ಬೆಂಗಳೂರು(ಜು.16): ಮನುಷ್ಯ ದಿನದಿಂದ ದಿನಕ್ಕೆ ಕ್ರೂರಿಯಾಗುತ್ತಿದ್ದಾನೆ ಅನ್ನೋ ಬಲವವಾದ ಆರೋಪವಿದೆ. ಕಾರಣ ಸ್ವಹಿತ ಬಿಟ್ಟು ಸಂಕಷ್ಟದಲ್ಲಿದ್ದವರಿಗೆ, ನಿರ್ಗತಿಕರಿಗೆ, ಬಡವರಿಗೆ, ಪರಿಸರಕ್ಕೆ, ಪ್ರಾಣಿಗಳಿಗೆ ನೆರವು ನೀಡುತ್ತಿರುವ ಸಂಖ್ಯೆ ಬಹಳ ವಿರಳ. ಶ್ರೀಮಂತಿಕೆ ಇದ್ದರೂ, ಹೃದಯ ಶ್ರೀಮಂತಿಕೆ ಇರುವುದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೃದ್ಧ ಬಿಕ್ಷುಕನೋರ್ವ ತನ್ನ ಹೃದಯ ಶ್ರೀಮಂತಿಕೆಗೆ ಮೆರೆದಿದ್ದಾನೆ.

ಮಂಜುಗಡ್ಡೆ ಕಟ್‌ ಮಾಡಿ ಹುಟ್ಟುಹಬ್ಬ ಆಚರಿಸಿದ ಹೆಮ್ಮೆಯ ಯೋಧರು..!.

ಭಾರತೀಯ ಅರಣ್ಯಾ ಇಲಾಖೆಯ ಸುಶಾಂತ್ ನಂದಾ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೃದ್ಧ ಬಿಕ್ಷುಕ ತನ್ನ ತಟ್ಟೆಯ ಆಹಾರವನ್ನು ಬೀದಿ ನಾಯಿಗಳಿಗೆ ಹಂಚಿ ಅವುಗಳ ಹೊಟ್ಟೆ ತುಂಬಿಸಿದ ಪರಿಗೆ ಎಲ್ಲರೂ ಸಲಾಂ ಹೇಳಿದ್ದಾರೆ. 

 

ಕಾಣಿಯೂರು ಶ್ರೀಗಳ ಗೋವಂದನೆಗೆ ನೆಟ್ಟಿಗರು ಫಿದಾ

ಈ ವಿಡಿಯೋ ಕ್ಷಣಾರ್ಧದಲ್ಲೇ ಲಕ್ಷಾಂತರ ಲೈಕ್ಸ್, ಕಮೆಂಟ್ಸ್ ಪಡೆದಿದೆ. ವೃದ್ಧನ ಹೃದಯ ಶ್ರೀಮಂತಿಕೆಯನ್ನು ಜನರು ಕೊಂಡಾಡಿದ್ದಾರೆ. ಸತ್ತು ಹೋಗಿರುವ ಮಾನವೀಯತೆ, ನೆರವು ನೀಡಲು ಹಿಂದೂ ಮುಂದು ಯೋಚಿಸುವ ಮಂದಿ ನಡುವೆ ಈ ವೃದ್ಧ ನಮೆಗೆಲ್ಲಾ ಮಾದರಿ ಎಂದು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.