ಕಡಿಮೆ ಬೆಲೆಯಲ್ಲಿ ಭಾರತೀಯ ರೈಲ್ವೇ ಬೆಂಗಳೂರಿನಿಂದ ಡಬಲ್ ಡೆಕ್ಕರ್ ರೈಲು ಸೇವೆ ನೀಡುತ್ತಿದೆ. ಈ ರೈಲು ಬೆಂಗಳೂರಿನಿಂದ ಯಾವ ಮಾರ್ಗದಲ್ಲಿ ಸಂಚರಿಸುತ್ತದೆ? ಸಮಯ, ಟಿಕೆಟ್ ಬೆಲೆ ಮಾಹಿತಿ ಇಲ್ಲಿದೆ.

ಬೆಂಗಳೂರು (ಅ.06) ಬೆಂಗಳೂರಿನಿಂದ ರಾಜ್ಯದ ಬಹುತೇಕ ಕಡೆ, ದೇಶದ ವಿವಿದೆಡೆಗೆ ರೈಲು ಸಂಪರ್ಕ ಲಭ್ಯವಿದೆ. ವಂದೇ ಭಾರತ್ ಸೇರಿದಂತೆ ಹಲವು ಬಗೆಯ ರೈಲು ಸೇವೆಗಳು ಲಭ್ಯವಿದೆ. ಇದೀಗ ಬೆಂಗಳೂರಿನಿಂದ ಡಬಲ್ ಡೆಕ್ಕರ್ ರೈಲು ಸೇವೆ ಲಭ್ಯವಿದೆ. ಬೆಂಗಳೂರಿನಿಂದ -ಚೆನ್ನೈ ಮಾರ್ಗದಲ್ಲಿ ಸಂಚರಿಸುವ ಈ ರೈಲು ಕಡಿಮೆ ದರದ ಟಿಕೆಟ್ ಹೊಂದಿದೆ. ಇದು ಎಸಿ ಡಬಲ್ ಡೆಕ್ಕರ್ ರೈಲು ಸೇವೆಯಾಗಿದೆ. ಹೀಗಾಗಿ ಪ್ರಯಾಣಿಕರು ಅರಾಮವಾಗಿ ಪ್ರಯಾಣಿಸಲು ಸಾಧ್ಯವಿದೆ. KSR ಬೆಂಗಳೂರು ನಿಲ್ದಾಣದಿಂದ ಎಂಜಿಆರ್ ಚೆನ್ನೈಗೆ ಸಂಪರ್ಕ ಕಲ್ಪಿಸುವ ಈ ರೈಲು ಪ್ರಯಾಣಿಕರಿಗೆ ವಿಶೇಷ ಎರಡು ಸ್ತರದ ಸೀಟಿಂಗ್ ನೀಡುತ್ತಿದೆ.

ಡಬಲ್ ಡೆಕ್ಕರ್ ರೈಲು ಟಿಕೆಟ್ ಬೆಲೆ

22625 ರೈಲು ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ರೈಲು ಲೋವರ್ ಹಾಗೂ ಅಪ್ಪರ್ ಸೀಟಿಂಗ್ ಡೆಕ್ಸ್ ಹೊಂದಿದೆ. ಬೆಂಗಳೂರು ಚೆನ್ನೈ ಡಬಲ್ ಡೆಕ್ಕರ್ ರೈಲು ಟಿಕೆಟ್ ಬೆಲೆ ಕೇವಲ 575 ರೂಪಾಯಿ ಮಾತ್ರ. ಕೈಗೆಟುಕುವ ದರದಲ್ಲಿ ಡಬಲ್ ಡೆಕ್ಕರ್ ರೈಲಿನ ಮೂಲಕ ಬೆಂಗಳೂರು ಚೆನ್ನೈ ಹಾಗೂ ಚೆನ್ನೈ ಬೆಂಗಳೂರು ಪ್ರಯಾಣ ಮಾಡಲು ಸಾಧ್ಯವಿದೆ.

ಡಬಲ್ ಡೆಕ್ಕರ್ ರೈಲಿನ ಸಮಯ

ಬೆಂಗಳೂರು ರೈಲು ನಿಲ್ದಾಣದಿಂದ ಈ ರೈಲು ಮಧ್ಯಾಹ್ನ 1.30ಕ್ಕೆ ಹೊರಡಲಿದೆ. ಸಂಜೆ 7.45ಕ್ಕೆ ಚೆನ್ನೈ ತಲುಪಲಿದೆ. ಬೆಂಗಳೂರು ಕೆಎಸ್ಆರ್ ನಿಲ್ದಾಣದಿಂದ ಹೊರಡಲಿರುವ ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರಪೆಟ್ಟೈ, ವನಿಯಂಬಾಡಿ, ಅಂಬೂರು, ಕಟಪಾಡಿ, ಅರಕ್ಕೊನಂ, ತಿರುವಲ್ಲೂರು, ಪೆರಂಬೂರು ನಿಲುಗಡೆ ಮೂಲಕ ಚೆನ್ನೆ ಸೆಂಟ್ರಲ್ ತಲುಪಲಿದೆ.

ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಈ ರೈಲು ಬೆಳಗ್ಗೆ 7.25ಕ್ಕೆ ಹೊರಡಲಿದೆ. ಮಧ್ಯಾಹ್ನ 1.10ಕ್ಕೆ ಬೆಂಗಳೂರು ಕೆಎಸ್ಆರ್ ರೈಲು ನಿಲ್ದಾಣ ತಲುಪಲಿದೆ. 5 ಗಂಟೆ 45 ನಿಮಿಷ ಪ್ರಯಾಣದ ಅವಧಿಯಾಗಿದೆ. ಈ ರೈಲು 8 ಎಸಿ ಕೋಚ್, ಐದು ನಾನ್ ಎಸಿ ಕೋಚ್ ರಿಸರ್ವಡ್‌ ಕೋಚ್‌ಗಳಾಗಿದೆ. ಆಹಾರಗಳು ಲಭ್ಯವಿದೆ. ಟೊಮ್ಯಾಟೋ ಸೂಪ್, ವೆಜಿಟೇಬಲ್ ಕಟ್ಲಲೇಟ್, ಬ್ರೆಡ್ ಆಮ್ಲೆಟ್, ಮಸಾಲ ದೋಸೆ ಸೇರಿದಂತೆ ಕೆಲ ಆಹಾರಗಳು, ತಿನಿಸುಗಳು ಲಭ್ಯವಿದೆ.