Asianet Suvarna News Asianet Suvarna News

ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ, ದೇಶಾದ್ಯಂತ ಪ್ರತಿಭಟನೆ ಕಾರಣ ಯಾವ ಸೇವೆ ಅಲಭ್ಯ?

ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಈ ಬಂದ್ ಕುರಿತು ಭಾರಿ ಚರ್ಚೆಯಾಗುತ್ತಿದೆ. ಪೋಸ್ಟ್‌ಗಳು ಹರಿದಾಡುತ್ತಿದೆ. ಈ ಬಂದ್ ಯಾವ ಕಾರಣಕ್ಕೆ ನಡೆಯುತ್ತಿದೆ. ಯಾವ ಸೇವೆಗಳು ಇರಲಿದೆ?
 

Bharat bandh on august 21st against supreme court order on reservation for sc tribes ckm
Author
First Published Aug 18, 2024, 9:34 PM IST | Last Updated Aug 18, 2024, 9:34 PM IST

ನವದೆಹಲಿ(ಆ.18) ದೇಶದ ಹಲವು ಭಾಗದಲ್ಲಿ ಕೋಲ್ಕತಾ ವೈದ್ಯೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇತ್ತಒಂದೊಂದು ರಾಜ್ಯಗಳಲ್ಲಿ ಒಂದೊಂದು ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆ ಆಗಸ್ಟ್ 21ಕ್ಕೆ ಭಾರತ್ ಬಂದ್ ಕರೆ ನೀಡಲಾಗಿದೆ. ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಈ ಭಾರತ್ ಬಂದ್‌ಗೆ ಕರೆ ನೀಡಿದೆ. ಇದು ಪ್ರಮುಖವಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಮೀಸಲಾತಿ ಕುರಿತು ತೀರ್ಪಿನ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ. ಕೋರ್ಟ್ ಆದೇಶ ಹಿಂಪಡೆದು, ತಮ್ಮ ಬೇಡಿಕೆ ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆಯಾಗಿದೆ.

ಭಾರತ್ ಬಂದ್ ಕರೆ ನೀಡಿದ ಬೆನ್ನಲ್ಲೇ ಎಲ್ಲಾ ರಾಜ್ಯದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಖಡಕ್ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಯಾವುಗೃದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಕೆಲ ಸ್ಥಳಗಳನ್ನು ಗುರುತಿಸಿ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ.ಪ್ರಮುಖವಾಗಿ ಉತ್ತರ ಪ್ರದೇಶ ಸೇರಿದಂತೆ ಕೆಲ ಉತ್ತರ ರಾಜ್ಯಗಳಲ್ಲಿ ಈ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ತೀವ್ರ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಪ್ರಾಸಿಕ್ಯೂಷನ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ; 'ಇದೇನಾ ನಿಮ್ಮ ಸಂವಿಧಾನ ರಕ್ಷಣೆ?' ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ!

ಆಗಸ್ಟ್ 1 ರಂದು ಸುಪ್ರೀ ಕೋರ್ಟ್ ಪರಿಶಿಷ್ಠ ಜಾತಿ ಹಾಗೂ ಬುಡುಕಟ್ಟು ಸಮುದಾಯದ ಮೀಸಲಾತಿ ಕುರಿತು ಮಹತ್ವದ ಆದೇಶ ನೀಡಿದೆ. ರಾಜ್ಯ ಸರ್ಕಾರಗಳು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಬುಡಕಟ್ಟು ಸಮುದಾಯದಲ್ಲಿ ಸಬ್ ಕೆಟರಿ ರಚಿಸಿ ನಿಜಕ್ಕೂ ಅಗತ್ಯವಿರು ಪಂಗಡಗಳಿಗೆ ಮೀಸಲಾತಿ ನೀಡಬಹುದು ಎಂದು ತೀರ್ಪು ನೀಡಿದೆ. ಇದು ಪರಿಶಿಷ್ಠ ಜಾತಿ ಹಾಗೂ ಬುಡಕಟ್ಟು ಸಮುದಾಯದ ಮೀಸಲಾತಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಹೋರಾಟ ಆರಂಭಗೊಂಡಿದೆ. ಇದೀಗ ಭಾರತ್ ಬಂದ್‌ಗೆ ಕರೆ ನೀಡುವಷ್ಟರ ಮಟ್ಟಿಗೆ ಹೋರಾಟ ತೀವ್ರಗೊಂಡಿದೆ. ಬಹುಜನ್ ಸಂಘಟನೆ ಕೂಡ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. 

ಪ್ರತಿಭಟನೆ ತೀವ್ರಗೊಳ್ಳುವ ರಾಜ್ಯಗಳಲ್ಲಿ ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ. ಸಾರ್ವಜನಿಕ ಸಾರಿಗೆ, ಸೇರಿದಂತೆ ಇತರ ಸಾರಿಗೆ ಸೇವೆಗಳು ಬಂದ್ ಆಗಲಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಆದರೆ ಸದ್ಯ ಕೇವಲ 2 ಸಂಘಟನೆಗಳು ಮಾತ್ರ ಬಂದ್ ಕುರಿತು ಹೋರಾಟ ಶುರುಮಾಡಿದೆ. ಹೀಗಾಗಿ ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ಕೆಲ ರಾಜ್ಯಗಳಲ್ಲಿ ಈ ಬಂದ್ ತೀವ್ರಗೊಳ್ಳುವ ಸಾಧ್ಯತೆ ಇದೆ. ಇನ್ನುಳಿದ ರಾಜ್ಯಗಳಲ್ಲಿ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ದೇಶಾದ್ಯಂತ ವೈದ್ಯರು ಮುಷ್ಕರ ನಡೆಸುತ್ತಿರುವುದೇಕೆ?: ಕೋಲ್ಕತಾ ಆಸ್ಪತ್ರೆಯಲ್ಲಿ ಆ.9 ರಂದು ಆಗಿದ್ದೇನು?

Latest Videos
Follow Us:
Download App:
  • android
  • ios