Asianet Suvarna News Asianet Suvarna News

ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ವಿಐಪಿ ದರ್ಶನಕ್ಕೆ ಭದ್ರತೆ, ಉಸಿರುಗಟ್ಟಿ ಇಬ್ಬರು ಭಕ್ತರ ಸಾವು!

ಬರೀ 800 ಜನರ ಸಾಮರ್ಥ್ಯ ಹೊಂದಿದ್ದ ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ನಿಮಿತ್ತ ಮಧ್ಯರಾತ್ರಿ 2 ಗಂಟೆಗೆ ನಡೆದ ಮಂಗಳ ಆರತಿಯನ್ನು ನೋಡಲು 50 ಪಟ್ಟು ಅಧಿಕ ಜನ ಸೇರಿದ್ದರು. ಈ ವೇಳೆ ಉಸಿರುಗಟ್ಟುವಂಥ ವಾತಾವರಣ ನಿರ್ಮಾಣವಾಗಿದ್ದರಿಂದ 50ಕ್ಕೂ ಅಧಿಕ ಭಕ್ತಾದಿಗಳು ಪ್ರಜ್ಞೆ ತಪ್ಪಿದ್ದರೆ, ಇಬ್ಬರು ಭಕ್ತಾದಿಗಳು ಸಾವು ಕಂಡಿದ್ದಾರೆ.
 

Banke Bihari temple Mathura Krashna Janmaastmi Two Pilgrims died of suffocation san
Author
Bengaluru, First Published Aug 20, 2022, 10:40 AM IST

ಮಥುರಾ (ಆ. 20): ಕೃಷ್ಣ ಜನ್ಮಾಷ್ಟಮಿಯಂದು ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಶುಕ್ರವಾರ ರಾತ್ರಿ 2 ಗಂಟೆಗೆ ಮಂಗಳ ಆರತಿ ವೇಳೆ ಇಬ್ಬರು ಭಕ್ತರು ದಾರುಣ ಸಾವು ಕಂಡಿದ್ದಾರೆ. ದೇವಸ್ಥಾನದ ಸಾಮರ್ಥ್ಯಕ್ಕಿಂತ 50 ಪಟ್ಟು ಅಧಿಕ ಜನ ಸೇರಿದ್ದರಿಂದ, ಉಸಿರುಗಟ್ಟಿ ಇವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. 6 ಮಂದಿ ಭಕ್ತರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಒಬ್ಬ ಮಹಿಳೆ ಹಾಗೂ ಪುರುಷನೊಬ್ಬ ಸಾವು ಕಂಡಿದ್ದಾರೆ. ಅಪಘಾತದ ವೇಳೆ ಅಧಿಕಾರಿಗಳು ದೇವಸ್ಥಾನದ ಮೇಲ್ಛಾವಣಿಯಲ್ಲಿ ನಿರ್ಮಿಸಿದ ಬಾಲ್ಕನಿಯಲ್ಲಿ ಕುಟುಂಬಕ್ಕೆ ವಿಐಪಿ ದರ್ಶನ ನೀಡುವಲ್ಲಿ ನಿರತರಾಗಿದ್ದರು ಎಂದು ಆರೋಪಿಸಲಾಗಿದೆ. ಉಳಿದ ಭಕ್ತಾದಿಗಳಿಗೆ ವೃಂದಾವನದ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ 800 ಜನರ ಸಾಮರ್ಥ್ಯ ಹೊಂದಿದ್ದ ಈ ದೇವಸ್ಥಾನದಲ್ಲಿ ಜನಜಂಗುಳಿ ಎಷ್ಟಿತ್ತೆಂದರೆ, 50 ಪಟ್ಟು ಅಧಿಕ ಜನ ಸೇರಿದ್ದಂರಿಂದ ಸಾಕಷ್ಟು ಜನ ಉಸಿರು ತೆಗೆದುಕೊಳ್ಳಲಾಗದೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ದೇವಾಲಯದ ಸೇವಕರ ಪ್ರಕಾರ, ಅಧಿಕಾರಿಗಳ ಸಂಬಂಧಿಕರು ಟೆರೇಸ್‌ನಲ್ಲಿ ನಿರ್ಮಿಸಲಾದ ಬಾಲ್ಕನಿಯಲ್ಲಿ ದರ್ಶನ ಪಡೆಯುತ್ತಿದ್ದರು. ಅವರ ಕುಟುಂಬದ ಸುರಕ್ಷತೆಗಾಗಿ ಅಧಿಕಾರಿಗಳು ಮೇಲಿನ ಮಹಡಿಯ ಗೇಟ್‌ಗಳನ್ನು ಮುಚ್ಚಿದರು. ಜನರ ಒತ್ತಡ ಹೆಚ್ಚಾದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.


