ಮಾರಕ ಕೊರೋನಾಗೆ ವಾರಿಯರ್ ಬಲಿ| ಉಸಿರಾಟದ ಸಮಸ್ಯೆ ಯುವ ಐಎಎಸ್‌ ಅಧಿಕಾರಿ ಸಾವು| ಕೊರೋನಾದಿಂದ ಕೊನೆಯುಸಿರೆಳೆದ ಪಶ್ಚಿಮ ಬಂಗಾಳದ ಮೊದಲ ಜಿಲ್ಲಾಧಿಕಾರಿ

ಕೋಲ್ಕತ್ತಾ(ಜು.15): ಮಾರಕ ಕೊರೋನಾಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಐಎಎಸ್ ಅಧಿಕಾರಿ ಬಲಿಯಾಗಿದ್ದಾರೆ. 

ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷದ ದೇಬದತ್ತ ರೇ ಉಸಿರಾಟದ ಸಮಸ್ಯೆಯಿಂದ ಸೋಮವಾರ ಸಾವನ್ನಪ್ಪಿದ್ದಾರೆ. ಕೊರೋನಾ ಪಾಸಿಟಿವ್ ಬಂದಿದ್ದರಿಂದ ಅವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಆದರೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. 

Scroll to load tweet…

33 ವರ್ಷದ ರೇ ಅವರು 2010ರ ಐಎಎಸ್‌ ಅಧಿಕಾರಿ. ರೇ ಅವರು ಪಶ್ಚಿಮ ಬಂಗಾಳ ಮತ್ತು ವಿವಿಧ ರಾಜ್ಯಗಳಿಂದ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಡಂಕಣಿಗೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿದ್ದಾಗ ಸೋಂಕು ತಗುಲಿತ್ತು.

15 ವರ್ಷದಲ್ಲಿ 6 ಕೋಟಿ ಭಾರತೀಯರು ಅಪೌಷ್ಠಿಕತೆಯಿಂದ ಮುಕ್ತ!

Scroll to load tweet…

ದೇಬದತ್ತ ರೇ ಪತಿ ಮತ್ತು ನಾಲ್ಕು ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.