Asianet Suvarna News Asianet Suvarna News

HAL Contract With BEL: ತೇಜಸ್‌ ಯುದ್ಧ ವಿಮಾನ ನಿರ್ಮಾಣಕ್ಕೆ ಬಿಇಎಲ್‌ ಸಾಥ್‌

*  ಬಿಇಎಲ್‌ ಜತೆ 2400 ಕೋಟಿ ರು. ಒಪ್ಪಂದಕ್ಕೆ ಎಚ್‌ಎಎಲ್‌ ಸಹಿ
*  ವಿಮಾನ ನಿರ್ಮಾಣಕ್ಕೆ ಬಿಇಎಲ್‌ನಿಂದ 20 ವ್ಯವಸ್ಥೆಗಳ ಪೂರೈಕೆ
*  ದೇಸಿ ಕಂಪನಿ ಜತೆ ಎಚ್‌ಎಲ್‌ನಿಂದ ದೊಡ್ಡ ಮೊತ್ತದ ಒಪ್ಪಂದ
 

BEL Sign for Construction of Tejas Combat Aircraft With HAL grg
Author
Bengaluru, First Published Dec 17, 2021, 8:57 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.17):  ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಮತ್ತು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL)ಗಳ ನಡುವೆ ತೇಜಸ್‌ ಎಂಕೆ 1ಎ ಲಘು ಯುದ್ಧ ವಿಮಾನಕ್ಕೆ 20 ರೀತಿಯ ವೈಮಾನಿಕ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಿ ಮತ್ತು ಪೂರೈಸುವ ಕುರಿತು ಗುರುವಾರ 2,400 ಕೋಟಿ ರು.ಗಳ ಒಪ್ಪಂದವೇರ್ಪಟ್ಟಿದೆ. ಎಚ್‌ಎಎಲ್‌ ಭಾರತದ(India) ಕಂಪೆನಿಯೊಂದರ ಜೊತೆಗೆ ಈವರೆಗೆ ನಡೆಸಿದ ಅತಿ ದೊಡ್ಡ ಮೊತ್ತದ ಒಪ್ಪಂದ(Agreement) ಇದಾಗಿದೆ. ಆತ್ಮನಿರ್ಭರ ಅಭಿಯಾನದ(AatmaNirbhar Bharat Abhiyaan) ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಚ್‌ಎಎಲ್‌ ಹೇಳಿದೆ.

BEL Sign for Construction of Tejas Combat Aircraft With HAL grg

2023ರಿಂದ 2028ರವರೆಗಿನ ಐದು ವರ್ಷಗಳ ಒಪ್ಪಂದದಲ್ಲಿ ವೈಮಾನಿಕ ಉಪಕರಣಗಳಾದ ಲೈನ್‌ ರಿಪ್ಲೇಸಬಲ್‌ ಯುನಿಟ್‌, ಫ್ಲೈಟ್‌ ಕಂಟ್ರೋಲ್‌ ಕಂಪ್ಯೂಟರ್‌ಗಳು ಮತ್ತು ರಾತ್ರಿ ಹಾರುವ ಎಲ್‌ಆರ್‌ಯುಗಳ ಪೂರೈಕೆಯನ್ನು ಒಳಗೊಂಡಿದೆ. ತೇಜಸ್‌ ಲಘು ಯುದ್ಧ ವಿಮಾನ(War Aircraft) ಯೋಜನೆಯು ಎಚ್‌ಎಎಲ್‌, ಡಿಆರ್‌ಡಿಒ ಮತ್ತು ಬಿಇಎಲ್‌ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ(Indian Defense Agency) ನಡುವಿನ ಹೊಂದಾಣಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಎಚ್‌ಎಎಲ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Mirage Fighter Jet ಟಯರ್ ಜೊತೆ ಸ್ಟೇಷನ್ ತಲುಪಿದ ಕಳ್ಳರು, ಕದ್ದಿದ್ದೇಕೆ ಅಂದ್ರೆ ಹೀಗನ್ನೋದಾ?

2023-24ರಿಂದ ಭಾರತೀಯ ವಾಯು ಪಡೆಗೆ(Indian Air Force) ಸ್ವದೇಶಿ ನಿರ್ಮಿತ 83 ತೇಜಸ್‌ ಎಂಕೆ 1ಎ ಲಘು ಯುದ್ಧ ವಿಮಾನಗಳ ಹಸ್ತಾಂತರ ಪ್ರಕ್ರಿಯೆ ಆರಂಭವಾಗುತ್ತದೆ. ದೇಶಿಯ ಫ್ಲೈಟ್‌ ಕಂಟ್ರೋಲ್‌ ಕಂಪ್ಯೂಟರ್‌ಗಳು, ಏರ್‌ ಡೇಟಾ ಕಂಪ್ಯೂಟರ್‌ಗಳನ್ನು ಹೊಂದಿರಲಿದೆ. ಇವುಗಳನ್ನು ಬಿಇಎಲ್‌ ಪೂರೈಸಲಿದೆ. ಈ ವ್ಯವಸ್ಥೆಗಳನ್ನು ಡಿಆರ್‌ಡಿಒ ಮತ್ತು ಬೆಂಗಳೂರಿನ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿಯ ವಿವಿಧ ಲ್ಯಾಬ್‌ಗಳಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ.

