ಹೈದರಾಬಾದ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಬೆಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವಾಗಿದೆ. ಅಪರಾಧ ಪ್ರಮಾಣ ಶೇ.೧೨ ರಷ್ಟು ಕಡಿಮೆಯಾಗಿದ್ದು, ಸೈಬರ್ ಅಪರಾಧ ಪ್ರಕರಣಗಳು ಶೇ.೩೯ ರಷ್ಟು ಇಳಿಕೆಯಾಗಿವೆ. ಡಕಾಯಿತಿ, ಕಳ್ಳತನ, ಸರಗಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ಕೋಲ್ಕತಾ ಅತ್ಯಂತ ಅಸುರಕ್ಷಿತ ನಗರವೆಂದು ವರದಿಯಾಗಿದೆ.
ನವದೆಹಲಿ(ಮೇ.14) ಭಾರತದ ಜನಸಂಖ್ಯೆ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಹಲವು ಕಾರಣಗಳಿಂದ ಆಡಳಿತಾತ್ಮಕ ಸವಾಲು ಹೆಚ್ಚು. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಕೆಲಸ. ಆದರೆ ಕೆಲ ರಾಜ್ಯಗಳು, ನಗರಗಳು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತದೆ. ನಾಗರೀತರಿಗೆ ಸುರಕ್ಷತೆ ಒದಗಿಸಲು ಹೆಚ್ಚಿನ ಶ್ರಮವಹಿಸುತ್ತದೆ. ಇದೀಗ ಭಾರತದಲ್ಲಿ ಅತೀ ಹೆಚ್ಚು ಸುರಕ್ಷಿತವಾಗಿರುವ ನಗರ ಯಾವುದು? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೈದರಾಬಾದ್ ಯುನಿವರ್ಸಿಟಿ ನಡೆಸಿದ ಅಧ್ಯಯನ ವರದಿಯಲ್ಲಿ ಬೆಂಗಳೂರು ಭಾರತದ ಗರಿಷ್ಟ ಸುರಕ್ಷಿತ ನಗರ ಅನ್ನೋ ಸಾಧನೆ ಮಾಡಿದೆ.
ಸರ್ವೆಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ
ಹೈದರಾಬಾದ್ ಯುನಿವರ್ಸಿಟಿ ನಡೆಸಿದ ಸರ್ವೆಯಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಮಾಣ ಶೇಕಡಾ 12ರಷ್ಟು ಕಡಿಮೆಯಾಗಿದೆ ಎಂದು ವರದಿ ಮಾಡಿದೆ. ಬೆಂಗಳೂರಿನಲ್ಲಿ ಸೈಬರ್ ಪ್ರಕರಣ ಸಂಖ್ಯೆ ಶೇಕಡಾ 39 ರಷ್ಟು ಇಳಿಕೆಯಾಗಿದೆ.2024ರಲ್ಲಿ ಬೆಂಗಳೂರಿನಲ್ಲಿ 4,679 ಸೈಬರ್ ಪ್ರಕರಣಗಳು ದಾಖಲಾಗಿತ್ತು. ಆದರೆ ಈ ವರ್ಷ ಸೈಬರ್ ಕ್ರೈಂ ಪ್ರಕರಣ ಸಂಖ್ಯೆ 2,838ಕ್ಕೆ ಇಳಿಕೆಯಾಗಿದೆ. ಡಕಾಯಿತ ಪ್ರಕರಣಗಳು ಶೇಕಡಾ 71ರಷ್ಟು ಇಳಿಕೆಯಾಗಿದೆ. ಇನ್ನು ಕಳ್ಳತನ ಪ್ರಕರಣಗಳು ಶೇಕಡಾ 73ರಷ್ಟು ಇಳಿಕೆಯಾಗಿದ್ದರೆ, ಸರಗಳ್ಳತನ ಪ್ರಕರಣ ಶೇಕಡಾ 57ರಷ್ಟು ಕಡಿಮೆಯಾಗಿದೆ. ಮನೆ ಒಡೆದು ದರೋಡೆ ನಡೆಸಿದ ಪ್ರಕರಣಗಳು ಶೇಕಡಾ 41ರಷ್ಟು ಇಳಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿದೆ.
ಹೊಸದಾಗಿ ಬೆಂಗಳೂರಿಗೆ ಕಾಲಿಟ್ಟ ಯುವತಿ ಬಿಚ್ಚಿಟ್ಟ ರಾತ್ರಿ 10.30ರ ಕತೆ, ಅಂದು ಏನಾಯ್ತು?