50 ಪಟ್ಟು ಅಧಿಕ ಜನ: ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಠಾಕೂರ್‌ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಮಧ್ಯರಾತ್ರಿ 12 ಗಂಟೆಗೆ ಮಂಗಳ ಆರತಿಯನ್ನು ಮಾಡುವುದು ವಾಡಿಕೆ. ಇದಕ್ಕಾಗ ಶ್ರೀಕೃಷ್ಣನಿಗೆ ವೈಭವವಾದ ಅಲಂಕಾರವನ್ನು ಮಾಡಲಾಗುತ್ತದೆ. ಇದನ್ನು ಯಾರೂ ನೋಡಬಾರದು ಎನ್ನುವ ಕಾರಣಕ್ಕೆ ಅಲಂಕಾರ ಮಾಡುವ ವೇಳೆ ಗೇಟ್‌ಅನ್ನು ಮುಚ್ಚಲಾಗುತ್ತದೆ. ಆದರೆ, ದೇವರ ದರ್ಶನ ಪಡೆಯುವುದರೊಂದಿಗೆ ಮಂಗಳ ಆರತಿಯನ್ನು ನೋಡುವ ಸಲುವಾಗಿ ಸಾಕಷ್ಟು ಜನ ದೇವಸ್ಥಾನದ ಮುಂದೆ ಸೇರಿದ್ದರು. ಮಧ್ಯರಾತ್ರಿ 1.45ರ ಸುಮಾರಿಗೆ ದೇವಸ್ಥಾನದ ಗೇಟ್‌ಗಳನ್ನು ತೆರೆಯಲಾದರೆ, 1.55ರ ವೇಳೆಗೆ ಮಂಗಳ ಆರತಿ ಆರಂಭವಾಗಿತ್ತು. ಏಕಕಾಲದಲ್ಲಿ 800 ಭಕ್ತಾದಿಗಳನ್ನು ತಡೆಯುವ ಸಾಮರ್ಥ್ಯ ಮಾತ್ರವೇ ಈ ದೇವಸ್ಥಾನಕ್ಕಿದೆ. ಆದರೆ, ಇದರ ಸಾಮರ್ಥ್ಯವನ್ನೂ ಮೀರಿ, 50 ಪಟ್ಟು ಅಧಿಕ ಮಂದಿ ಇಲ್ಲಿ ಸೇರಿದ್ದರು. ಜನಜಂಗುಳಿಯಾದ ಕಾರಣಕ್ಕೆ ಸಾಕಷ್ಟು ಭಕ್ತಾದಿಗಳಿಗೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಕೊನೆಗೆ ಪೊಲೀಸರು ಹಾಗೂ ದೇವಸ್ಥಾನದ ಅಧಿಕಾರಿಗಳು ಮಧ್ಯಪ್ರವೇಶಿಸಿ, ಪ್ರಜ್ಞೆ ತಪ್ಪಿ ಬಿದ್ದಿದ್ದ ಭಕ್ತಾದಿಗಳನ್ನು ಹೆಗಲಿಗೆ ಕೈಕೊಟ್ಟು ಹೊರತಂದಿದ್ದರು.

ಇಬ್ಬರ ಸಾವು: ನೋಯ್ಡಾ ಸೆಕ್ಟರ್ 99 ರ ನಿವಾಸಿ ನಿರ್ಮಲಾ ದೇವಿ ಮತ್ತು ವೃಂದಾವನದ ರುಕ್ಮಣಿ ವಿಹಾರದ ಭುಲೇರಾಮ್ ಕಾಲೋನಿಯ ರಾಮಪ್ರಸಾದ್ ವಿಶ್ವಕರ್ಮ ಅವರು ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದ್ದರು. ರಕ್ಷಣಾ ತಂಡ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ರಾಮ್‌ ಪ್ರಸಾದ್‌ ಮೃತಪಟ್ಟಿದ್ದರೆ, ನಿರ್ಮಲಾ ದೇವಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ರಾಮ್‌ ಪ್ರಸಾದ್‌ ಮೂಲತಃ ಜಬಲ್ಪುರದವರಾಗಿದ್ದಾರೆ.

