ಐಫೋನ್ 16 ಪ್ರೊ ಮ್ಯಾಕ್ಸ್ ಹಿಡಿದು ಅಜ್ಮೀರ್‌ನ ಭಿಕ್ಷುಕನೊಬ್ಬ ಭಿಕ್ಷೆ ಬೇಡುವ ವಿಡಿಯೋ ವೈರಲ್ ಆಗಿದೆ. 1 ಲಕ್ಷ 70 ಸಾವಿರದ ಫೋನ್ ಖರೀದಿಸಿದ್ದಾಗಿ ಹೇಳಿಕೊಂಡ ಈತ, ಭಿಕ್ಷೆಯಿಂದಲೇ ಹಣ ಗಳಿಸಿದ್ದಾಗಿ ತಿಳಿಸಿದ್ದಾನೆ. ಈತನನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಕೆಲಸಕ್ಕಿಂತ ಟೆನ್ಷನ್ ಇಲ್ಲದೆ ಭಿಕ್ಷೆ ಬೇಡೋದು ಉತ್ತಮ ಎನ್ನುವ ಮಾತುಗಳು ಕೇಳಿ ಬಂದಿವೆ.
ಈಗಿನ ದಿನಗಳಲ್ಲಿ 8 -10 ಗಂಟೆ ನಿರಂತರ ಕೆಲಸ ಮಾಡುವವರಿಗಿಂತ ಭಿಕ್ಷುಕ (Beggar)ರೇ ಶ್ರೀಮಂತರಾಗ್ತಿದ್ದಾರೆ. ಕೆಲ ದಿನಗಳಿಂದ ಶ್ರೀಮಂತ (Rich) ಭಿಕ್ಷುಕರು ಸೋಶಿಯಲ್ ಮೀಡಿಯಾ (social media)ದಲ್ಲಿ ವೈರಲ್ ಆಗ್ತಿದ್ದಾರೆ. ಈಗ ಮತ್ತೊಬ್ಬ ಭಿಕ್ಷುಕನ ವಿಡಿಯೋ ವೈರಲ್ ಆಗಿದೆ. ಐಫೋನ್ ಕೈನಲ್ಲಿದ್ರೆ ಆತ ಶ್ರೀಮಂತ, ಉತ್ತಮ ಜಾಬ್ ನಲ್ಲಿರುವ ವ್ಯಕ್ತಿ ಎನ್ನುವ ಕಾಲವೊಂದಿತ್ತು. ಆದ್ರೀಗ ಐಫೋನ್ ಎಲ್ಲರ ಕೈಗೆ ಬರ್ತಿದೆ. ಊಟ, ಬಟ್ಟೆಗೆ ಭಿಕ್ಷೆ ಬೇಡುವವನು ಕೂಡ ಐಫೋನ್ ಹಿಡಿದು ತಿರುಗುತ್ತಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ನಮ್ಮಲ್ಲಿ ಭಿಕ್ಷುಕರಿಗೆ ನೀಡುವ ಹಣದ ಬಗ್ಗೆ ಗಂಭೀರ ಚರ್ಚೆಯನ್ನು ಇದು ಹುಟ್ಟುಹಾಕಿದೆ.
ರಾಜನಸ್ತಾನದ ಅಜ್ಮೀರದ ಭಿಕ್ಷುಕನೊಬ್ಬನ ವಿಡಿಯೋ ಇದಾಗಿದೆ. ಆತ ಐಫೋನ್ 16 ಪ್ರೊ ಮ್ಯಾಕ್ಸ್ (iPhone 16 Pro Max) ಹಿಡಿದು ಭಿಕ್ಷೆ ಬೇಡ್ತಿದ್ದಾನೆ. ಇದನ್ನು ನೋಡಿದ ವ್ಯಕ್ತಿಯೊಬ್ಬರು ಭಿಕ್ಷುಕನನ್ನು ಪ್ರಶ್ನೆ ಮಾಡ್ತಿದ್ದಾರೆ. ನೀವು ಎಲ್ಲಿಂದ ಬಂದ್ರಿ, ನಿಮ್ಮ ಕೈನಲ್ಲಿರುವ ಮೊಬೈಲ್ ಯಾವ್ದು ಎಂದು ಕೇಳ್ತಿದ್ದಾರೆ. ಅದಕ್ಕೆ ಭಿಕ್ಷುಕ ಉತ್ತರವನ್ನು ನೀಡಿದ್ದಾನೆ. ಅಜ್ಮೀರದ ಈತನ ಹೆಸರು ಶೇಖ್. ವಿಕಲಾಂಗ ಶೇಖ್, ಕೈನಲ್ಲಿ ಐಫೋನ್ 16 ಪ್ರೊ ಮ್ಯಾಕ್ಸ್ ಹಿಡಿದಿರುವುದಾಗಿ ಹೇಳಿದ್ದಾನೆ. ಅಲ್ಲದೆ ಅದನ್ನು ಆತ ಕ್ಯಾಶ್ ನೀಡಿ ಖರೀದಿ ಮಾಡಿದ್ದಾನೆ. 16 ಪ್ರೊ ಮ್ಯಾಕ್ಸ್ ಫೋನ್ ಗೆ ಆತ ಒಂದು ಲಕ್ಷ 70 ಸಾವಿರ ರೂಪಾಯಿ ನೀಡಿದ್ದಾನೆ. ಈ ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆಗೆ ಭಿಕ್ಷೆ ಬೇಡಿ ಫೋನ್ ಖರೀದಿ ಮಾಡಿದ್ದೇನೆಂದು ಶೇಖ್ ಹೇಳಿದ್ದಾನೆ.