ಸುರಕ್ಷತೆ ವಿಚಾರದಲ್ಲಿ ಕೋಲ್ಕಾತಾಗೆ ಕೊನೆಯ ಸ್ಥಾನ
ಭಾರತದ ಪ್ರಮುಖ ನಗರಗಳ ಪೈಕಿ ಕೋಲ್ಕತಾದಲ್ಲಿ ಸುರಕ್ಷಿತ ಪ್ರಮಾಣ ಕಡಿಮೆ ಎಂದು ವರದಿ ಹೇಳುತ್ತಿದೆ. ಅಸುರಕ್ಷಿತ ನಗರ ಅನ್ನೋ ಹಣೆಪಟ್ಟಿಗೆ ಗುರಿಯಾಗಿದೆ. ಅಪರಾಧ, ಕಳ್ಳತನ, ಡಕಾಯಿತ ಪ್ರಕರಣ, ಸೈಬರ್ ಕ್ರೈಂ ಸೇರಿದಂತೆ ಇತರ ಕ್ರೈಂ ಸಂಖ್ಯೆ ಭಾರಿ ಹೆಚ್ಚಾಗಿದೆ. ಹೀಗಾಗಿ ಕೋಲ್ಕತಾ ಅಸುರಕ್ಷಿತ ನಗರವಾಗಿ ಕುಖ್ಯಾತಿ ಪಡೆದಿದೆ. ಕೋಲ್ಕತಾ ಪೊಲೀಸ್ ಮೇಲೂ ಜನರು ನಂಬಿಕೆ ಕಳದುಕೊಂಡಿದ್ದಾರೆ ಎಂದು ಸರ್ವೆ ಹೇಳುತ್ತಿದೆ.
ಬೆಂಗಳೂರಿಗೆ ಪ್ರತಿ ದಿನ ಸಾವಿರಾರು ಮಂದಿ ಉದ್ಯೋಗ ಹುಡುಕಿಕೊಂಡು ಬರುತ್ತಾರೆ. ಬಂದವರಿಗೆ ಉದ್ಯೋಗ, ವಿದ್ಯಾಭ್ಯಾಸ ಸೇರಿದಂತೆ ಬದುಕು ಕಟ್ಟಿಕೊಳ್ಳಲು ಬೆಂಗಳೂರು ನೆರವಾಗಿದೆ. ಇತರ ನಗರಕ್ಕಿಂತ ಹೆಚ್ಚಿನ ಉದ್ಯೋಗವಕಾಶ, ವ್ಯಾಪಾರ, ಉದ್ಯಮ ಅವಕಾಶ, ಸ್ಟಾರ್ಟ್ಅಪ್ ಅವಕಾಶಗಳು ಬೆಂಗಳೂರಿನಲ್ಲಿದೆ. ಬೆಂಗಳೂರು ಇತರ ನಗರಗಳಿಗೆ ಹೋಲಿಸಿದರೆ ಅತೀ ಹೆಚ್ಚಿನ ವೇತನ ನೀಡುವ ನಗರಗಳಲ್ಲೂ ಮುಂಚೂಣಿಯಲ್ಲಿದೆ. ಐಟಿ ಸಿಟಿ ಎಂದೇ ಗುರಿತಿಸಿಕೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನಸೆಳೆದಿದೆ.
ಬೆಂಗಳೂರಿಗೆ ಶಾಪವಾದ ಟ್ರಾಫಿಕ್
ಸುರಕ್ಷತೆ, ಉದ್ಯೋಗವಕಾಶ, ವೇತನ, ಸ್ಟಾರ್ಟ್ಅಪ್, ಐಟಿ, ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಆದರೆ ಟ್ರಾಫಿಕ್ ವಿಚಾರ ಬಂದಾಗ ಬೆಂಗಳೂರು ಎಲ್ಲರ ತಾಳ್ಮೆ ಪರೀಕ್ಷಿಸುತ್ತದೆ. ಅತೀ ಹೆಚ್ಚಿನ ಟ್ರಾಫಿಕ್ ದಟ್ಟಣೆ ನಗರದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.
ಬೆಂಗಳೂರಿಗೆ ನಂ.1 ಸ್ಥಾನ, ಮಹಿಳೆಯರಿಗೆ ಸಿಲಿಕಾನ್ ಸಿಟಿ ಭಾರತದ ಅತ್ಯುತ್ತಮ ನಗರ