83 ತೇಜಸ್‌ ಎಂಕೆ1ಎ ಲಘು ಯುದ್ಧ ವಿಮಾನಗಳಿಗೆ ಈ ವ್ಯವಸ್ಥೆಗಳನ್ನು ಪೂರೈಸಲು ಬಿಇಎಲ್‌ ತನ್ನ ಬೆಂಗಳೂರು(Bengaluru) ಮತ್ತು ಹರಿಯಾಣದ(Haryana) ಪಂಚಕುಲಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದೆ. ಎಲ್ಲ ಉಪಕರಣಗಳು ಬಿಇಎಲ್‌ನಿಂದ ಸಿದ್ಧ ಸ್ಥಿತಿಯಲ್ಲಿರುವಂತೆ ಎಚ್‌ಎಎಲ್‌ಗೆ ವರ್ಗಾಯಿಸಬೇಕು ಎಂದು ಎಚ್‌ಎಎಲ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿಷ್ಠಿತ ಎಲ್‌ಸಿಎ ತೇಜಸ್‌ ಯೋಜನೆಗಾಗಿ ಎಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ನಾವು ಸಂತಸಪಡುತ್ತೇವೆ. ಎಚ್‌ಎಎಲ್‌ನೊಂದಿಗೆ ಬಲವಾದ ಪಾಲುದಾರಿಕೆ ಮತ್ತು ಜಂಟಿ ಯಶಸ್ಸನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ ಎಂದು ಬಿಇಎಲ್‌ನ ಸಿಎಂಡಿ ಆನಂದಿ ರಾಮಲಿಂಗಂ ಹೇಳಿದ್ದಾರೆ.

ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ, ಜಿಇ ಇಂಜಿನ್ ಯೋಜನೆ!

ಶತ್ರು ದೇಶದ ರಾಡಾರ್‌ ಕಣ್ಣಿಗೆ ಬೀಳಲ್ಲ: ಭಾರತದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನ!

ದೇಶೀಯವಾಗಿಯೇ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು (5th Generation Fighter Jet) ತಯಾರಿಸುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆ 2022ರಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಶತ್ರುಗಳ ಕಣ್ತಪ್ಪಿಸುವ ಲಕ್ಷಣಗಳನ್ನು ಹೊಂದಿರುವ ಯುದ್ಧ ವಿಮಾನಗಳು ಇವಾಗಲಿವೆ.

ಈಗ ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾಪ ಇದೆ. ಇದನ್ನು ಭದ್ರತಾ ಸಚಿವಾಲಯದ ಸಂಪುಟ ಸಮಿತಿ ಅನುಮೋದನೆಗೆ ಮುಂದಿನ ವರ್ಷದ ಆರಂಭದಲ್ಲಿ ಕಳಿಸುವ ಸಾಧ್ಯತೆ ಇದೆ. ಬಳಿಕ ಹಣಕಾಸು ಹಾಗೂ ರಕ್ಷಣಾ ಇಲಾಖೆಗಳು (Ministry of Defence & Ministry of Finance) ಚರ್ಚಿಸಿ ಇದಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ವಾಯುಪಡೆ (Indian Air Force) ಬಳಿ ಈಗಿರುವ ಯುದ್ಧವಿಮಾನಗಳ ಸಾಮರ್ಥ್ಯ ಸಾಲದ್ದಾಗಿದ್ದು, ಅದು ಇನ್ನೂ ಹೆಚ್ಚಿನ ಸಾಮರ್ಥ್ಯದ ಯುದ್ಧವಿಮಾನಕ್ಕೆ ಎದುರು ನೋಡುತ್ತಿದೆ. ಆದರೆ, 5ನೇ ತಲೆಮಾರಿನ ಯುದ್ಧ ವಿಮಾನ ಉತ್ಪಾದನೆ ವೆಚ್ಚದಾಯಕ ಹಾಗೂ ಸಂಕೀರ್ಣ ಪ್ರಕ್ರಿಯೆಯಾಗಿದೆ.
 

Follow Us:
Download App:
  • android
  • ios