ಬೆಂಗಳೂರು ವಲಸಿಗರಿಗೆ 4ನೇ ಅತಿ ದುಬಾರಿ ನಗರ..!

*  ಮರ್ಸರ್ಸ್‌ 2022ರ ಜೀವನ ವೆಚ್ಚ ಸಮೀಕ್ಷೆ 
*   ಮುಂಬೈಗೆ ಅತಿ ದುಬಾರಿ ನಗರ ಸ್ಥಾನ
*  ಜಾಗತಿಕವಾಗಿ ಹಾಂಗ್‌ಕಾಂಗ್‌ ವಲಸಿಗರಿಗೆ ಅತ್ಯಂತ ದುಬಾರಿ ನಗರ 

Bengaluru is the 4th Most Expensive City for Migrants in India

ಮುಂಬೈ(ಜು.01):  ಬೆಂಗಳೂರು ವಲಸಿಗರಿಗೆ ಭಾರತದ 4ನೇ ಅತಿ ದುಬಾರಿ ನಗರವಾಗಿ ಹೊರಹೊಮ್ಮಿದೆ ಎಂದು ಇತ್ತೀಚಿನ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಮರ್ಸರ್ಸ್‌ 2022ರ ಜೀವನ ವೆಚ್ಚ ಸಮೀಕ್ಷೆಯ ಪ್ರಕಾರ ಜೀವನ ವೆಚ್ಚ ಹಾಗೂ ವಸತಿ ವೆಚ್ಚಗಳೆರಡನ್ನೂ ಪರಿಗಣಿಸಿ ಮುಂಬೈ ವಲಸಿಗರಿಗೆ ದೇಶದಲ್ಲೇ ಅತಿ ದುಬಾರಿ ನಗರವಾಗಿ ಹೊರಹೊಮ್ಮಿದೆ. ನವದೆಹಲಿ, ಚೆನ್ನೈ ಹಾಗೂ ಬೆಂಗಳೂರು ಕ್ರಮವಾಗಿ 2, 3 ಹಾಗೂ 4ನೇ ಸ್ಥಾನವನ್ನು ಪಡೆದುಕೊಂಡಿವೆ. ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಹಾಗೂ ಮನರಂಜನೆಯ ವೆಚ್ಚಗಳ ಆಧಾರದ ಮೇಲೆ 5 ಖಂಡಗಳ ಸುಮಾರು 227 ನಗರಗಳನ್ನು ಈ ಸಮೀಕ್ಷೆ ಒಳಗೊಂಡಿದೆ.

World's Most Expensive City: ಪ್ಯಾರಿಸ್, ಸಿಂಗಾಪುರ ಅಲ್ಲ, ವಿಶ್ವದ ದುಬಾರಿ ನಗರದ ಪಟ್ಟಿಗೆ ಹೊಸ ಸೇರ್ಪಡೆ!

ಜಾಗತಿಕವಾಗಿ ಹಾಂಗ್‌ಕಾಂಗ್‌ ವಲಸಿಗರಿಗೆ ಅತ್ಯಂತ ದುಬಾರಿ ನಗರವೆನಿಸಿದ್ದು, ಭಾರತದ ನಗರಗಳಲ್ಲಿ ಜೀವನ ವೆಚ್ಚ ಅವುಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಜಾಗತಿಕ ವೆಚ್ಚದ ಸಮೀಕ್ಷೆಯಲ್ಲಿ ಮುಂಬೈ 127 ರಾರ‍ಯಂಕ್‌ ಪಡೆದು ಭಾರತದ ಅತಿ ದುಬಾರಿ ನಗರವೆನಿಸಿದೆ. ಜಾಗತಿಕ ಸಮೀಕ್ಷೆಯಲ್ಲಿ ನವದೆಹಲಿ (155), ಚೆನ್ನೈ (177) ಹಾಗೂ ಬೆಂಗಳೂರು (178)ನೇ ಸ್ಥಾನ ಪಡೆದುಕೊಂಡಿವೆ.
 

Latest Videos
Follow Us:
Download App:
  • android
  • ios