ಡೋಸ್ ಬದಲಿಗೆ ಮೂಗಿನ ಲಸಿಕೆಯನ್ನು ಸಹ ನೀಡಬಹುದು ಎಂಬ ಸುಳಿವು ನೀಡಿದ್ದಾರೆ.

ಝೀಕಾ ವಿರೋಧಿ ಲಸಿಕೆ ತಯಾರಿಸಲಾಗಿದೆ, ಪ್ರಯೋಗದ ಮೊದಲ ಹಂತ ಪೂರ್ಣಗೊಂಡಿದೆ

ಭಾರತ್ ಬಯೋಟೆಕ್ ಆ್ಯಂಟಿ ಝೀಕಾ ವೈರಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಎಲಾ ಹೇಳಿದ್ದಾರೆ. ಇದರ ಮೊದಲ ಹಂತ ಪೂರ್ಣಗೊಂಡಿದೆ. ಪ್ರಕರಣಗಳು ಹೆಚ್ಚು ಇರುವುದರಿಂದ ಸರ್ಕಾರ ಹೆಚ್ಚಿನ ಪ್ರಯೋಗ ನಡೆಸಬೇಕಾಗುತ್ತದೆ. 2014ರಲ್ಲಿ ಝೀಕಾ ವಿರೋಧಿ ಲಸಿಕೆ ತಯಾರಿಸಿದ ವಿಶ್ವದ ಮೊದಲ ಕಂಪನಿ ನಾವು ಎಂದು ಅವರು ಹೇಳಿದ್ದಾರೆ. ಝೀಕಾ ವಿರೋಧಿ ಲಸಿಕೆಗಾಗಿ ಜಾಗತಿಕ ಪೇಟೆಂಟ್‌ಗಾಗಿ ನಾವು ಮೊದಲು ಅರ್ಜಿ ಸಲ್ಲಿಸಿದ್ದೇವೆ ಎಂದೂ ತಿಳಿಸಿದ್ದಾರೆ.
 

Follow Us:
Download App:
  • android
  • ios