ಜಮ್ಮು(ಜು.13): ಮೈಕೊರೆಯುವ ಚಳಿಯಲ್ಲಿ ಗಡಿಯಲ್ಲಿ ನಿಂತು ದೇಶ ಕಾಯುವ ವೀರಯೋಧರೊಬ್ಬರ ಹುಟ್ಟುಹಬ್ಬದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಸಹಯೋಧರೊಂದಿಗೆ ಸೈನಿಕನೊಬ್ಬರ ಹುಟ್ಟು ಹಬ್ಬದ ಸಂಭ್ರಮದ 14 ಸೆಕೆಂಡ್‌ಗಳ ವಿಡಿಯೋವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಂಜುಗಡ್ಡೆಯನ್ನು ಕೇಕ್‌ ನಂತೆ ಮಾಡಿ ಸೈನಿಕರೊಬ್ಬರು ಚಾಕುವಿನಿಂದ ಕಟ್ ಮಾಡಿದ್ದಾರೆ. ಈ ವಿಡಿಯೋ ದೇಶದ ಜನರ ಹೃದಯವನ್ನು ಗೆದ್ದಿದೆ. ಇದು ಸೈನಿಕನೊಬ್ಬರು ಹುಟ್ಟುಹಬ್ಬದ ಕ್ಷಣ. ಚೀಸ್ ಕೇಕ್ ಮರೆತು ಬಿಡಿ, ಅದ್ಭುತವಾದ ಮಂಜಿನ ಕೇಕ್‌ನ್ನು ಒಮ್ಮೆ ನೋಡಿ. ಅವರ ಸಂಯಮ ಹಾಗೂ ತ್ಯಾಗವನ್ನು ಹೊಗಳಲು ಪದಗಳು ಸಾಲುತ್ತಿಲ್ಲ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. 

ಸಂಪೂರ್ಣ ಲಾಕ್‌ಡೌನ್‌: ಡಿಸಿಗಳ ಜೊತೆ ವಿಡಿಯೋ ಸಂವಾದ, ಸಿಎಂ ಬಿಎಸ್‌ವೈ ಪ್ರತಿಕ್ರಿಯೆ

ದೇಶಭಕ್ತಿಯಿಂದ ಲಕ್ಷಾಂತರ ಮಂದಿ ತಮ್ಮ ಜೀವದ ಹಂಗು ತೊರೆದು ದೇಶ ಸೇವೆ ಮಾಡಲು ಭಾರತೀಯ ಸೇನೆಯನ್ನು ಸೇರುತ್ತಾರೆ. ಅವರ ನಿಸ್ವಾರ್ಥ ಸೇವೆಗೆ ಸುವರ್ಣ ನ್ಯೂಸ್‌.ಕಾಂ ವತಿಯಿಂದ ಬಿಗ್ ಸಲ್ಯೂಟ್.