Asianet Suvarna News Asianet Suvarna News

ತನ್ನದೇ ಎಂಜಲಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ ಕ್ಷೌರಿಕ!

ಲಕ್ನೋದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಕ್ಷೌರಿಕನೊಬ್ಬ ತನ್ನ ಸಲೂನ್‌ ಅಂಗಡಿಗೆ ಬಂದ ಗ್ರಾಹಕನ ಮುಖಕ್ಕೆ ತನ್ನದೇ ಎಂಜಿಲಿನಿಂದ ಮಸಾಜ್ ಮಾಡಿದ್ದಾನೆ.

barber massaging a customer's face with his own spit  at Lucknow salon gow
Author
First Published Jun 16, 2024, 4:26 PM IST

ಮಧ್ಯಪ್ರದೇಶ (ಜೂ.16): ಲಕ್ನೋದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಕ್ಷೌರಿಕನೊಬ್ಬ ತನ್ನ ಸಲೂನ್‌ ಅಂಗಡಿಗೆ ಬಂದ ಗ್ರಾಹಕನ ಮುಖಕ್ಕೆ ತನ್ನದೇ ಎಂಜಿಲಿನಿಂದ ಮಸಾಜ್ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ವೈರಲ್ ಆಗಿದೆ.

ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ  ಉನ್ನಾವೋ ನಿವಾಸಿ  ಪಂಡಿತ್ ಆಶಿಶ್ ಕುಮಾರ್ ಎಂಬಾತ ಜೂನ್ 11 ರಂದು, ಕ್ಷೌರ ಮಸಾಜ್ ಮಾಡಲು ಸಲೂನ್‌ಗೆ ಹೋಗಿದ್ದರು. ಸಲೂನ್‌ನ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿ ಜೈದ್ ಅಂಗೈಗೆ ಉಗುಳುವುದು ಮತ್ತು ಎಂಜಲನ್ನು ಪಂಡಿತ್ ಗೆ ಉಜ್ಜುವುದು ಸೆರೆಯಾಗಿದೆ. ಕ್ಷೌರದ ಸಮಯದಲ್ಲಿ ಪಂಡಿತ್ ಕುಮಾರ್ ಗೆ ಇದ್ಯಾವುದೂ ಗಮನಕ್ಕೆ ಬಂದಿಲ್ಲ.

ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಗ್ಯಾಂಗ್‌, ನಕಲಿ ವೈದ್ಯನ ಫಾರ್ಮ್ ಹೌಸ್‌ನಲ್ಲಿ ಹೂತಿಟ್ಟ ಭ್ರೂಣಗಳು ವಶಕ್ಕೆ

ನಂತರ ಝೈದ್ ನ ಕೃತ್ಯದ ಬಗ್ಗೆ ಅನುಮಾನಗೊಂಡ ಕುಮಾರ್ ಸಲೂನ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಕ್ಷೌರಿಕ ತನ್ನ ಕೈಗೆ ಉಗುಳುವುದು ಮತ್ತು ಮುಖಕ್ಕೆ ಮಸಾಜ್ ಮಾಡಲು ಉಗುಳನ್ನು ಬಳಸುವುದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. 

ರೋಗಿಗಳ ಆರೈಕೆ ಮಾಡದೆ ತುಮಕೂರಿನ ಮಧುಗಿರಿ ಸರ್ಕಾರಿ ಆಸ್ಪತ್ರೆಯೊಳಗೆ ಕ್ರಿಕೆಟ್‌ ಆಡಿದ ಸಿಬ್ಬಂದಿ!

ನಂತರ, ಗ್ರಾಹಕರ ದೂರಿನ ಆಧಾರದ ಮೇಲೆ ಲಕ್ನೋ ಪೊಲೀಸರು ಜೈದ್‌ನನ್ನು ಬಂಧಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕೆ ಜೈದ್ ಈ ಕೃತ್ಯ ಎಸಗಿದ್ದಾನೆ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios