Asianet Suvarna News Asianet Suvarna News

Beating Retreat ceremony ಹೊಸ ದಾಖಲೆ, ಹಾರಾಡಲಿದೆ ಭಾರತದ ಸ್ಟಾರ್ಟ್ಅಪ್‌ನ 1,000 ಡ್ರೋನ್!

  • 1,000 ಡ್ರೋನ್ ಸಾಹಸ ಪ್ರದರ್ಶಿಸುವ ಜಗತ್ತಿನ 4ನೇ ದೇಶ ಭಾರತ 
  • ಜ.29 ರಂದು ನಡೆಯಲಿರುವ  ಬೀಟಿಂಗ್ ರಿಟ್ರೀಟ್ ಸೆರೆಮನಿ
  • ಗಣರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಡ್ರೋನ್ ಸಾಹಸ
Beating Retreat ceremony Indian StartUp Botlab to fly 1000 Drones commemorate 75th year of Independence ckm
Author
Bengaluru, First Published Jan 28, 2022, 7:02 PM IST

ನವದೆಹಲಿ(ಜ.28): ದೇಶದಲ್ಲಿ ಗಣರಾಜ್ಯೋತ್ಸವ(Republic Day Celebration) ಸಂಭ್ರಮಕ್ಕೆ ನಾಳೆ(ಜ.29) ತೆರೆ ಬೀಳಲಿದೆ. ಈ ವರ್ಷದಿಂದ ಜನವರಿ 23 ರಿಂದ ಭಾರತದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ, ಆಚರಣೆಗಳು ಆರಂಭಗೊಂಡಿದೆ. ನಾಳೆ ನಡೆಯಲಿರುವ ಬೀಟಿಂಗ್ ರಿಟ್ರೀಟ್ ಸೆರಮನಿ(Beating Retreat ceremony) ಸಮಾರೋಪ ಸಮಾರಂಭದ ಮೂಲಕ ಗಣರಾಜ್ಯೋತ್ಸವ ಸಂಭ್ರಮ ಅಂತ್ಯಗೊಳ್ಳಲಿದೆ. ಈ ಬಾರಿಯ ಬೀಟಿಂಗ್ ರಿಟ್ರೀಟ್ ಸೆರೆಮನಿ ವಿಶೇಷತೆ ಜೊತೆಗೆ ದಾಖಲೆ ಬರೆಯುತ್ತಿದೆ. ಈ ಸಮಾರಂಭದಲ್ಲಿ ಭಾರತೀಯ ಸ್ಟಾರ್ಟ್ಅಪ್ ಬೋಟ್ಲಾಬ್‌ನ 1,000 ಡ್ರೋನ್(Drone) ಹಾರಾಟ ನಡೆಸಲಿದೆ. 

ಬೀಟಿಂಗ್ ರಿಟ್ರೀಟ್‌ನಲ್ಲಿ 1,000 ಡ್ರೋನ್ ಸಾಹಸ ಪ್ರದರ್ಶನ ನಡೆಸುತ್ತಿರುವುದು ಇದೇ ಮೊದಲು. ಇಷ್ಟೇ ಅಲ್ಲ 1,000 ಡ್ರೋನ್ ಹಾರಾಟ ನಡೆಸುತ್ತಿರುವ ವಿಶ್ವದ ನಾಲ್ಕನೇ ದೇಶ ಭಾರತ. ಚೀನಾ, ಅಮೆರಿಕ ಹಾಗೂ ರಷ್ಯಾ 1,000 ಡ್ರೋನ್ ಹಾರಾಟ ನಡೆಸಿ ಶಕ್ತಿಪ್ರದರ್ಶನ ನಡೆಸಿದೆ. 

ಬೀಟಿಂಗ್ ರಿಟ್ರೀಟ್ ಸೆರಮನಿಗೂ ಮೊದಲು ಡ್ರೋನ್‌ಗಳ ಪ್ರಾಯೋಗಿಕ ಹಾರಾಟ ನಡೆಸಲಾಯಿತು. ಕೇಂದ್ರ ಸಚಿವ ಜೀತೇಂದ್ರ ಸಿಂಗ್(Dr Jitendra Singh), ಬೋಟ್ಲಾಬ್ ಸ್ಟಾರ್ಟ್ಅಪ್(Indian StartUp Botlab) ಕಂಪನಿಯ ಎಂಜಿನೀಯರ್ ಸೇರಿದಂತೆ ಹಲವರು ಈ ಡ್ರೋನ್ ಪ್ರಾಯೋಗಿಕ ಹಾರಾಟದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು ಜೀತೇಂದ್ರ ಸಿಂಗ್ ಡ್ರೋನ್ ಹಾರಾಟ ಪರಿಶೀಲಿಸಿದರು. 

