ಪ್ರೇತ ಕಾಟಕ್ಕೆ ನಡೆದಿದ್ದು ಘನಘೋರ ಘಟನೆ, 42 ವರ್ಷ ಭಾರತದ ಈ ರೈಲು ನಿಲ್ದಾಣಕ್ಕೆ ಬಿದ್ದಿತ್ತು ಬೀಗ!
ಬೀಳಿ ಸೀರೆ, ಕೂದಲು ಕೆದರಿದ ರೂಪ, ಮುಖ ಸ್ಪಷ್ಟವಿಲ್ಲ. ಈ ರೈಲು ನಿಲ್ದಾಣದ ಮೂಲಕ ತೆರಳಿದವರು, ಸ್ಟೇಶನ್ ಮಾಸ್ಟರ್, ಸಿಬ್ಬಂದಿಗಳ ಬಾಯಲ್ಲಿ ಇದೇ ಮಾತು. ಇದರ ಬೆನ್ನಲ್ಲೇ ಘನಘೋರ ಘಟನೆಯೂ ನಡೆದು ಹೋಗಿತ್ತು. ಭೂತ ಪಿಶಾಚಿ ಕಾಟದಿಂದ 42 ವರ್ಷ ಭಾರತದ ಈ ನಿಲ್ದಾಣಕ್ಕೆ ಬೀಗ ಹಾಕಲಾಗಿತ್ತು.
ನವದೆಹಲಿ(ನ.10) ಭಾರತದ ರೈಲು ನಿಲ್ದಾಣವೊಂದು ಭೂತ, ಪಿಶಾಚಿ, ಪ್ರೇತದ ಕಾಟಕ್ಕೆ ಹೆದರಿ ಬೀಗ ಹಾಕಲಾಗಿತ್ತು ಅನ್ನೋದು ನಂಬಲು ಅಸಾಧ್ಯವಾಗಿದ್ದರೂ ಸತ್ಯ. ಕೆಲ ದಿನವಲ್ಲ, ಕೆಲ ವರ್ಷವಲ್ಲ, ಬರೋಬ್ಬರಿ 42 ವರ್ಷ ಈ ರೈಲು ನಿಲ್ದಾಣದಲ್ಲಿ ಯಾರೂ ಕೆಲಸ ಮಾಡಲು ಒಪ್ಪಲಿಲ್ಲ, ಪ್ರಯಾಣ ಮಾಡುವ ಸಾಹಸ ಮಾಡಿಲ್ಲ. 42 ವರ್ಷ ಈ ರೈಲು ನಿಲ್ದಾಣ ಬಂದ್ ಮಾಡಾಲಾಗಿತ್ತು.1967ರಲ್ಲಿ ರೈಲು ನಿಲ್ದಾಣ ಹಾಳು ಕೊಂಪೆಯಾಗಿ ಮಾರ್ಪಟ್ಟಿತು. ಬಳಿಕ 2009ರಲ್ಲಿ ಈ ರೈಲು ನಿಲ್ದಾಣವನ್ನು ಸಹಾಸ ಮಾಡಿ ತೆರೆಯಲಾಗಿತ್ತು. ಇಷ್ಟದರೂ ಈಗಲೂ ಇಲ್ಲಿ ಕೆಲಸ ಮಾಡಲು, ಪ್ರಯಾಣಿಸಲು ಜನ ಹೆದರುತ್ತಾರೆ.
ಇದು ಕಟ್ಟುಕತೆಯಲ್ಲ. ನಡೆದ ಘಟನೆ. ಭಾರತೀಯ ರೈಲ್ವೇ ಪ್ರೇತ, ಪಿಶಾಚಿ ಕಾರಣದಿಂದ ನಿಲ್ದಾಣವನ್ನು ಬಂದ್ ಮಾಡಿದ್ದು ಇದೇ ಮೊದಲು ಹಾಗೂ ಕೊನೆ. ಖಾಸಗಿ ವ್ಯಕ್ತಿಗಳ ಮನೆ, ನಿವೇಶನ, ವಾಹನಗಳಲ್ಲಿ ಪ್ರೇತದ ಕಾಟದಿಂದ ದೂರವಿದ್ದ ಘಟನೆಗಳಿವೆ. ಆದರೆ ಸರ್ಕಾರ ಈ ಭೂತ, ಪ್ರೇತದ ವಿಚಾರ ಗಂಭೀರವಾಗಿ ಪರಿಗಣಿಸಿ ನಿಲ್ದಾಣ ಬಂದ್ ಮಾಡಿಸಿದ ಘಟನೆ ಬಹುಶ ಬೇರೆಲ್ಲೂ ನಡೆದಿಲ್ಲ.
ಈ ರೈಲು ನಿಲ್ದಾಣದಲ್ಲಿ ವರ್ಷದ 15 ದಿನ ಮಾತ್ರ ಟ್ರೈನ್ ನಿಲುಗಡೆ, ಇನ್ನುಳಿದ ದಿನ ಹಾಳುಕೊಂಪೆ!
