ಕೋಳಿ ಅಂಕದಂತೆ ನಾಯಿ ಅಂಕ : ಬೆಟ್ಟಿಂಗ್ ಕಟ್ಟಿ ನಾಯಿಗಳ ಕಚ್ಚಾಡಿಸುತ್ತಿದ್ದ 80 ಜನರ ಬಂಧನ

ರಾಜಸ್ಥಾನದಲ್ಲಿ ನಾಯಿಗಳನ್ನು ಕಾದಾಟಕ್ಕೆ ಬಿಟ್ಟು ಜೂಜಾಡುತ್ತಿದ್ದ 80 ಜನರನ್ನು ಬಂಧಿಸಲಾಗಿದೆ. 19 ವಿದೇಶಿ ತಳಿ ನಾಯಿಗಳನ್ನು ರಕ್ಷಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ಮತ್ತು ಜೂಜು ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

betting on Dog Fighting Rajasthan Police Raid farm house in Hanumangarh 80 arrested

ಜನ ಗ್ರಾಮೀಣ ಪ್ರದೇಶದಲ್ಲಿ ಕೋಳಿ ಅಂಕ( ಕೋಳಿ ಕಟ್ಟ) ಆಡುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಎರಡು ಕೋಳಿಗಳ ಕಾಲಿಗೆ ಹರಿತವಾದ ಚೂರಿಯನ್ನು ಕಟ್ಟಿ ಕಾದಾಟಕ್ಕೆ ಬಿಡಲಾಗುತ್ತದೆ. ಕಾದಾಟಕ್ಕೆ ಇಳಿದ ಕೋಳಿಗಳ ಪರ ಹಾಗೂ ವಿರುದ್ಧವಾಗಿ ಕೋಳಿಗಳ ಮಾಲೀಕರು ಸೇರಿದಂತೆ ಅಲ್ಲಿದ್ದ ಇತರರು ಬೆಟ್ ಕಟ್ಟುತ್ತಾರೆ. ಈ ಜೂಜಿಗೆ ಕಾನೂನಿನಲ್ಲಿ ಅನುಮತಿ ಇಲ್ಲ. ಆದರೂ ಕೆಲವೊಂದು ಕಡೆ ಈ ಆಟ ನಡೆಯುತ್ತಲೇ ಇರುತ್ತದೆ. ಆದರೆ ಕೋಳಿಗಳಂತೆ ನಾಯಿಗಳನ್ನು ಕಾದಾಟಕ್ಕೆ ಬಿಟ್ಟು ಜೂಜಾಡಿದ ವಿಚಿತ್ರ ಘಟನೆ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಈ ನಾಯಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು ಒಟ್ಟು 80 ಜನರನ್ನು ಬಂಧಿಸಿದ್ದಾರೆ ಜೊತೆಗೆ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಹನುಮಾನ್‌ಗಢದ ತೋಟದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. 

ಘಟನಾ ಸ್ಥಳದಿಂದ 19 ವಿದೇಶಿ ತಳಿಯ ನಾಯಿಗಳನ್ನು ಕೂಡ ರಕ್ಷಿಸಲಾಗಿದೆ ಎಂದು ಹನುಮಾನ್‌ಗಢದ ಎಸ್‌ಪಿ ಅರ್ಷದ್ ಅಲಿ ಹೇಳಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಜನ ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿದ್ದ ಕೆಲವರ ಬಳಿ ಇದ್ದ ಪರವಾನಿಗಿ ಇದ್ದಂತಹ ಶಸ್ತ್ರಾಸ್ತ್ರಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.  ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.  ಇಲ್ಲಿ ನಾಯಿಗಳನ್ನು ಕಾಳಗಕ್ಕೆ ಇಳಿಸಿ ಅವುಗಳ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ವರೆಲ್ಲರೂ ಪಂಜಾಬ್ ಹಾಗೂ ಹರ್ಯಾಣಗೆ ಸೇರಿದವರಾಗಿದ್ದಾರೆ. ಅವರು ತಮ್ಮ ಖಾಸಗಿ ವಾಹನದಲ್ಲಿ ಈ ನಾಯಿ ಕಾಳಗಕ್ಕಾಗಿ ತಮ್ಮ ಶ್ವಾನಗಳನ್ನು ಕರೆತಂದಿದ್ದರು. ಈ ಶ್ವಾನಗಳನ್ನು ವಶಕ್ಕೆ ಪಡೆದಿದ್ದು, ಈ ಫಾರ್ಮ್ ಹೌಸ್‌ನಲ್ಲೇ ಪೊಲೀಸರ ಸುಪರ್ದಿಯಲ್ಲಿ ಇಡಲಾಗಿದೆ. ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆ ಹಾಗೂ ಜೂಜು ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಅರ್ಷದ್ ಅಲಿ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಮೊದಲ ರಾತ್ರಿಯೇ ಬೀರ್‌ ಮಟನ್‌ ಜೊತೆಗೆ ಗಾಂಜಾಗೆ ಬೇಡಿಕೆ ಇಟ್ಟ ವಧು
ಇದನ್ನೂ ಓದಿ: ಹವಾಮಾನ ಬದಲಾವಣೆಯೂ ಬೆಂಗಳೂರಿಗೆ ಜನರ ಸಾಮೂಹಿಕ ವಲಸೆಗೆ ಕಾರಣವಾಗಬಹುದು: ಮೂರ್ತಿ

Latest Videos
Follow Us:
Download App:
  • android
  • ios