ಜಿ20 ಶೃಂಗಸಭೆಗಾಗಿ ಇಂಡೋನೇಷ್ಯಾದ ಬಾಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದರೆ, 25ನೇ ವರ್ಷದ ಬೆಂಗಳೂರು ಟೆಕ್‌ ಶೃಂಗವನ್ನು ವರ್ಚುವಲ್‌ ಆಗಿ ಉದ್ಘಾಟನೆ ಮಾಡಿದರು. ಶೃಂಗವನ್ನು ಉದ್ಘಾಟನೆ ಮಾಡಿ ಭಾಷಣ ಮಾಡಿದ ಅವರು, ದೇಶದಲ್ಲಿ ಅಬಿವೃದ್ಧಿಯಲ್ಲಿ ತಂತ್ರಜ್ಞಾನದ ಕೊಡುಗೆಯನ್ನು ನೆನಪಿಸಿಕೊಂಡರು. 

ಬೆಂಗಳೂರು (ನ.16): ನಿಬಿಡ ವೇಳಾಪಟ್ಟಿಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ 25ನೇ ವರ್ಷದ ಬೆಂಗಳೂರಿ ಟೆಕ್‌ ಶೃಂಗಸಭೆಯನ್ನು ವರ್ಚುವಲ್‌ ಆಗಿ ಉದ್ಘಾಟನೆ ಮಾಡಿದ್ದಾರೆ. ಜಿ20 ಶೃಂಗಸಭೆಗಾಗಿ ಇಂಡೋನೇಷ್ಯಾದ ಬಾಲಿಯಲ್ಲಿರುವ ಪ್ರಧಾನಿ ಮೋದಿ, ಇದರ ನಡುವೆ ವರ್ಚುವಲ್‌ ಆಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರದಿಂದ ಆರಂಭವಾದ ಟೆಕ್‌ ಸಮಿಟ್‌ಗೆ ಚಾಲನೆ ನೀಡಿದರು. ಈ ವೇಳೆ ಭಾಷಣ ಮಾಡಿದ ಅವರು, ಬೆಂಗಳೂರು ಇನೋವೇಟಿವ್‌ ಸಿಟಿ. ಹೀಗೆ ಮುಂದುವರಿದರೆ, ಬೆಂಗಳೂರಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ. ಬೆಂಗಳೂರಿನಲ್ಲಿ ಹೊಸತೇನನ್ನಾದರೂ ಮಾಡುವ ಉತ್ಸಾಹಿಗಳ ದಂಡೇ ಇದೆ. ಇದು ಭಾರತದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಟೆಕ್‌ ಸಮ್ಮಿಟ್‌ನ ಬೆಳ್ಳಿ ಮಹೋತ್ಸವದ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಲಕವನ್ನೂ ಕೂಡ ಅನಾವರಣ ಮಾಡಿದ್ದಾರೆ. ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕೂಡ ಕಾರ್ಯಕ್ರಮದಲ್ಲಿದ್ದರು.



ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎಇಯ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಡಿಜಿಟಲ್ ಆರ್ಥಿಕತೆಯ ರಾಜ್ಯ ಸಚಿವ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವಾಟ್ಸ್, ಫಿನ್ನಿಷ್ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಸೇರಿದಂತೆ ಹಲವಾರು ಜಾಗತಿಕ ನಾಯಕರು ಭಾಗವಹಿಸಿದ್ದರು.