ಬೋಟ್ಲಾಬ್ ಡ್ರೋನ್ ಅಭಿವೃದ್ಧಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಟೆಕ್ನಾಲಜಿ ಡೆವಲಪ್‌ಮೆಂಟ್ ಬೋರ್ಡ್(TDB)ಹಣಕಾಸು ನೆರವು ನೀಡಿದೆ ಎಂದರು. 2.5 ಕೋಟಿ ರೂಪಾಯಿ ನೆರವು ನೀಡಲಾಗಿದೆ.  ಭಾರತದಲ್ಲಿ ಸ್ಟಾರ್ಟ್ಅಪ್‌ಗಳಿಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಈ ಮೂಲಕ ಸುಸ್ಥಿರ, ನವೀನ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಸರ್ಕಾರ ಬದ್ಧವಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಬೋಟ್ಲಾಬ್ ಡೈನಾಮಿಕ್ಸ್ ಕಂಪನಿ 6 ತಿಂಗಳಲ್ಲಿ 1,000 ಡ್ರೋನ್ ಅಭಿವೃದ್ಧಿಪಡಿಸಿದೆ. TDBಯಿಂದ ಆರ್ಥಿಕ ನೆರವು ಪಡೆದ ಬಳಿಕ ಬೋಟ್ಲಾಬ್ ಸ್ಟಾರ್ಟ್ಅಪ್ ಕಂಪನಿಯ ಡ್ರೋನ್ ಉತ್ಪಾದನೆ ವೇಗ ಹೆಚ್ಚಾಗಿದೆ. ಈ ಡ್ರೋನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಸಾಫ್ಟ್‌ವೇರ್, ಹಾರ್ಡ್‌ವೇರ್, ಜಿಪಿಎಸ್ ಸೇರಿದಂತೆ ತಂತ್ರಜ್ಞಾನದಲ್ಲಿ ಆಧುನಿಕತೆ ತರಲಾಗಿದೆ. 

ಬೀಟಿಂಗ್ ರಿಟ್ರೀಟ್‌ನಲ್ಲಿನ 10 ನಿಮಿಷಗಳ ಕಾಲ ಡ್ರೋನ್ ಹಾರಾಟ ನಡೆಸಲಿದೆ. ಈ ವೇಳೆ ಸರ್ಕಾರದ 75 ಸಾಧನೆಯನ್ನು ಡ್ರೋನ್ ಮೂಲಕ ಆಗಸದಲ್ಲಿ ಹೇಳಲಾಗುತ್ತಿದೆ. ಕತ್ತಲ ಆಕಾಶದಲ್ಲಿ ಲೇಸರ್ ಹಾಗೂ ಲೈಟ್ ಮೂಲಕ ಸಾಧನೆಯನ್ನು ಆಗಸದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸ್ಥಳೀಯ ತಂತ್ರಜ್ಞಾನಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ವಿದೇಶಗಳಿಂದ ತಂತ್ರಜ್ಞಾನ ಆಮದು ಮಾಡಿಕೊಳ್ಳುವ ಹಾಗೂ ವಿದೇಶಗಳನ್ನು ಅವಲಂಬನೆ ತಪ್ಪಿಸಲು ಕೇಂದ್ರ ಮಹತ್ವದ ಯೋಜನೆ ಜಾರಿಗೆ ತಂದಿದೆ. 

ಸಮಯದ ಅಭಾವದಿಂದ ಡ್ರೋನ್ ಅಭಿವೃದ್ಧಿ ನಮಗೆ ಸವಾಲಾಗಿತ್ತು. ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದು ನೀಡುವ ಕೊಡುಗೆಯನ್ನು ಪರಿಗಣಿಸಿ ಈ ಯೋಜನೆ ಕೈಗೆತ್ತಿಕೊಂಡು ಕೆಲಸ ಆರಂಭಿಸಿದ್ದೇವು. ಕೇಂದ್ರದ ಸಹಕಾರದ ನೆರವಿನಿಂದ ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಡ್ರೋನ್ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು TDB ಕಾರ್ಯದರ್ಶಿ ರಾಜೇಶ್ ಕುಮಾರ್ ಪಾಠಕ್ ಹೇಳಿದ್ದಾರೆ.
 

Follow Us:
Download App:
  • android
  • ios