ಬೆಂಗಳೂರು ಮತ್ತು ತಿರುವನಂತಪುರಂ ನಡುವೆ ಓಡಾಡುವ ಪ್ರಯಾಣಿಕರಿಗೆ ದಕ್ಷಿಣ ರೈಲ್ವೆ ಸಿಹಿ ಸುದ್ದಿ ನೀಡಿದೆ. ತಿರುವನಂತಪುರಂ ಉತ್ತರ - ಎಸ್‌ಎಂವಿಟಿ ಬೆಂಗಳೂರು ಮಾರ್ಗದ ಮೂರು ವಿಶೇಷ ರೈಲುಗಳ ಸೇವೆಯನ್ನು ಜುಲೈ ತಿಂಗಳವರೆಗೂ ವಿಸ್ತರಿಸಲಾಗಿದೆ.
ಬೆಂಗಳೂರು ಮತ್ತು ತಿರುವನಂತಪುರಂ ನಡುವೆ ಸಂಚರಿಸುವ ಪ್ರಯಾಣಿಕರಿಗೆ ದಕ್ಷಿಣ ರೈಲ್ವೆ ಒಂದು ಸಂತಸದ ಸುದ್ದಿ ನೀಡಿದೆ. ಪ್ರಯಾಣಿಕರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಓಡಾಡುವ ಹಲವು ವಿಶೇಷ ರೈಲುಗಳ ಸೇವೆಯನ್ನು ಜುಲೈ ತಿಂಗಳವರೆಗೂ ವಿಸ್ತರಿಸಲು ನಿರ್ಧರಿಸಿದೆ.
ತಿರುವನಂತಪುರಂ ಉತ್ತರ - ಎಸ್‌ಎಂವಿಟಿ ಬೆಂಗಳೂರು (Thiruvananthapuram North - SMVT Bangalore) ನಡುವಿನ ಮೂರು ವಿಶೇಷ ರೈಲುಗಳ (06523/06524, 06547/06548, ಮತ್ತು 06555/06556) ಸೇವೆಯನ್ನು ವಿಸ್ತರಿಸಲಾಗಿದೆ. ಈ ರೈಲುಗಳ ಟಿಕೆಟ್ ಕಾಯ್ದಿರಿಸುವಿಕೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಸಂಖ್ಯೆ 06523/06524 ವಿವರ
ರೈಲು ಸಂಖ್ಯೆ 06523: ಈ ರೈಲು ಪ್ರತಿ ಸೋಮವಾರ ಸಂಜೆ 7:25ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 1:15ಕ್ಕೆ ತಿರುವನಂತಪುರಂ ಉತ್ತರ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 06524: ಈ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3:15ಕ್ಕೆ ತಿರುವನಂತಪುರಂ ಉತ್ತರ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 8:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 06547/06548 ವಿವರ
ರೈಲು ಸಂಖ್ಯೆ 06547: ಈ ರೈಲು ಪ್ರತಿ ಬುಧವಾರ ಸಂಜೆ 7:25ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 1:15ಕ್ಕೆ ತಿರುವನಂತಪುರಂ ಉತ್ತರ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 06548: ಈ ರೈಲು ಪ್ರತಿ ಗುರುವಾರ ಮಧ್ಯಾಹ್ನ 3:15ಕ್ಕೆ ತಿರುವನಂತಪುರಂ ಉತ್ತರ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 8:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 06555/06556 ವಿವರ
ರೈಲು ಸಂಖ್ಯೆ 06555: ಈ ರೈಲು ಪ್ರತಿ ಶುಕ್ರವಾರ ರಾತ್ರಿ 10 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2 ಗಂಟೆಗೆ ತಿರುವನಂತಪುರಂ ಉತ್ತರ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 06556: ಈ ರೈಲು ಪ್ರತಿ ಶನಿವಾರ ಮಧ್ಯಾಹ್ನ 2:15ಕ್ಕೆ ತಿರುವನಂತಪುರಂ ಉತ್ತರ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 8:15ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.