ಭಾರತದ ಶ್ರೀಮಂತ ಭಿಕ್ಷುಕರ ಪಟ್ಟಿ, ಆಸ್ತಿ ವಿವರ ಇಲ್ಲಿದೆ
ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ಫಾರ್ಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈವರೆಗೆ ಒಂದು ಕೋಟಿಗೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಸಾವಿರಾರು ಕಮೆಂಟ್ ಈ ವಿಡಿಯೋಕ್ಕೆ ಬಂದಿದೆ. ಕೆಲವರು ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವೈರಲ್ ಆಗುವ ಉದ್ದೇಶದಿಂದ ವಿಡಿಯೋ ಮಾಡ್ತಿರುವ ವ್ಯಕ್ತಿಯೇ ಭಿಕ್ಷುಕನ ಕೈಗೆ ಮೊಬೈಲ್ ನೀಡಿರಬಹುದು ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇಂಥ ಭಿಕ್ಷುಕರಿಗೆ ಭಿಕ್ಷೆ ನೀಡುವುದು ವ್ಯರ್ಥ ಎಂದಿದ್ದಾರೆ. ಇಂಥವರಿಗೆ ಭಿಕ್ಷೆ ನೀಡುವ ಬದಲು ನಿಮ್ಮ ಮನೆ ಬಳಿ ಇರುವ ಬಡವರಿಗೆ ಸಹಾಯ ಮಾಡಿ ದೆಂದು ಸಲಹೆ ನೀಡಿದ್ದಾರೆ. ಕೆಲಸ ಬಿಟ್ಟು ಭಿಕ್ಷೆ ಬೇಡೋದು ಉತ್ತಮ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅಜ್ಮೀರ್ ಭಿಕ್ಷುಕರು ಶ್ರೀಮಂತರು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮಧ್ಯಮ ವರ್ಗದ ಜನಕ್ಕಿಂತ ಭಿಕ್ಷುಕರು ಶ್ರೀಮಂತರು, ಇದು ಒಳ್ಳೆಯ ಬ್ಯುಸಿನೆಸ್, ಯಾವುದೇ ಒತ್ತಡ ಇಲ್ಲ, ಕೆಲಸದ ಭಾರವಿಲ್ಲ, ಬೇರೆಯವರ ಮೇಲೆ ಅವಲಂಬನೆ ಇಲ್ಲ, ಓವರ್ ಟೈಂ ಕೆಲಸ ಮಾಡ್ಬೇಕೆಂಬುದಿಲ್ಲ, ಮಜವೋ ಮಜ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...
ಅಜ್ಮೀರ್ ನಲ್ಲಿ ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯವರ ದರ್ಗ ಇದೆ. ಅಲ್ಲಿಗೆ ಪ್ರತಿ ದಿನ ಸಾವಿರಾರು ಮಂದಿ ಪ್ರವಾಸಿಗರು ಬರ್ತಾರೆ. ದಾನವನ್ನು ಶ್ರೇಷ್ಠವೆಂದು ಭಾವಿಸುವ ಭಕ್ತರು ಭಿಕ್ಷುಕರಿಗೆ ದಾನ ನೀಡ್ತಾರೆ. ಇಲ್ಲಿ ಭಿಕ್ಷುಕರ ಸಂಖ್ಯೆ ಕೂಡ ಹೆಚ್ಚಿದೆ. ಇತ್ತೀಚಿಗಷ್ಟೆ ಖ್ವಾಜಾ ಅವರ 813 ನೇ ಉರುಸ್ ಅಜ್ಮೀರ್‌ನಲ್ಲಿ ನಡೆದಿದೆ. ಈ ಉರುಸ್‌ಗೆ ದೇಶ – ವಿದೇಶದಿಂದ ಜನರು ಬಂದಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ದರ್ಗಾದಲ್ಲಿ ಚಾದರ್ ಅರ್ಪಿಸಿದ್ದರು. ಈ ಸಮಯದಲ್ಲಿ ಭಿಕ್ಷುಕರಿಗೆ ಸಾಕಷ್ಟು ಹಣ ಭಿಕ್ಷೆ ರೂಪದಲ್ಲಿ ಸಿಕ್ಕಿದೆ.