ಭಾರತದ ಮೊದಲ ಯುನಿಕಾರ್ನ್‌ ಇನ್‌ಮೋಬಿಯ ಸಂಸ್ಥಾಪಕ ಹಾಗೂ ಸಿಇಒ ನವೀನ್‌ ತೆವಾರಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 575 ಕ್ಕೂ ಹೆಚ್ಚು ಪ್ರದರ್ಶಕರನ್ನು ಆಕರ್ಷಿಸಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕನಿಷ್ಠ 9 ಎಂಒಯುಗಳಿಗೆ ಸಹಿ ಹಾಕಲಾಗುತ್ತದೆ. ಅದರೊಂದಿಗೆ 20ಕ್ಕೂ ಹೆಎಚ್ಚು ನವೀನ ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ, ದೇಶದ 16 ರಾಜ್ಯಗಳಿಗೆ ಸೇರಿದ ಸ್ಟಾರ್ಟ್‌ಅಪ್‌ಗಳು ಸಹ ಬೆಂಗಳೂರು ಟೆಕ್ ಶೃಂಗಸಭೆ 22 ರಲ್ಲಿ ಭಾಗವಹಿಸುತ್ತಿವೆ ಎಂದು ಕರ್ನಾಟಕ ಐಟಿ-ಬಿಟಿ ಸಚಿವ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ. "ಟೆಕ್‌ ಫಾರ್‌ ನೆಕ್ಸ್ಟ್‌ ಜನರೇಷನ್‌" ವಿಷಯದ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ 350 ಕ್ಕೂ ಹೆಚ್ಚು ತಜ್ಞರು ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ. ಸುಮಾರು 5000 ಉದ್ಯಮಿಗಳು ಶೃಂಗಸಭೆಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. 

Bengaluru Tech Summit 2022: ಇಂದಿನಿಂದ 3 ದಿನ ಬೆಂಗ್ಳೂರು ಟೆಕ್‌ ಶೃಂಗ, ಸಚಿವ ಅಶ್ವತ್ಥನಾರಾಯಣ

ಐಟಿ/ಬಿಟಿ ಇಲಾಖೆಯು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಸಹಯೋಗದೊಂದಿಗೆ ಆಯೋಜಿಸಿರುವ ಈವೆಂಟ್‌ನಲ್ಲಿ ಐಒಟಿ/ಡೀಪ್‌ಟೆಕ್, ಬಯೋಟೆಕ್, ಸ್ಟಾರ್ಟ್‌ಅಪ್, ಜಿಐಎ-1 ಮತ್ತು ಜಿಐಎ- 2 ಅಡಿಯಲ್ಲಿ ವರ್ಗೀಕರಿಸಲಾದ ಸುಮಾರು 75 ಸೆಷನ್‌ಗಳನ್ನು ಹೊಂದಿರುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡೇಟಾ, ಸೆಮಿಕಂಡಕ್ಟರ್, ಮೆಷಿನ್ ಲರ್ನಿಂಗ್, 5ಜಿ, ರೊಬೊಟಿಕ್ಸ್, ಫಿನ್‌ಟೆಕ್, ಜೀನ್ ಎಡಿಟಿಂಗ್ ಮೆಡಿ ಟೆಕ್, ಸ್ಪೇಸ್ ಟೆಕ್, ಜೈವಿಕ ಇಂಧನ ಸುಸ್ಥಿರತೆ ಮತ್ತು ಇ-ಮೊಬಿಲಿಟಿಯಂತಹ ಡೊಮೇನ್‌ಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಸಚಿವರು ಹೇಳಿದ್ದಾರೆ.

ನ.16ರಿಂದ ರಜತ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶ, ಪ್ರಧಾನಿ ಉದ್ಘಾಟನೆ

ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಜಿಐಎ) ಅಡಿಯಲ್ಲಿ ನಡೆಯುವ ಸೆಷನ್‌ಗಳು ಜಪಾನ್, ಫಿನ್‌ಲ್ಯಾಂಡ್, ನೆದರ್ಲ್ಯಾಂಡ್ಸ್, ಡೆನ್ಮಾರ್ಕ್, ಸ್ವೀಡನ್, ಸ್ವಿಟ್ಜರ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ಯುಎಸ್, ಲಿಥುವೇನಿಯಾ ಮತ್ತು ಕೆನಡಾ ಸೇರಿದಂತೆ 15 ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿದೆ. ಈ ದೇಶಗಳು ತಮ್ಮ ತಾಂತ್ರಿಕ ಪರಿಣಿತಿಯನ್ನು ಸಮಿಟ್‌ನಲ್ಲಿ ಪ್ರದರ್ಶನ ಮಾಡಲಿದೆ. ದಲ್ಲದೆ, ಅವರು ಭಾರತೀಯ ಉದ್ಯಮದೊಂದಿಗೆ ಸಹಕರಿಸಲು ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಸಹ ವ್ಯಕ್ತಪಡಿಸುತ್ತಾರೆ.