? ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಊಸರವಳ್ಳಿಯ ಸುಂದರ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿರುವ ಸುಂದರವಾದ ಪ್ಯಾಂಥೆರ್ ಊಸರವಳ್ಳಿಯ ಬಣ್ಣ ಎಲ್ಲರನ್ನು ಸೆಳೆಯುತ್ತಿದೆ. 

ಬೆಂಗಳೂರು: ಗಂಟೆಗೊಮ್ಮೆ ನಿಮಿಷಕ್ಕೊಮ್ಮೆ ಮಾತು ಬದಲಿಸುವ ಜನರಿಗೆ ಗೋಸುಂಬೆ, ಊಸರವಳ್ಳಿ ಎಂದೆಲ್ಲಾ ಬೈಯುವುದನ್ನು ನೀವು ಕೇಳಿರಬಹುದು. ಆದರೆ ಅವುಗಳೆಷ್ಟು ಸೊಗಸು ಎಂಬುದು ನಿಮಗೆ ಗೊತ್ತಾ? ಊಸರವಳ್ಳಿ ಬಣ್ಣ ಬದಲಿಸೋದು ಎಲ್ಲರಿಗೂ ಗೊತ್ತು. ಆದರೆ ಬಣ್ಣ ಬದಲಿಸಿದಾಗ ಅದು ಕಾಣುವ ಸೊಗಸೆಷ್ಟು ಎಂಬುದರ ಬಗ್ಗೆ ನಿಮಗೇನಾದರು ಗೊತ್ತಿದೆಯಾ? ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಊಸರವಳ್ಳಿಯ ಸುಂದರ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿರುವ ಸುಂದರವಾದ ಪ್ಯಾಂಥೆರ್ ಊಸರವಳ್ಳಿಯ ಬಣ್ಣ ಎಲ್ಲರನ್ನು ಸೆಳೆಯುತ್ತಿದೆ. 

ಸೃಷ್ಟಿಕರ್ತ ಭಗವಂತನಿಗಿಂತ ದೊಡ್ಡ ಕಲಾಕಾರ ಈ ಜಗತ್ತಿನಲ್ಲಿ ಬೇರೆ ಯಾರಿರಲು ಸಾಧ್ಯ ಎಂದು ಬರೆದು ಈ ಸುಂದರವಾದ ಊಸರವಳ್ಳಿಯ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿದ್ದು, ಪೃಕೃತಿ ಹಾಗೂ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 

Scroll to load tweet…

ಅದೇ ರೀತಿ ಈಗ ಸುಂದರವಾದ ಊಸರವಳ್ಳಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೇಸರಿ, ಕೆಂಪು, ಹಳದಿ, ನೀಲಿ ಸೇರಿದಂತೆ ಹಲವು ಬಣ್ಣಗಳನ್ನು ಈ ಊಸರವಳ್ಳಿ ಹೊಂದಿದ್ದು ತನ್ನ ಬಣ್ಣದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಪ್ಯಾಂಥರ್ ಊಸರವಳ್ಳಿಗಳು (Panther Chameleon) ಹಲವು ಹಾಗೂ ಸುಂದರವಾದ ವಿವಿಧ್ಯತೆಯಿಂದ (vibrant colours) ಬಣ್ಣ ಬದಲಿಸುತ್ತವೆ. ಹೆಣ್ಣು ಊಸರವಳ್ಳಿಗಳು ತಾವು ಗಂಡಿನೊಂದಿಗೆ ಸಂಯೋಗವಾಗುವುದಿಲ್ಲ ಎಂದು ಸೂಚಿಸಲು ಹಾಗೂ ಗರ್ಭಿಣಿಯಾಗಿರುವಾಗ ಮಾತ್ರ ಹೀಗೆ ಬಣ್ಣ ಬದಲಿಸುತ್ತವೆ. ಆದರೆ ಗಂಡು ಪ್ಯಾಂಥರ್ ಊಸರವಳ್ಳಿಗಳು ತಮ್ಮ ಮನಸ್ಥಿತಿಗೆ ಅನುಗುಣವಾಗಿ ಕೆಂಪು, ಹಸಿರು ಅಥವಾ ನೀಲಿ ಬಣ್ಣಗಳ ಯಾವುದೇ ಸಂಯೋಜನೆಯೊಂದಿಗೆ ಬಣ್ಣ ಬದಲಿಸುತ್ತವೆ. 

'ಕಾಂಗ್ರೆಸ್ಸಿಗರು ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ'

ಊಸರವಳ್ಳಿಯ ಚರ್ಮದಲ್ಲಿ, ಕ್ರೊಮಾಟೊಫೋರ್ಸ್ (chromatophores) ಎಂಬ ವಿಶೇಷ ಕೋಶಗಳು ಇದ್ದು, ಅವು ಜೀವಕೋಶದ ಮೇಲ್ಮೈಯಲ್ಲಿ ಗೋಚರಿಸುವ ಬಣ್ಣಗಳ ವೈವಿಧ್ಯತೆಯನ್ನು ತೋರಿಸಲು ಕಾರಣವಾಗುತ್ತವೆ.ಊಸರವಳ್ಳಿಯ ಮೆದುಳಿನ ಸಂಕೇತಗಳು ಪ್ರತಿ ಚರ್ಮದ ಕೋಶದಲ್ಲಿ ಯಾವ ಬಣ್ಣಗಳು ಹೊರ ಹೊಮ್ಮಬೇಕು ಮತ್ತು ಯಾವುದನ್ನು ಮರೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ, ಇದರ ಪರಿಣಾಮವಾಗಿ ಪ್ರತಿ ಪರಿಸರಕ್ಕೆ ಹೊಂದಿಕೊಳ್ಳುವ ಒಟ್ಟಾರೆ ಮಾದರಿಯನ್ನು ಈ ಊಸರವಳ್ಳಿಗಳು ನೀಡುತ್ತವೆ.

ದಿಂಗಾಲೇಶ್ವರ ಸ್ವಾಮೀಜಿ ಊಸರವಳ್ಳಿ ತರ ಬಣ್ಣ ಬದಲಾಯಿಸಿ ಮಾತಾಡ್ತಾರೆ ಎಂದ ಸಚಿವ

ಈ ವಿಡಿಯೋವನ್ನು 17 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ದೇವರಿಗಿಂತ ದೊಡ್ಡ ಪೈಂಟರ್ ಬೇರೆ ಯಾರಿದ್ದಾರೆ ಎಂದು ಬರೆದಿದ್ದಕ್ಕೆ ಒಬ್ಬ ಬಳಕೆದಾರರು ಪ್ರಕೃತಿಗಿಂತ ಉತ್ತಮ ಚಿತ್ರಕಾರರು ಯಾರು ಇರಬಹುದು ಎಂದು ಬರೆಯಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಈ ಮಾತು 100 ರಷ್ಟು ನಿಜ. ಸರ್ವಶಕ್ತನ ಅದ್ಭುತ ಸೃಷ್ಟಿಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಗೋಸುಂಬೆ ಎಂದು ಕರೆಯಲ್ಪಡುವ ಊಸರವಳ್ಳಿಗಳು ಉದ್ದವಾದ ಬಾಲವನ್ನು ಹೊಂದಿರುತ್ತವೆ.