Asianet Suvarna News Asianet Suvarna News

ಭಾನ್ವರಿ ದೇವಿ ಕೊಲೆ ಆರೋಪಿ, ಮಾಜಿ ಸಚಿವ ಮದೇರ್ಣಾ ಕ್ಯಾನ್ಸ​ರ್‌ಗೆ ಬಲಿ!

* 2011ರಲ್ಲಿ ರಾಜಸ್ಥಾನದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಭಾನ್ವರಿ ದೇವಿ ಕೊಲೆ ಪ್ರಕರಣ

* ಭಾನ್ವರಿ ದೇವಿ ಕೊಲೆ ಆರೋಪಿ, ಮಾಜಿ ಸಚಿವ ಮದೇರ್ಣಾ ಕ್ಯಾನ್ಸ​ರ್‌ಗೆ ಬಲಿ

Bhanwari Devi murder case key accused Mahipal Maderna dies after fight with cancer pod
Author
Bangalore, First Published Oct 18, 2021, 10:05 AM IST
  • Facebook
  • Twitter
  • Whatsapp

ಜೋಧಪುರ(ಅ.18): 2011ರಲ್ಲಿ ರಾಜಸ್ಥಾನದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಭಾನ್ವರಿ ದೇವಿ ಕೊಲೆ ಪ್ರಕರಣದ(Bhanwari Devi Murder Case) ಪ್ರಮುಖ ಆರೋಪಿ, ರಾಜಸ್ಥಾನ ಸರ್ಕಾರದ ಮಾಜಿ ಸಚಿವ ಮಹಿಪಾಲ್‌ ಮದೆರ್ನಾ(Mahipal Maderna) ಕ್ಯಾನ್ಸರ್‌ನಿಂದ(Cancer) ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

2011ರಲ್ಲಿ ಅಶೋಕ್‌ ಗೆಹ್ಲೋಟ್‌(Ashok Gehlot) ನೇತೃತ್ವದ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿದ್ದ ಮಹಿಪಾಲ್‌(Mahipal Maderna), ಸಹಾಯಕ ಸೂಲಗಿತ್ತಿಯಾಗಿ ಕೆಲಸ ಮಾಡುತ್ತಿದ್ದ ಭಾನ್ವರಿ ದೇವಿಯ ಕಿಡ್ನಾಪ್‌ ಮತ್ತು ಕೊಲೆ ಆರೋಪ ಎದುರಿಸುತ್ತಿದ್ದ. ಸಮಾಜ ಸೇವಕಿಯೂ ಆಗಿದ್ದ ಭಂವ​ರಿದೇವಿಯ ಬಳಿ ಸಚಿವರ ಲೈಂಗಿಕ ಹಗರಣದ ಸಿಡಿ ಇತ್ತು. ಇದೇ ಕಾರಣಕ್ಕಾಗಿ ಅಪಹರಿಸಿ ಹತ್ಯೆಗೈಯಲಾಗಿತ್ತು ಎಂಬ ಆರೋಪವಿತ್ತು.

ಕೇರಳದ ಕೋವಿಡ್ ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ಕಿರುಕುಳ!

2011ರ ಸೆಪ್ಟಂಬರ್‌ 1ರಂದು ಭಾನ್ವರಿ ದೇವಿಯನ್ನು(Bhanwari Devi) ಅಪಹರಿಸಿ ಕೊಲೆಗೈಯಲಾಗಿತ್ತು. ಸಚಿವರ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅಕ್ಟೋಬರ್‌ನಲ್ಲಿ ಮಹಿಪಾಲ್‌ರನ್ನು ಸಂಪುಟದಿಂದ ವಜಾಗೊಳಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದರು. ಸಿಬಿಐ ತನಿಖೆಯಲ್ಲಿ ಮಹಿಪಾಲ್‌ ವಿರುದ್ಧದ ಆರೋಪ ಕೂಡ ಸಾಬೀತಾಗಿತ್ತು.

ಬಾಲ್ಯವಿವಾಹ(Child marriage) ತಡೆಗಟ್ಟುವ ನಿಟ್ಟಿನಲ್ಲಿ ಹೋರಾಡುತ್ತಿದ್ದ ಭಾನ್ವರಿ ದೇವಿಯ ಮೇಲೆ 1995ರಲ್ಲಿ ಐವರು ಅತ್ಯಾಚಾರ ಎಸಗಿದ ಕರಾಳ ಘಟನೆಯೂ ನಡೆದಿತ್ತು.

ಕೆಳಜಾತಿಯವರ ಮೇಲೆ ಮೇಲ್ಜಾತಿಯವರಿಂದ ಅತ್ಯಾಚಾರ ಆಗಲ್ಲ ಎಂದಿದ್ದ ಕೋರ್ಟ್ 

1992ರಲ್ಲಿ ರಾಜಸ್ಥಾನದಲ್ಲಿ ನಡೆದ ಭಾನ್ವರಿ ದೇವಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಯಿತು. ಕುಂಬಾರ ಜಾತಿಗೆ ಸೇರಿದ ಹಾಗೂ ರಾಜ್ಯ ಸರಕಾರದ ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮದ ಸ್ನೇಹಿತೆ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾನ್ವರಿ ದೇವಿಯ ಮೇಲೆ ಶ್ರೀಮಂತ ಗುಜ್ಜರ್ ಜಾತಿಗೆ ಸೇರಿದ ಐವರು ಪುರುಷರು ಅತ್ಯಾಚಾರವೆಸಗಿದ್ದರು. ಈ ಕುರಿತು ಸಂತ್ರಸ್ತೆ ದೂರು ನೀಡಿದಾಗ ರಾಜಸ್ಥಾನ ನ್ಯಾಯಾಲಯವು ಮೇಲ್ಜಾತಿಯ ಪುರುಷರು ಕೆಳಜಾತಿಯ ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದಿಲ್ಲವೆಂದು ತೀರ್ಪು ನೀಡಿತ್ತು, ಇದು ಇಡೀ ದೇಶದಲ್ಲಿ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಬಸ್ ನಲ್ಲೇ ಕಾಮುಕನಿಂದ ವಿದ್ಯಾರ್ಥಿನಿ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ

ಕಾರ್ಯಕ್ಷೇತ್ರದಲ್ಲಿ ಮಹಿಳೆಗೆ ರಕ್ಷಣೆ

ಮಹಿಳೆ ಕಾರ್ಯನಿರ್ವಹಿಸುವ ಸ್ಥಳದಲ್ಲಿ, ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಇಲ್ಲಿ ಆಕೆಗೆ ರಕ್ಷಣೆ ಕೊಡಲು ಲೈಂಗಿಕ ದೌರ್ಜನ್ಯ ತಡೆಯಲು ಸುಪ್ರಿಂ ಕೋರ್ಟ್‌ ಜಾರಿಗೊಳಿಸಿರುವ ಮಾರ್ಗಸೂಚಿಗೆ ಮೂಲ ಕಾರಣವೇ ಈ ಭಾನ್ವರಿ ದೇವಿ ಪ್ರಕರಣ ಎಂಬುವುದು ಉಲ್ಲೇಖನೀಯ. ದುರಾದೃಷ್ಟವಶಾತ್ ಭಾನ್ವರಿ ಮೇಲೆ ದೌರ್ಜನ್ಯವೆಸಗಿದ್ದ ಆರೋಪಿಗಳು ಮಾತ್ರ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿದ್ದರು.

Follow Us:
Download App:
  • android
  • ios