ಈ ಭೂತ ಪ್ರೇತದ ನಿಲ್ದಾಣದ ಹೆಸರು ಬೆಗುನ್‌ಕೋಡರ್ ರೈಲು ನಿಲ್ದಾಣ. ಪಶ್ಚಿಮ ಬಂಗಾಳದ ಪುರುಲಯಾ ಜಿಲ್ಲೆಯಲ್ಲಿ ಈ ನಿಲ್ದಾಣವಿದೆ. ರೈಲ್ವೇ ಡಿವಿಶನ್ ರಾಂಚಿಗೆ ಸೇರಿದೆ. ಇದೇ ರೈಲು ನಿಲ್ದಾಣವನ್ನು 42 ವರ್ಷ ಬಂದ್ ಮಾಡಲಾಗಿತ್ತು. ಬೆಗುನ್‌ಕೋಡರ್ ರೈಲು ನಿಲ್ದಾಣ ಪ್ರಮುಖ ನಿಲ್ದಾಣ, ಇದು ಹಲವು ಪಟ್ಟಣ, ಗ್ರಾಮ, ಹಳ್ಳಿಗಳಿಗೆ ಸಂಪರ್ಕ ನೀಡುವ ನಿಲ್ದಾಣವಾಗಿದೆ. ಸುತ್ತ ಕಾಡು, ಪೊದೆಗಳಿಂದ ತುಂಬಿದ ನಿಲ್ದಾಣ. 1967ರಲ್ಲಿ ಈ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸ್ಟೇಶನ್ ಮಾಸ್ಟರ್ ಆಘಾತಗೊಂಡಿದ್ದರು. ರಾತ್ರಿ ವೇಳೆ ಅಸ್ಪಷ್ಟ ರೂಪ, ಕೂದಲು ಕೆದರಿದೆ, ವಿಕಾರ ರೂಪದ ಪ್ರೇತವನ್ನು ನೋಡಿದ್ದಾರೆ ಎಂದು ಹೇಳಿದ್ದರು.
ಈ ನಿಲ್ದಾಣಕ್ಕೆ ಪಿಶಾಚಿ ಕಾಟವಿದೆ ಎಂದು ಸ್ಟೇಶನ್ ಮಾಸ್ಟರ್ ತಮ್ಮ ಅನುಭವ ಬಿಚ್ಚಿಟ್ಟಿದ್ದರು. ಇದೇ ವೇಳೆ ಹಲವು ಪ್ರಯಾಣಿಕರು ತಮ್ಮ ತಮ್ಮ ಅನುಭವ ಹೇಳಿದ್ದರು. ಈ ಅನುಭವದ ಮಾತುಗಳು ಗಾಳಿಯಂತೆ ಹಬ್ಬಿತ್ತು. ಪರ ವಿರೋಧಗಳು ಆರಂಭಗೊಂಡಿತ್ತು.ಭೂತ ಪ್ರೇತ ಏನೂ ಇಲ್ಲ ಎಂದು ಒಂದು ವಾದವಾದರೆ, ಈ ನಿಲ್ದಾಣದ ಮೂಲಕ ಪ್ರಯಾಣದ ಸಹವಾಸವೇ ಬೇಡ ಅನ್ನೋದು ಇನ್ನೊಂದು ವಾದ.
ಈ ವಾದ ವಿವಾದ ಮಾತುಗಳ ನಡುವೆ ಘನಘೋರ ಘಟನೆ ನಡೆದು ಹೋಯಿತು. ಪ್ರೇತ, ಪಿಶಾಚಿ ನೋಡಿದ ಸ್ಟೇಶನ್ ಮಾಸ್ಟರ್ ಹಾಗೂ ಆತನ ಕುಟುಂಬ ದಿಢೀರ್ ಮನೆಯಲ್ಲಿ ಶವವಾಗಿ ಪತ್ತೆಯಾಗಿತ್ತು. ಪ್ರೇತದ ಅನುಭವ ಬಿಚ್ಚಿಟ್ಟ ಕೆಲವೇ ದಿನಗಳಲ್ಲೇ ಸ್ಟೇಶನ್ ಮಾಸ್ಟರ್ ಹಾಗೂ ಕುಟುಂಬದ ಮರಣ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಘಟನೆ ಬಳಿಕ ಯಾರೂ ಕೂಡ ಈ ನಿಲ್ದಾಣದಲ್ಲಿ ಕೆಲಸ ಮಾಡಲು ಮುಂದೆ ಬರಲಿಲ್ಲ. ಈ ನಿಲ್ದಾಣದ ಮೂಲಕ ರೈಲು ಹಾದು ಹೋಗುವಾಗ ವೇಗ ಹೆಚ್ಚಿಸುತ್ತಿದ್ದರು. ಇಲ್ಲಿ ಯಾರೂ ಇಳಿಯುತ್ತಿರಲಿಲ್ಲ, ಹತ್ತುತ್ತಿರಲಿಲ್ಲ. ಹೀಗಾಗಿ ಭಾರತೀಯ ರೈಲ್ವೇ ಅನಿವಾರ್ಯವಾಗಿ ಈ ರೈಲು ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿತ್ತು.
ಭಾರತದ ಈ ರೈಲು ನಿಲ್ದಾಣಕ್ಕೆ ತೆರಳಲು ಭಾರತೀಯರಿಗೂ ಬೇಕು ಪಾಸ್‌ಪೋರ್ಟ್, ವೀಸಾ!
ಬರೋಬ್ಬರಿ 42 ವರ್ಷಗಳ ಕಾಲ ಈ ನಿಲ್ದಾಣ ಬಂದ್ ಆಗಿತ್ತು . ಸಂಥಾಲ್ ರಾಜಕುಮಾರಿ 2009ರಲ್ಲಿ ಸತತ ಪ್ರಯತ್ನ ಪಟ್ಟು ಈ ನಿಲ್ದಾಣ ಮರು ಓಪನ್ ಮಾಡುವಂತೆ ಮಾಡಿದರು. ರೈಲು ನಿಲ್ದಾಣ ಪುನರ್ ಆರಂಭಗೊಂಡರೂ ಜನರ ಭಯ, ಆತಂಕ ಹೋಗಿಲ್ಲ. ಭಯದಿಂದಲೇ ಜನರು ಓಡಾಡುತ್ತಿದ್ದಾರೆ.