Lord Krishna Muslim Devotee ಮಥುರಾದ ಶ್ರೀಕೃಷ್ಣ ಭಕ್ತ ಸೈಯದ್ ಇಬ್ರಾಹಿಂ ಸಮಾಧಿಗೆ ಯೋಗಿ ಆದಿತ್ಯನಾಥ್ ಭೇಟಿ!

ಪರಿಸ್ಥಿತಿ ಹದಗೆಟ್ಟ ಬಳಿಕ ಪೊಲೀಸ್‌ ಎಂಟ್ರಿ: ಮಥುರಾದ 3 ಆಸ್ಪತ್ರೆಗಳಲ್ಲಿ ಭಕ್ತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನದಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಡಿಎಂ, ಎಸ್‌ಎಸ್‌ಪಿ, ಮುನ್ಸಿಪಲ್ ಕಮಿಷನರ್ ಸೇರಿದಂತೆ ಇಡೀ ಪೊಲೀಸ್ ಪಡೆ ಹಾಜರಿತ್ತು. ಕೆಲವು ಇದರ ವೀಡಿಯೋಗಳು ಕೂಡ ಹೊರಬಿದ್ದಿದ್ದು, ಇದರಲ್ಲಿ ಅಧಿಕಾರಿಗಳು ತಮ್ಮ ಕುಟುಂಬದ ಸದಸ್ಯರಿಗೆ ಮೊಬೈಲ್‌ನಲ್ಲಿ ವಿಐಪಿ ದರ್ಶನ ನೀಡುತ್ತಿರುವುದನ್ನು ಕಾಣಬಹುದು. ಅಧಿಕಾರಿಗಳು ಟೆರೇಸ್‌ನ ಬಾಲ್ಕನಿಯಲ್ಲಿದ್ದರೆ, ಕೆಳಗಿನ ಭಕ್ತರು ತಳ್ಳಿಕೊಂಡು ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿ ಹದಗೆಟ್ಟ ನಂತರ ಪೊಲೀಸರು ಮತ್ತು ಪಿಎಸಿ ಸಿಬ್ಬಂದಿ ದೇವಸ್ಥಾನದಿಂದ ಮೂರ್ಛೆ ಹೋಗುತ್ತಿದ್ದ ಜನರನ್ನು ಸ್ಥಳಾಂತರಿಸಲು ಆರಂಭಿಸಿದರು. ಭಕ್ತರನ್ನು ವೃಂದಾವನದ ರಾಮ್ ಕೃಷ್ಣ ಮಿಷನ್ ಆಸ್ಪತ್ರೆ, ಬ್ರಜ್ ಹೆಲ್ತ್ ಕೇರ್ ಮತ್ತು 100 ಬೆಡ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಪೂಜಾ ಸ್ಥಳಗಳ ಕಾಯ್ದೆ ಅನ್ವಯವಾಗೋದಿಲ್ಲ ಎಂದ ಮಥುರಾ ಕೋರ್ಟ್!

ಹಿಂದೂ ನಡೆದಿತ್ತು ಘಟನೆ: ಇನ್ನು ಬಂಕೆ ಬಿಹಾರಿ ದೇವಸ್ಥಾನದಲ್ಲಿ ಈ ರೀತಿಯ ಅವಗಢ ನಡೆಯುವುದು ಇದು ಮೊದಲೇನಲ್ಲ. ಹಾಗಿದ್ದರೂ, ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಕಾರ್ಯ ನಿರ್ವಹಿಸಿಲ್ಲ. ಕಳೆದ ಫೆಬ್ರವರಿ ಹಾಗೂ ಮಾರ್ಚ್‌ನಲ್ಲೂ ಅವಗಢ ಸಂಭವಿಸಿದ್ದರೂ, ಇಬ್ಬರು ಭಕ್ತಾದಿಗಳು ಉಸಿರುಗಟ್ಟಿ ಸಾವು ಕಂಡಿದ್ದರು.
 

Follow Us:
Download App:
  • android
  • ios