Asianet Suvarna News Asianet Suvarna News

ಜೆಎನ್‌ಯುನಲ್ಲಿ ಭಾಗವಾ ಪೋಸ್ಟರ್‌, ಧ್ವಜ ಪ್ರತ್ಯಕ್ಷ: ಪೊಲೀಸರಿಂದ ತೆರವು

  • ಭಗವಾ ಧ್ವಜಕ್ಕೆ ಅವಮಾನದ ವಿರುದ್ಧ ಪ್ರತೀಕಾರದ ಎಚ್ಚರಿಕೆ
  • ಪೊಲೀಸರ ಮಧ್ಯಪ್ರವೇಶ: ಪೋಸ್ಟರ್‌, ಧ್ವಜ ತೆರವು
  • ಜೆಎನ್‌ಯುನಲ್ಲಿ ಭಾಗವಾ ಪೋಸ್ಟರ್‌ ಪತ್ತೆ
Bhagwa Saffron JNU Posters Days After Clash Over Non-Vegetarian Food at JNU Delhi akb
Author
Bangalore, First Published Apr 16, 2022, 4:15 AM IST

ನವದೆಹಲಿ: ಹಿಂದೂ ಸೇನೆ ಸಂಘಟನೆಯು ಜವಾಹರಲಾಲ್‌ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಮುಖ ಪ್ರವೇಶ ದ್ವಾರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ‘ಭಗವಾ ಜೆಎನ್‌ಯು’ ಎಂಬ ಪೋಸ್ಟರ್‌ ಹಚ್ಚಿ ಬಳಿಕ ಕೇಸರಿ ಧ್ವಜ ಹಾರಿಸಿದೆ.ಜೆಎನ್‌ಯು ಹಾಸ್ಟೆಲ್‌ನಲ್ಲಿ ರಾಮನವಮಿಯಂದು ಮಾಂಸಾಹಾರ ಸೇವನೆ ವಿವಾದ ಏರ್ಪಟ್ಟ ಬೆನ್ನಲ್ಲೇ ಈ ಪ್ರಸಂಗ ನಡೆದಿದೆ. ಕೇಸರಿ ಧ್ವಜವನ್ನು ಅವಮಾನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ‘ಜೆಎನ್‌ಯುನಲ್ಲಿ ಸದಾ ಕೇಸರಿಯನ್ನು (Saffron) ಅವಮಾನಿಸಲಾಗುತ್ತಿದೆ. ನಾವಿದನ್ನು ಸಹಿಸುವುದಿಲ್ಲ. ಇಂತಹ ಕೃತ್ಯ ಮಾಡುತ್ತಿರುವವರಿಗೆ ಕೂಡಲೇ ಸುಧಾರಿಸಿಕೊಳ್ಳಿ ಎಂದು ನಾವು ಎಚ್ಚರಿಕೆ ನೀಡಲು ಬಯಸುತ್ತೇವೆ. ನಾವು ಎಲ್ಲ ಧರ್ಮವನ್ನೂ ಗೌರವಿಸುತ್ತೇವೆ. ಆದರೆ ಕೇಸರಿಯ ಅವಮಾನ ಸಹಿಸುವುದಿಲ್ಲ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ (Vishnu Gupta) ಎಚ್ಚರಿಸಿದ್ದಾರೆ.

ಆದರೆ ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿದ್ದು, ಜೆಎನ್‌ಯು ಆವರಣದಿಂದ ಕೇಸರಿ ಧ್ವಜವನ್ನು ತೆಗೆದು ಹಾಕಿದ್ದಾರೆ. ‘ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಪೊಲೀಸ್‌ ಆಯುಕ್ತ ಮನೋಜ್‌ ಸಿ. (Manoj C) ಹೇಳಿದ್ದಾರೆ. ದೆಹಲಿಯ ಪ್ರತಿಷ್ಠಿತ ಜವಾಹರ್‌ಲಾಲ್‌ ವಿಶ್ವವಿದ್ಯಾಲಯದಲ್ಲಿ (Jawaharlal University in Delhi) ರಾಮನವಮಿ (Ramanavami Festival) ಪೂಜೆ ಮತ್ತು ಮಾಂಸಾಹಾರ ಸೇವನೆ ವಿಚಾರವಾಗಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಭಾನುವಾರ ಭಾರಿ ಸಂಘರ್ಷ ನಡೆದು ಹೊಡಿಬಡಿ ನಡೆದಿತ್ತು.

JNU clash ಜೆಎನ್‌ಯುನಲ್ಲಿ ಮಾರಾಮಾರಿ, ವಿದ್ಯಾರ್ಥಿ ಸಂಘಟನೆಗಳ ಬಡಿದಾಟದಲ್ಲಿ ಹಲವರಿಗೆ ಗಾಯ!
ಭಾನುವಾರ ಜೆಎನ್‌ಯು ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ (Kaveri Hostel) ಮಾಂಸಾಹಾರ ಸೇವನೆ ಮತ್ತು ರಾಮನವಮಿ ಪೂಜೆ ವಿಷಯವಾಗಿ ಎಡಪಂಥೀಯ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಅದು ಹಿಂಸಾಚಾರಕ್ಕೆ ತಿರುಗಿತ್ತು. ಎರಡೂ ಗುಂಪಿನ ವಿದ್ಯಾರ್ಥಿಗಳು ಪರಸ್ಪರ ಕಲ್ಲುತೂರಾಟ ನಡೆಸಿದ ಪರಿಣಾಮ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದರು.

ಹಿಂಸೆ ಸಹಿಸಲ್ಲ: ವಿದ್ಯಾರ್ಥಿಗಳಿಗೆ ಜೆಎನ್‌ಯು ಎಚ್ಚರಿಕೆ
ಈ ಮಧ್ಯೆ ವಿಶ್ವವಿದ್ಯಾಲಯದಲ್ಲಿ ಮಾಂಸಾಹಾರ ಸೇವನೆಗೆ ಅಡ್ಡಿಪಡಿಸಿ ದಾಂಧಲೆ ನಡೆಸಿದ ಆರೋಪ ಸಂಬಂಧ ಅನಾಮಧೆಯ ಎಬಿವಿಪಿ ಕಾರ್ಯಕರ್ತರ (ABVP activists) ವಿರುದ್ಧ ದೆಹಲಿ ಪೊಲೀಸರು (Delhi Police) ಪ್ರಕರಣ ದಾಖಲಿಸಿದ್ದರು. ಜೊತೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಈ ಮುಂಚೆ ಕ್ಯಾಂಪಸ್‌ ಹೊರಗೆ ಮಾತ್ರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಭಾನುವಾರ ನಡೆದ ಹಿಂಸಾಚಾರ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಒಳಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಮಾಂಸಾಹಾರ ಸೇವನೆ ಮಾಡದಂತೆ ದಾಂಧಲೆ ಎಬ್ಬಿಸಿ, ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಎಡಪಂಥೀಯ ವಿದ್ಯಾರ್ಥಿಗಳು (left-wing students)ಸೋಮವಾರ ಕ್ಯಾಂಪಸ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು.
 

Follow Us:
Download App:
  • android
  • ios